ಸಮಾಚಾರ

ಮಸಾಜ್ ಮಾಡಿಸಿಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚೀನಾದಲ್ಲಿ ‘ಕಪ್ ಥೆರಪಿ’ ಮಸಾಜ್ ತುಂಬ ಪ್ರಾಚೀನವಾದುದು. ತನ್ನ ಭುಜದಲ್ಲಿರುವ ನೋವನ್ನು ಹೋಗಲಾಡಿಸಲು ಕಪ್ ಥೆರಪಿ ಮಾಡಿಸಿಕೊಂಡವನ ಕತೆ ಏನಾಯಿತು ನೀವೇ ನೋಡಿ.

massage effects

ಒಬ್ಬ ವ್ಯಕ್ತಿ ತನ್ನ ಭುಜದ ಚಿಕಿತ್ಸೆಗಾಗಿ ಕಪ್ ಥೆರಪಿಯ ಮೊರೆ ಹೋಗಿದ್ದಾನೆ. ಚೀನಾದ ಚೆಂಗುಡುವಿನಲ್ಲಿರುವ ಮಸಾಜ್ ಸೆಂಟರ್ ಒಂದರಲ್ಲಿ ಕಪ್ ಥೆರಪಿ ಮಾಡಿಸಿಕೊಂಡಿದ್ದಾನೆ.

ಕಪ್ ಥೆರಪಿ ಮಾಡಿಸಿಕೊಂಡು ಒಂದು ತಿಂಗಳಾದ ನಂತರ ಚಿಕಿತ್ಸೆಗೊಳಗಾದ ವ್ಯಕ್ತಿಗೆ ತನ್ನ ಆರೋಗ್ಯದಲ್ಲಿ ವ್ಯತ್ಯಾಸವುಂಟಾಗಿದ್ದು ಕಂಡುಬಂತು. ನಂತರದಲ್ಲಿ ಅವನು ತೀವ್ರವಾದ ಜ್ವರ ಮತ್ತು ಬೆನ್ನು ನೋವಿನಿಂದ ಬಳಲಿದ್ದಾನೆ.

ಕಪ್ ಥೆರಪಿ ಮಾಡಿಸಿಕೊಂಡಿದ್ದರಿಂದ ಬೆನ್ನ ಮೇಲೆ 7 ದೊಡ್ಡ ದೊಡ್ಡ ಗುಳ್ಳೆಗಳಂತಾಗಿ ಚರ್ಮ ಒಡೆದುಹೋಗಿತ್ತು. ತನ್ನ ಬೆನ್ನಿನ ಸ್ಥಿತಿ ನೋಡಿ ಕಂಗಾಲಾದ ವ್ಯಕ್ತಿ ಡಾಕ್ಟರ್ ಬಳಿ ಹೋದಾಗ ಅವನಿಗೆ ಇನ್ ಫೆಕ್ಷನ್ ಆಗಿರುವುದು ತಿಳಿಯಿತು. ಕಪ್ ಥೆರಪಿ ಮಾಡುವಾಗ ಬೆನ್ನ ಮೇಲೆ ಎಲ್ಲೆಲ್ಲಿ ಕಪ್ ಗಳನ್ನು ಇಡಲಾಗಿತ್ತೋ, ಅದೇ ಜಾಗದಲ್ಲಿ ದೊಡ್ಡ ಗಾಯವಾಗಿತ್ತು.

ಕಪ್ ಥೆರಪಿಯಲ್ಲಿ ಕಪ್ ಗಳನ್ನು ಬಿಸಿ ಮಾಡಿ ನೋವಿರುವ ಜಾಗದಲ್ಲಿ ಇಟ್ಟು ಮಸಾಜ್ ಮಾಡುತ್ತಾರೆ. ಚಿಕಿತ್ಸೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇಂತಹ ಅನಾಹುತ ಕಟ್ಟಿಟ್ಟ ಬುತ್ತಿ. ಅದೇನೇ ಆದರೂ ಮಸಾಜ್ ಮಾಡಿಸಿಕೊಳ್ಳುವುದರಿಂದ ದೇಹದ ನೋವು ದೂರವಾಗುತ್ತದೆಂದು ಯಾವುದೋ ಚಿಕಿತ್ಸೆಗೆ ಒಡ್ಡಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

ನಮ್ಮಲ್ಲಿ ಜನಪ್ರಿಯ

To Top