fbpx
Karnataka

ವಿಶನ್ ಗ್ರೂಪ್‍ನ ಅವಶ್ಯಕತೆ

ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಬೆಂಗಳೂರು ಪ್ರಮುಖವಾದದ್ದು. ನಗರದ ಬೆಳವಣಿಗೆ ವೇಗ ಪಡೆದುಕೊಂಡಂತೆಲ್ಲ, ಸಮಸ್ಯೆಗಳೂ ಬೆಟ್ಟದಂತೆ ಏರುತ್ತಾ ಹೋಗುತ್ತವೆ. ತ್ಯಾಜ್ಯ ನಿರ್ವಹಣೆ, ಟ್ರಾಫಿಕ್ ಜಾಮ್, ನೀರಿನ ಅಭಾವ, ವಿದ್ಯುತ್ ಸಮಸ್ಯೆ, ಮಾಲಿನ್ಯ ಹೀಗೆ ತರಹೇವಾರಿ ಸಮಸ್ಯೆಗಳು ಎದುರಾಗುತ್ತಾ ಹೋಗುತ್ತವೆ. “ಏನ್ರಿ ಇದು, ಇಷ್ಟೊಂದು ಸಮಸ್ಯೆ ಇದೆ, ಸರ್ಕಾರ ಗಮನಾನೇ ಕೊಡ್ತಾ ಇಲ್ವಲ್ರೀ” ಎಂದು ರಾಗ ಎಳೆಯುವವರಿಗೇನೂ ಕಡಿಮೆಯಿಲ್ಲ. ಆದರೆ ಆಡಳಿತಾರೂಢ ಸರ್ಕಾರಕ್ಕೆ ಹಲವು ಜವಾಬ್ದಾರಿಗಳ ನಡುವೆ ಇದೂ ಒಂದು ಎಂಬ ಅರಿವು ರಾಗ ಎಳೆಯುವವರಿಗಿರುವುದಿಲ್ಲ, ಬದಲಿಗೆ ಬರೀ ಅವರ ಕಾಲಬುಡದಲ್ಲಿರುವ ಸಮಸ್ಯೆಯನ್ನು ನೋಡುತ್ತಾ ಕೂರುವುದು ಸರ್ಕಾರದ ಕೆಲಸ ಎಂಬಂತೆ ಮಾತಿನ ಧಾಟಿಯಿರುತ್ತದೆ.

ಬೆಂಗಳೂರು ಬೆಳವಣಿಗೆಯ ದಾಪುಗಾಲಿಡುತ್ತಿರುವಂತೆಯೇ ದೂರಗಾಮಿ ಯೋಜನೆಗೆ ಸಾಂಸ್ಥಿಕ ಸ್ವರೂಪದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (B.D.A), ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (B.M.R.D.A), ಮತ್ತು ಮಹಾನಗರ ಯೋಜನಾ ಸಮಿತಿ (M.P.C) ಎನ್ನುವ ಮೂರು ಪ್ರಾಧಿಕಾರಗಳು ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಬಿ.ಎಂ.ಪಿ.ಸಿ ಇತ್ತೀಚೆಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಆದರೆ ಅದರ ಕೆಲಸವನ್ನು ಪರಿಣಾಮಕಾರಿಯಾಗಿಸಲು ಎಲ್ಲ ರೀತಿಯ ತಯಾರಿ ಮಾಡಲಾಗಿದೆ. ಅದರಲ್ಲಿ ಪ್ರಮುಖವಾದದ್ದು ‘ಬೆಂಗಳೂರು ನೀಲನಕ್ಷಾ ಕ್ರಿಯಾ ತಂಡ’ (B.B.P.A.G).

ವಿಶನ್ ಗ್ರೂಪ್ ಎಂದು ಕರೆಯಲ್ಪಡುವ ಬಿ.ಬಿ.ಪಿ.ಎ.ಜಿ, ಬೆಂಗಳೂರಿನ ಸಮಗ್ರ ಅಭಿವೃದ್ಧಿ ಯೋಜನೆ ತಯಾರಿಸುವಂತಹ ಮಹತ್ತರ ಜವಾಬ್ದಾರಿ ಹೊಂದಿದೆ. ಬಿ.ಎಂ.ಪಿ.ಸಿ ಯಲ್ಲಿ ಬರಿ ಕನ್ನಡದ ಗಂಧ ಗಾಳಿ ಗೊತ್ತಿಲದ ಉದ್ಯಮಶೀಲರು ತುಂಬಿದ್ದಾರೆ. ಬೆಂಗಳೂರು ಅಭಿವೃದ್ಧಿ ಪಥದಲ್ಲಿ ಯಶಸ್ವಿಯಾಗಿ ಸಾಗಲು, ಸಮಗ್ರ ಬೆಳವಣಿಗೆ ಹೊಂದಲು ಸರಿಯಾದ ಯೋಜನೆ ಬೇಕಾಗುತ್ತದೆ. ಅದನ್ನು ಸಿದ್ಧಪಡಿಸಲು ವಿಶನ್‍ಗ್ರೂಪ್ ಅತ್ಯಂತ ಸಹಾಯಕವಾಗಿದೆ. ವಿಶನ್ ಗ್ರೂಪ್ ನೀಡುವ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಬಿ.ಎಂ.ಪಿ.ಸಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಅಂಗೀಕರಿಸುತ್ತದೆ. ಆದ್ದರಿಂದ ಈ ವಿಶನ್‍ಗ್ರೂಪನಲ್ಲಿ ಇರಬೇಕಾದ ಆಯುಕ್ತರು ಪೊಲೀಸ್, ಅಗ್ನಿ ಶಾಮಕದಳ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(B.W.S.S.B). ಸಾರ್ವಜನಿಕ ಸಾರಿಗೆ ಮತ್ತು ವಿದ್ಯುತ್ ಪ್ರಯೋಜನಗಳಿಗೆ ಅವಕಾಶ ಕೊಟ್ಟರೆ, ವಿಶನ್‍ಗ್ರೂಪ್ನ ಕಾರ್ಯನಿರ್ವಹಣೆ ಬೆಂಗಳೂರಿನ ಅಭಿವೃದ್ಧಿಗೆ-ಪ್ರಗತಿಗೆ ಸಹಾಯಕವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿಶನ್ ಗ್ರೂಪ್‍ನ ಅವಶ್ಯಕತೆ ಇಂತಿದ್ದರೂ, ಸರ್ಕಾರ ಯೋಗ್ಯವ್ಯಕ್ತಿಗಳನ್ನು ಈ ವಿಶನ್‍ಗ್ರೂಪ್ ಆಯಿಕೆ ಮಾಡಬೇಕೆಂದು Newsism ತಂಡ ಸರ್ಕಾರಕ್ಕೆ ಆಗ್ರಹಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top