ಕರ್ನಾಟಕ

ಮೊದಲ ಪ್ರಯತ್ನದಲ್ಲೇ ಎವರೆಸ್ಟ್ ಏರಿದ ಹುಬ್ಬಳ್ಳಿ ಹುಡುಗಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹುಬ್ಬಳ್ಳಿ : ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಯುವತಿಯೊಬ್ಬಳು ಎವರೆಸ್ಟ್ ಏರಿದ್ದಾಳೆ. ಆ ಮೂಲಕ ಹುಬ್ಬಳ್ಳಿ ಕೇವಲ ಗಂಡು ಮೆಟ್ಟಿದ ನಾಡು ಮಾತ್ರವಲ್ಲ ಇಲ್ಲಿ ಹುಟ್ಟುವ ಹೆಣ್ಣು ಮಕ್ಕಳು ಕೂಡ ಗಂಡೆದೆಯವರು ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ.

nandita photo

ಚಿಕ್ಕಂದಿನಿಂದಲೂ ಸಾಹಸ ಕ್ರೀಡೆಯಲ್ಲಿ ಆಸಕ್ತಿ

ಚಿಕ್ಕಂದಿನಿಂದಲೂ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ನಂದಿತಾ, ಸುಮಾರು 8 ಸಾವಿರ ಮೀಟರ್ ಎತ್ತರದ ದಕ್ಷಿಣ ವಿಭಾಗದ ಹಿಮಾಲಯ ಪರ್ವತ ಏರಿ ಸಾಧನೆ ಮಾಡಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ ಹೊಂದಿದ್ದ ನಂದಿತಾ, ತಮ್ಮ ಜೀವನದಲ್ಲಿ ಅದ್ಭುತ ಸಾಧನೆಯನ್ನೇ ಮಾಡಿದ್ದಾರೆ. ತಮ್ಮ ಆರು ಸ್ನೇಹಿತರೊಂದಿಗೆ ಮೌಂಟ್ ಎವರೆಸ್ಟ್ ಏರಲು ಆರಂಭಿಸಿದ ನಂದಿತಾ 8ಸಾವಿರ ಮೀಟರ್ ಕ್ರಮಿಸಿ ತಮ್ಮ ಗುರಿ ತಲುಪಿದ್ದರು.

ಇವರೊಂದಿಗೆ ಅಮೇರಿಕಾದ  ಇಬ್ಬರು ಸ್ನೇಹಿತರೂ ಕೈ ಜೋಡಿಸಿದ್ದರು. ಇದೊಂದು ಅದ್ಭುತ ಅನುಭವ ಎಂದು ಹೇಳುವ ನಂದಿತಾ, ಒಬ್ಬರೇ ಶಿಖರ ಏರುವುದು ಬಹಳ ಕಷ್ಟ, ಆದರೆ ಜೊತೆಯಲ್ಲಿ ಸಂಗಡಿಗರೂ ಇದ್ದರೆ ಶಿಖರ ಏರುವುದು ಕಷ್ಟದ ವಿಷಯವೇನಲ್ಲ ಎನ್ನುತ್ತಾರೆ.

ಪೂರ್ವ ತರಬೇತಿ ಅಗತ್ಯ

ಮೌಂಟ್ ಎವರೆಸ್ಟ್ ಏರಲು ಇಚ್ಛಿಸುವವರು ಪೂರ್ವ ತರಬೇತಿ ಪಡೆದುಕೊಳ್ಳುವುದು ಉತ್ತಮ ಎಂಬುದು ನಂದಿತಾ ಅಭಿಪ್ರಾಯ. ಮೌಂಟ್ ಎವರೆಸ್ಟ್ ಏರುವ ಇವರ ನಿರ್ಧಾರಕ್ಕೆ ತಾಯಿ ಕಸ್ತೂರಿ ಮೊದಲು ವಿರೋಧ ವ್ಯಕ್ತಪಡಿಸಿದ್ದರು ಆದರೆ ಇದೀಗ ಮಗಳ ಸಾಧನೆಗೆ ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top