ಮಾಹಿತಿ

ರೈಲು ಪ್ರಯಾಣಿಕರಿಗಿನ್ನು ನಿದ್ದೆ ನಿಶ್ಚಿಂತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಊರು ಸಮೀಪಿಸುತ್ತಿದ್ದಂತೆಯೇ ಬರಲಿದೆ ಮೊಬೈಲ್‌ಗೆ ಕರೆ | ಪ್ರಯಾಣಿಕರ ನೆರವಿಗೆ ಕಾಲ್ ಡೆಸ್ಟಿನೇಷನ್ ಅಲರ್ಟ್ ಸೇವೆ

ರಾತ್ರಿ ಹೊತ್ತು ರೈಲಿನಲ್ಲಿ ಪ್ರಯಾಣಿಸುವಾಗ ನಿದ್ದೆಗೆಟ್ಟು ಊರು ಯಾವಾಗ ಬರುತ್ತದೆ ಎಂದು ಕಾಯುವ ಜರೂರತ್ತು ಇನ್ನು ಮುಂದೆ ಬಾರದು. ನಿಮ್ಮ ಊರು ಸಮೀಪ ಬರುತ್ತಿದ್ದಂತೆಯೇ ನಿಮ್ಮ ಮೊಬೈಲಿಗೆ ಕರೆ ಮಾಡಿ ಎಚ್ಚರಿಸುವ ‘ಕಾಲ್ ಡೆಸ್ಟಿನೇಷನ್ ಅಲರ್ಟ್’ ಸೇವೆಯನ್ನು ರೈಲ್ವೆ ಇಲಾಖೆ ಜಾರಿಗೆ ತಂದಿರುವುದರಿಂದ ನಿಶ್ಚಿಂತೆ­ಯಿಂದ ನಿದ್ದೆ ಮಾಡಬಹುದು.

Sleeper-class

ದೂರದ ಪ್ರಯಾಣದ ವೇಳೆ ಮಧ್ಯರಾತ್ರಿಯಲ್ಲಿ ಊರು ಬರುವುದಿದ್ದರೆ ಪ್ರಯಾಣಿಕರು ರಾತ್ರಿ ಪೂರ್ತಿ ನಿದ್ದೆಗೆಟ್ಟು ಕಾಯುತ್ತಾ ಕುಳಿತುಕೊಳ್ಳುವುದು ಸಾಮಾನ್ಯ. ಕೆಲವರು ನಿದ್ರೆಗೆ ಜಾರಿ ಮುಂದಿನ ಸ್ಟೇಷನ್ ತಲುಪಿ ಪರದಾಡಿದ್ದೂ ಉಂಟು. ಇಂಥ ಸಮಸ್ಯೆ­ಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ ಕಾಲ್ ಡೆಸ್ಟಿನೇಷನ್ ಅಲರ್ಟ್ ಸೇವೆಯಮೂಲಕ ಪ್ರಯಾಣಿಕರಿಗೆ ಪರಿಹಾರ ಕಲ್ಪಿಸಿದೆ.

ಕರೆ ಬರುತ್ತದೆ: ಇಷ್ಟು ಮಾಡಿ ಹಾಯಾಗಿ ನಿದ್ರೆಗೆ ಜಾರಬಹುದು. ಊರು ಸಮೀಪ ಬರುವುದಕ್ಕೂ ಅರ್ಧ ಗಂಟೆ ಮೊದಲು ಮೊಬೈಲ್‌ಗೆ ಕರೆ ಬರುತ್ತದೆ. ಕರೆ ರಿಸೀವ್ ಮಾಡುವರೆಗೂ ನಿರಂತರವಾಗಿ ರಿಂಗ್ ಆಗುತ್ತಲೇ ಇರುತ್ತದೆ. ಕರೆ ಸ್ವೀಕರಿಸಿದಾಗ ಊರು ಹತ್ತಿರ ಬರುತ್ತಿರುವುದಾಗಿ ಮೊಬೈಲ್‌ನಲ್ಲಿ ಮಾಹಿತಿ ನೀಡಲಾಗುತ್ತದೆ.

ಕರೆ, ಎಸ್‌ಎಂಎಸ್‌ಗೆ ದರ: ಈ ಸೇವೆ ದೇಶವ್ಯಾಪಿ ಲಭ್ಯವಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆಯ ವರೆಗೆ ಸೇವೆಯ ಲಾಭ ಪಡೆಯಬಹು­ದಾಗಿದೆ. 139ಗೆ ಮಾಡುವ ಕರೆಗೆ ಪ್ರತಿ ನಿಮಿಷಕ್ಕೆ 1.20 ಪೈಸೆ ಹಾಗೂ ಎಸ್‌ಎಂಎಸ್‌ಗೆ 3 ರು. ವಿಧಿಸಲಾಗುತ್ತದೆ. ಸಾಮಾನ್ಯ ಕರೆ ಹಾಗೂ ಎಸ್‌ಎಂಎಸ್‌ಗೆ ಹೋಲಿಸಿದಾಗ ಈ ದರ ತುಸು ಹೆಚ್ಚು ಎನಿಸಿ ದರೂ, ಸ್ಟೇಷನ್ ಯಾವಾಗ ಬರುತ್ತದೆ ಎಂದು ಕಾಯುತ್ತಾ ಕುಳಿಯುವುದಕ್ಕಿಂತ ಒಳಿತ್ತಲ್ಲವೆ.

ಹೆಚ್ಚಿದ ಬೇಡಿಕೆ:ಕಾಲ್ ಡೆಸ್ಟಿನೇಷನ್ ಅಲರ್ಟ್ ಸೇವೆ ರೈಲ್ವೆ ಪ್ರಯಾಣಿಕರಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ. ಇದನ್ನು ಬಳಸುವ ವಿಧಾನದ ಬಗ್ಗೆ ಎಲ್ಲರೂ ಕೇಳುವವರೆ. ಇಂಥದೊಂದು ಉತ್ತಮ ಸೇವೆ ಲಭ್ಯವಾಗಿರುವ ಬಗ್ಗೆ ಪ್ರಯಾಣಿಕರು ಖುಷಿಯಾಗಿದ್ದಾರೆ. ಈಗಾಗಲೇ ಸೇವೆ ಚಾಲ್ತಿಯಲ್ಲಿದ್ದು ಸಾವಿರಾರು ಜನ ಸೇವೆಯ ಲಾಭ ಪಡೆಯುತ್ತಿದ್ದಾರೆ.

ಸೇವೆ ಹೀಗಿದೆಕಾಲ್ ಡೆಸ್ಟಿನೇಷನ್ ಅಲರ್ಟ್ ಸೇವೆ ಬಳಕೆ ತುಂಬಾ ಸರಳ. ಪ್ರಯಾಣಿಕರು ತಮ್ಮ ಮೊಬೈಲ್ ಮುಖಾಂತರ ‘ಅಲರ್ಟ್ ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ಪಿಎನ್‌ಆರ್ ಸಂಖ್ಯೆ ದಾಖಲಿಸಿ 139 ನಂಬರ್‌ಗೆ ಎಸ್‌ಎಂಎಸ್’ ಕಳುಹಿಸಬೇಕು. ಬಳಿಕ 139 ನಂಬರ್‌ಗೆ ಕರೆ ಮಾಡಿ ಮಾತನಾಡುವ ಭಾಷೆ ಆಯ್ಕೆ ಮಾಡಬೇಕು. ನಂತರ ನಂ. 7ನ್ನು ಒತ್ತಬೇಕು. ಆಗ್ ಕಾಲ್ ಡೆಸ್ಟಿನೇಷನ್ ಸೇವೆ ಆಕ್ಟಿವೇಟ್ ಆಗುತ್ತದೆ.

ಕಾಲ್ ಡೆಸ್ಟಿನೇಷನ್ ಅಲಟ್‍೯ ಸೇವೆಕಡಿಮೆ ಅವಧಿಯಲ್ಲಿ ಮನೆ ಮಾತಾಗಿದೆ. ಸೇವೆಯ ಲಾಭವನ್ನು ಅನೇಕರು ಪಡೆಯುತ್ತಿದ್ದು, ಗೊತ್ತಿಲ್ಲದವರು ಕೇಳಿ ತಿಳಿದುಕೊಳ್ಳುತ್ತಿದ್ದಾರೆ. ಈ ಸೇವೆಯಿಂದಾಗಿ ಪ್ರಯಾಣಿಕರು ನಿಶ್ಚಿಂತೆಯಿಂದ ನಿದ್ರೆ ಮಾಡಬಹುದು.

-ಕಿರಣ ಕದಂ ಪಿಆರ್‌ಒ, ಹುಬ್ಬಳ್ಳಿ ರೈಲ್ವೆ ವಲಯ

Source: vishwavani

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top