ತಿಂಡಿ ತೀರ್ಥ

ಮಳೆಗಾಲದಲ್ಲಿ ಸಂಜೆ ಬಾಯಿಗೆ ರುಚಿಯಾದ ಕುರುಂ ಕರುಂ ಮಂಡಕ್ಕಿ !

ಮಳೆಗಾಲದಲ್ಲಿ ಮೈಯೆಲ್ಲಾ ಒದ್ದೆಯಾಗಿ ಮನೆಯೊಳಗೆ ಬಂದ ಕೂಡಲೇ ಏನಾದರೂ ತಿನ್ನಬೇಕೆನಿಸಿದರೆ ಇಲ್ಲಿದೆ ನೋಡಿ ಕುರುಂ ಕುರುಂ ಮಂಡಕ್ಕಿ. ಇಂಥ ತಿನಿಸು ಬಾಯಿಗೆ ರುಚಿ, ಜೊತೆಗೆ ಮಾಡಲು ಸುಲಭ.

Bhel puri

 

ಬೇಕಾಗುವ ಸಾಮಗ್ರಿಗಳು: ಅಗತ್ಯಕ್ಕೆ ತಕ್ಕಂತೆ ಮಂಡಕ್ಕಿ, ಹುರಿದ ಕರಿಬೇವು, ಕಡಲೆಬೀಜ, ಬೆಳ್ಳುಳ್ಳಿ, ಕೊಬ್ಬರಿ ತುಂಡು, ಉಪ್ಪು, ಅರಿಶಿನ ಹಾಗೂ ಖಾರದ ಪುಡಿ.

ತಯಾರಿಸುವುದು ಹೀಗೆ: ಗಟ್ಟಿಯಾಗಿರುವ ಮಂಡಕ್ಕಿ ಯನ್ನು ಮೊದಲಿಗೆ ಎಣ್ಣೆಯಲ್ಲಿ ಕರಿಯಿರಿ. ಅದನ್ನು ಪೇಪರ್ ಮೇಲೆ ಹರಡಿ, ಎಣ್ಣೆ ಅಂಶ ತೆಗೆಯಿರಿ, ಬಾಣಲೆಗೆ ಮಂಡಕ್ಕಿ  ಹಾಕಿ, ಹುರಿದ ಕರಿಬೇವು, ಹುರಿಗಡಲೆ, ಕಡಲೆ ಬೀಜ, ಬೆಳ್ಳುಳ್ಳಿ, ಕೊಬ್ಬರಿ ತುಂಡು, ಉಪ್ಪು, ಅರಿಶಿನ, ಖಾರದ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ ಅದನ್ನು ಡಬ್ಬಿಯಲ್ಲಿ ಹಾಕಿ ಇಡಿ.

ಬೇಕೆಂದಾಗ ತಿನ್ನಿ, ಅದು ತಿಂಗಳವರೆಗೂ ಕೆಡುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top