ಸಮಾಚಾರ

ಮದುವೆಯಾಗಲು ಒಪ್ಪದ ಪ್ರಿಯಕರನಿಗೆ ಆಸಿಡ್ ಎರಚಿದ ಮಹಿಳೆ ..!

ಇಸ್ಲಾಮಾಬಾದ್: ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ವಿಶ್ವದಲ್ಲೇ ಕುಖ್ಯಾತಿ ಪಡೆದಿರುವ ಪಾಕಿಸ್ತಾದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಭಾರೀ ಸಂಚಲನ ಮೂಡಿಸಿದೆ. ತನ್ನ ಮದುವೆಯಾಗಲು ನಿರಾಕರಿಸಿದ್ದ ತನ್ನ ಪ್ರಿಯಕರ ಸಾಧಿಕ್ ಆಲಿ ವಿರುದ್ದ ರೊಚ್ಚಿಗೆದ್ದ 32 ಹರೆಯದ ಮಹಿಳೆ ಮೋನಿಲ್ ಮಾಯ್ ಎಂಬಾಕೆ ಆತನ ಮುಖಕ್ಕೆ ಆಸಿಡ್ ಹಾಕಿದ್ದಾಳೆ. ಮಧ್ಯಪಾಕಿಸ್ತಾನದ ಪೂರ್ವ ಪಂಜಾಬ್ ವಲಯದ ಮುಲ್ತಾನ್ನಲ್ಲಿರುವ ಅಲಿ ಮನೆಗೆ ನುಗ್ಗಿ ಈ ಕೃತ್ಯ ನಡೆಸಿದ್ದಾಳೆ. ಪ್ರಸ್ತುತ ಆಕೆಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಬಷೀರ್ ಅಹಮ್ಮದ್ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಆಲಿ ವಿರೋಧ ವ್ಯಕ್ತಪಡಿಸಿದ್ದ ಎಂದು ಹೇಳಲಾಗಿದೆ.
ಪ್ರಸ್ತತ ಆಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Source: dailyhunt

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top