ಸಮಾಚಾರ

ಟಾರ್ಚ್ ಬೆಳಕಿನಲ್ಲಿ ಆಪರೇಷನ್ ಮಾಡಿದ ವೈದ್ಯರು

ಆಸ್ಪತ್ರೆಗೆ ಹೋದವರು ಸುರಕ್ಷಿತವಾಗಿ ಮನೆಗೆ ವಾಪಸ್ ಬರುವ ಕುರಿತು ಆತಂಕವಿರುತ್ತದೆ. ಗ್ವಾಲಿಯರ್ ಕಮಲಾರಾಜ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಇಬ್ಬರು ಮಹಿಳೆಯರ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಆಪರೇಷನ್ ಥಿಯೇಟರ್ ನಲ್ಲಿ ಇಬ್ಬರಿಗೂ ವೈದ್ಯರು ಆಪರೇಷನ್ ಮಾಡ್ತಿದ್ದರು. ಅಚಾನಕ್ ಕರೆಂಟ್ ಹೋಗಿದೆ. ತಕ್ಷಣ ವಾರ್ಡ್ ಬಾಯ್ ಗೆ ಜನರೇಟರ್ ಆನ್ ಮಾಡುವಂತೆ ವೈದ್ಯರು ಹೇಳಿದ್ದಾರೆ. ಆದ್ರೆ ಜನರೇಟರ್ ರೂಂಗೆ ಹೋದ ವಾರ್ಡ್ ಬಾಯ್ ಬರಿಗೈನಲ್ಲಿ ವಾಪಸ್ ಆಗಿದ್ದಾನೆ.

ಜನರೇಟರ್ ರೂಂ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ರೂಂ ಗೆ ಬೀಗ ಹಾಕಿ ಎಲ್ಲಿಗೋ ಹೋಗಿದ್ದಾನೆ. ಇದರಿಂದ ವೈದ್ಯರು ಕಂಗಾಲಾಗಿದ್ದಾರೆ. ಮಹಿಳೆಯರಿಗೆ ಅರ್ಧ ಆಪರೇಷನ್ ಆಗಿದ್ದರೆ, ಹೊರಗಡೆ ಸಂಬಂಧಿಕರ ಕೂಗಾಟ ಜೋರಾಗ್ತಿದೆ. ತಕ್ಷಣ ಬುದ್ದಿ ಉಪಯೋಗಿಸಿದ ವೈದ್ಯರು ಬ್ಯಾಟರಿ ಹಿಡಿದುಕೊಳ್ಳುವಂತೆ ನರ್ಸ್ ಗಳಿಗೆ ಹೇಳಿ, ಅದ್ರ ಬೆಳಕಿನಲ್ಲಿಯೇ ಆಪರೇಷನ್ ಮುಂದುವರೆಸಿದ್ದಾರೆ. ಸುಮಾರು 20 ನಿಮಿಷಗಳ ನಂತ್ರ ಲೈಟ್ ಬಂದಿದೆ. ಈ ಬಗ್ಗೆ ವೈದ್ಯರು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಪ್ರಕರಣದ ಬಗ್ಗೆ ವಿಚಾರಣೆ ಶುರುವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top