ಕರ್ನಾಟಕ

ಫೇಸ್‌ಬುಕ್‌ನಲ್ಲಿ ಜೆಡಿಎಸ್‌ ಶಾಸಕರ ತಿಥಿ ಕಾರ್ಡ್‌!

ಮಂಡ್ಯ: ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಜೆಡಿಎಸ್‌ನಿಂದ ಅಮಾನತುಗೊಂಡ ಶಾಸಕರಾದ ಎನ್‌.ಚಲುವರಾಯಸ್ವಾಮಿ ಹಾಗೂ ರಮೇಶ್‌ ಬಂಡಿಸಿದ್ದೇಗೌಡ ಅವರ ತಿಥಿ ಕಾರ್ಡ್‌ ಫೇಸ್‌ಬುಕ್‌ನಲ್ಲಿ ಫೇಮಸ್‌ ಆಗಿದೆ.

ಜೆಡಿಎಸ್‌ ಬೆಂಬಲಿಗ ಹಾಗೂ ದೇವೇಗೌಡರ ಅಭಿಮಾನಿ ಮೈಸೂರಿನ ಸತೀಶ್‌ಗೌಡ ಎಂಬುವವರು ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಈ ಬಂಡಾಯ ಶಾಸಕರ ತಿಥಿ ಕಾರ್ಡ್‌ ಪ್ರಕಟಿಸಿದ್ದಾರೆ.ತಿಥಿಗೆ ಬನ್ನಿ, ಇಂತಿ ದುಖಃತಪ್ತ ಜೆಡಿಎಸ್‌ ಕಾರ್ಯಕರ್ತರು ಎಂಬ ಸಾಲನ್ನು ಕಾರ್ಡ್‌ ಜೊತೆಗೆ ಬರೆದು ಪ್ರಕಟಿಸಿದ್ದಾರೆ.

ಕಾರ್ಡ್‌ನಲ್ಲಿ ರಮೇಶ್‌ ಬಂಡಿಸಿದ್ದೇಗೌಡ ಹಾಗೂ ಎನ್‌.ಚಲುವರಾಯಸ್ವಾಮಿ ಚಿತ್ರವಿದ್ದು, ಉತ್ತರ ಕ್ರಿಯಾದಿ ಭೂ ಶಾಂತಿ ಆಹ್ವಾನ ಪತ್ರಿಕೆ ಎಂಬ ಹೆಡ್ಡಿಂಗ್‌ ನೀಡಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ ನಾಗಮಂಗಲ ಹಾಗೂ ಶ್ರೀರಂಗಪಟ್ಟಣದ ಜೆಡಿಎಸ್‌ ಶಾಸಕರು, ಕಾಂಗ್ರೆಸ್‌ನ ಹೇಸಿಗೆ ತಿಂದು ನರಕಾಧೀನರಾಗಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆ ದಿನ ಇವರ ತಿಥಿ ಎಂದು ಕಾರ್ಡ್‌ನಲ್ಲಿ ಬರೆಯಲಾಗಿದೆ.

ಅಡ್ಡ ಮತದಾನ ಮಾಡಿರುವ ಜೆಡಿಎಸ್ ಭಿನ್ನಮತೀಯ ಶಾಸಕದ್ವಯರಾದ ನಾಗಮಂಗಲದ ಎನ್.ಚಲುವರಾಯಸ್ವಾಮಿ ಮತ್ತು ಶ್ರೀರಂಗಪಟ್ಟಣದ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.  ಇಬ್ಬರು ಶಾಸಕರ ತಿಥಿ ಕಾರ್ಡ್ ತಯಾರಿಸಿ, ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದಾರೆ. ಇಷ್ಟಲ್ಲದೆ, ಇಬ್ಬರ ರಾಜೀನಾಮೆಗೆ ಆಗ್ರಹಿಸಿ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ಹಣಕ್ಕಾಗಿ ಶಾಸಕ ಸ್ಥಾನವನ್ನು ಮಾರಿಕೊಂಡು ನೆಲೆ ಕಲ್ಪಿಸಿ ಅ ಧಿಕಾರ ನೀಡಿದ ಪಕ್ಷಕ್ಕೆ ದ್ರೋಹ ಬಗೆದಿರುವ ಇಬ್ಬರು ಶಾಸಕರನ್ನು ಉಚ್ಛಾಟಿಸಬೇಕೆಂದು ಆಗ್ರಹಿಸಿ ಯುವ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Source: Facebook

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top