fbpx
ಕರ್ನಾಟಕ

ಆಕರ್ಷಕ ರಮಣೀಯ ತಾಣ ನಂದಿಬೆಟ್ಟ.

ನಂದಿಬೆಟ್ಟ ಒಂದು ಆಕರ್ಷಕ ರಮಣೀಯ ತಾಣ. ಇದು ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ. ಇಲ್ಲಿನ ಪ್ರಕೃತಿಯ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ

ಕರುನಾಡಿನ ಕುಲು ಮನಾಲಿ, ಮಸ್ಸೂರಿ ಎಂದೇ ಖ್ಯಾತವಾದ ಗಿರಿಧಾಮ ನಂದಿಬೆಟ್ಟ. ಈ ನಂದಿಬೆಟ್ಟ ರಮ್ಯ ತಾಣ. ಬೆಂಗಳೂರಿನಿಂದ 6೦ ಕಿ.ಮಿ. ದೂರು ಇರುವ ನಂದಿ ಬೆಟ್ಟ, ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿದೆ. ಬೇಸಿಗೆಯಲ್ಲಿ ಕೂಡ ನಂದಿ ಬೆಟ್ಟ ತಂಪಾಗಿರುವುದರಿಂದಲೇ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಈ ತಾಣಕ್ಕೆ ಮನಸೋತಿದ್ದು. ಹೀಗಾಗೇ ಟಿಪ್ಪು ಸಂಸಾರ ಸಮೇತ ಬಿರು ಬೇಸಿಗೆಯಲ್ಲಿ ನಂದಿಬೆಟ್ಟಕ್ಕೆ ಆಗಮಿಸಿ ಬಿಡಾರ ಹೂಡುತ್ತಿದ್ದರು. ಇದು ಇತಿಹಾಸದಲ್ಲಿ ಸಹ ದಾಖಲಾಗಿದೆ. ಟಿಪ್ಪು ಬೇಸಿಗೆ ಬಂಗಲೆ, ಟಿಪ್ಪು ಕಾಲದ ರಕ್ಷಣಾ ಗೋಡೆಗಳು ಇಂದಿಗೂ ಇಲ್ಲಿ ಅದಕ್ಕೆ ಸಾಕ್ಷಿಯಾಗಿವೆ. ಬ್ರಿಟಿಷರೂ ಇದನ್ನು ಗಿರಿಧಾಮವೆಂದೇ ಪರಿಗಣಿಸಿ ಇಲ್ಲಿ ವಿಶ್ರಾಂತಿ ಬಂಗಲೆಗಳನ್ನೂ ನಿರ್ಮಿಸಿದ್ದಾರೆ. ಇದಕ್ಕೂ ಕುರುಹುಗಳಿವೆ…

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ 1

ನಂದಿಬೆಟ್ಟ, ಕಲ್ಯಾಣಿ, ಯೋಗನಂದೀಶ್ವರ ದೇವಾಲಯಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ಈ ಸುಂದರ ಗಿರಿಧಾಮ ವಾರಾಂತ್ಯದ ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ತಂಪಾದ ಹಾಗೂ ಅಹ್ಲಾದಕರ ವಾತಾವರಣ, ಪ್ರಕೃತಿಯ ರಮಣೀಯತೆ ಯುವಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ನಂದಿಗ್ರಾಮದಲ್ಲಿ ಭೋಗನಂದೀಶ್ವರನ ದರ್ಶನ ಪಡೆದು 8 ಕಿ.ಮಿ. ಎತ್ತರದ ದಾರಿಯಲ್ಲಿ ಬೆಟ್ಟವನ್ನು ಬಳಸಿ ಸಾಗುವುದು ರೋಮಾಂಚಕಾರಿ ಅನುಭವ.

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ ಸುಂದರ ಸೊಬಗು 2

ಕನ್ನಡನಾಡಿನ ಹೆಸರಾಂತ ಗಿರಿಧಾಮಗಳಲ್ಲಿ ಒಂದಾದ ನಂದಿ, ಪವಿತ್ರ ಪುಣ್ಯ ಕ್ಷೇತ್ರವೂ ಹೌದು. ಯೋಗನಂದೀಶ್ವರ, ಭೋಗನಂದೀಶ್ವರರ ಹಾಗೂ ಅರುಣಾಚಲೇಶ್ವರನ ನೆಲೆವೀಡಾದ ನಂದಿಯಲ್ಲಿ ಪ್ರಾಚೀನ ಹಾಗೂ ಪುರಾಣ ಪ್ರಸಿದ್ಧ ಶಿವದೇವಾಲಯಗಳಿವೆ. ನಂದಿಬೆಟ್ಟದ ಕೆಳಗಿರುವ ಹಳೆಯ ನಂದಿ ಗ್ರಾಮದಲ್ಲಿ ಚೋಳರ ಕಾಲದ ವಿಶಾಲವಾದ ಸುಂದರ ದೇವಾಲಯವಿದೆ. ಇಲ್ಲಿ ಅರುಣಾಚಲೇಶ್ವರ ಹಾಗೂ ಭೋಗನಂದೀಶ್ವರ – ಪಾರ್ವತಿ ಸಮೇತನಾಗಿ ಪೂಜೆಗೊಳ್ಳುತ್ತ, ಗ್ರಾಮಸ್ಥರನ್ನೂ ಹಾಗೂ ತನ್ನ ದರ್ಶನಕ್ಕೆ ಬರುವ ಭಕ್ತರನ್ನೂ ಹರಸುತ್ತಿದ್ದಾನೆ.

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ 1

ಈ ದೇವಾಲಯ ವಿಶಾಲವಾದ ಪ್ರಾಕಾರವನ್ನೂ, ಮುಖ್ಯದ್ವಾರವನ್ನೂ, ರಾಜಗೋಪುರವನ್ನೂ ಒಳಗೊಂಡಿದೆ. 370 ಅಡಿ ಉದ್ದ ಹಾಗೂ 240 ಅಡಿ ಅಗಲವಿರುವ  ಜೋಳರ ಕಾಲದ ದೇವಾಲಯ ಕಲಾತ್ಮಕವಾಗಿಯೂ ಶ್ರೀಮಂತವಾಗಿದೆ. ಭಿತ್ತಿಗಳ ಮೇಲೆ ನಾಟ್ಯವಿಗ್ರಹಗಳನ್ನು ಜಾಲಂದ್ರವಾಗಿ ಬಳಕೆ ಮಾಡಿಕೊಂಡಿರುವ ಶಿಲ್ಪಿಯ ಚಾತುರ್ಯ ಮೆಚ್ಚುವಂತಿದೆ. ನವರಂಗ, ಸುಖನಾಸಿ, ಕೈಸಾಲೆ, ಕಲ್ಯಾಣ ಮಂಟಪಗಳು ಇಲ್ಲಿವೆ.

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ ಸುಂದರ ಸೊಬಗು8

ಹೊರ ಭಿತ್ತಿಗಳಲ್ಲಿ ಹಲವು ಆಕರ್ಷಕ ಸುಂದರ ಉಬ್ಬು ಶಿಲ್ಪಗಳಿವೆ. ದೇವಾಲಯದಲ್ಲಿರುವ ಛತ್ರಿಯಾಕಾರದ 10 ಅಡಿ ಎತ್ತರದ ಕಲ್ಲಿನ ಕಂಬವೂ ಮನಮೋಹಕವಾಗಿದೆ. ಈ ದೇವಾಲಯದ ಗರ್ಭಗುಡಿಯ ಮುಂದಿರುವ ಮಂಟಪದ ಕಂಬಗಳು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು ನೋಡುಗರ ಮನಸೆಳೆಯುತ್ತವೆ. ನವರಂಗದಲ್ಲಿರುವ ಜಾಲಂದ್ರದಲ್ಲಿ ದೇವಾನುದೇವತೆಗಳ ಉಬ್ಬು ಶಿಲ್ಪವಿದೆ.

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ ಸುಂದರ ಸೊಬಗು5 - Copy

ನಂದಿಯ ಭೋಗನಂದೀಶ್ವರ ದೇವಾಲಯ, ನಂದಿಬೆಟ್ಟದ ಮೇಲೆ ಯೋಗನಂದೀಶ್ವರನ ದೊಡ್ಡ ದೇವಾಲಯವಿದೆ. ದೇವಾಲಯದ ಪ್ರಾಕಾರದಲ್ಲಿ ಹಲವು ಮೆಟ್ಟಿಲುಗಳುಳ್ಳ ಸುಂದರ ಕಲ್ಯಾಣಿಯಿದೆ. ಬೆಟ್ಟದ ಮೇಲೆ ನಿಂತು ಸುತ್ತಣ ಪ್ರದೇಶ ನೋಡಿದರೆ ರಮ್ಯವಾಗಿ ಕಾಣುತ್ತದೆ.

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ ಸುಂದರ ಸೊಬಗು10

1770ರಲ್ಲಿ ಇದನ್ನು ಹೈದರ್ ಅಲಿ ಬೆಟ್ಟವನ್ನು ಮರಾಠರಿಂದ ವಶಪಡಿಸಿಕೊಂಡ. ಟಿಪ್ಪೂ ಸುಲ್ತಾನ್ ಇಲ್ಲಿನ ರಣ್ಯತೆಗೆ ಮನಸೋತು ಅಭಿವೃದ್ಧಿ ಪಡಿಸಿದ. ಈಗ ಜೀರ್ಣವಾಗಿರುವ ಕೋಟೆಯನ್ನು ಕಟ್ಟಿಸಿದ್ದೂ ಹೈದರಲಿ ಹಾಗೂ ಟಿಪ್ಪೂ ಎಂದು ಇತಿಹಾಸ ಹೇಳುತ್ತದೆ. ಬೆಟ್ಟದ ಮೇಲೆ ಕೋಟೆ ಬಂದ ಬಳಿಕ ಇದು ನಂದಿದುರ್ಗವಾಯ್ತು.

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ ಸುಂದರ ಸೊಬಗು3

 ನಂದಿಯ ಭೋಗನಂದೀಶ್ವರ ದೇವಾಲಯ, ಬೆಟ್ಟದ ಮೇಲೆ ಅಥವಾ ಬೆಟ್ಟದ ಮೂಲಗಳಲ್ಲಿ ಪಾಲಾರ್, ಉತ್ತರ ಪೆನ್ನಾರ್, ದಕ್ಷಿಣ ಪೆನ್ನಾರ್, ಚಿತ್ರಾಪತಿ, ಅರ್ಕಾವತಿ, ಪಾಪಗ್ನಿ  ನದಿಗಳು ಹುಟ್ಟಿ ಹರಿಯುತ್ತವೆ.

ಇತಿಹಾಸ: ನಂದಿ ಎಂದರೆ ಬಸವ, ಬಸವನಿಗೂ ಈ ಬೆಟ್ಟಕ್ಕೂ ಏನು ಸಂಬಂಧ? ಈ ಪ್ರಶ್ನೆ ಸಹಜವಾಗೇ ಉದ್ಭವಿಸುತ್ತದೆ. ನಂದಿಬೆಟ್ಟ ಎಂಬ ಹೆಸರು ಹೇಗೆ ಬಂತು ಎಂಬ ಬಗ್ಗೆಯೇ ಜಿಜ್ಞಾಸೆ ಇದೆ.  ಈ ಪ್ರದೇಶ ಚೋಳರ ಆಳ್ವಿಕೆಗೆ ಒಳಪಡುವ ಮುನ್ನ ಆನಂದಗಿರಿ, ಕೂಷ್ಮಾಂಡಗಿರಿ ಎಂದು ಕರೆಯಲ್ಪಡುತ್ತಿತ್ತು.

ನಂದಿಬೆಟ್ಟದದಿಂದ ಕಾಣುವ ವಿಹಂಗಮ ನೋಟ

ಕೂಷ್ಮಾಂಡ ಋಷಿಗಳು ಇಲ್ಲಿ ತಪಸ್ಸು ಮಾಡಿದನೆಂದು ಸ್ಥಳ ಪುರಾಣ ಹೇಳುತ್ತದೆ. ಆದ್ದರಿಂದಲೇ ಈ ಬೆಟ್ಟಕ್ಕೆ ಕೂಷ್ಮಾಂಡಗಿರಿ ಎಂಬ ಹೆಸರೂ ಬಂದಿತ್ತಂತೆ. ಬೇಸಿಗೆಯಲ್ಲಿ ತಂಪಾಗಿರುವ ಈ ಸ್ಥಳ ಆನಂದ ತರುತ್ತಿದ್ದ ಕಾರಣ ಇದನ್ನು ಆನಂದ ಗಿರಿ ಎನ್ನುತ್ತಿದ್ದರು ಎಂಬುದು ಊರಿನ ಹಿರೀಕರ ಹೇಳಿಕೆ.

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ ಸುಂದರ ಸೊಬಗು9

 ನಂದಿಬೆಟ್ಟ, ಕಲ್ಯಾಣಿ, ಯೋಗನಂದೀಶ್ವರ ದೇವಾಲಯಬೆಟ್ಟದ ಬುಡದಲ್ಲಿರುವ ಈ ಪ್ರದೇಶ ಗಂಗರ ಆಳ್ವಿಕೆಗೂ ಒಳಪಟ್ಟು ಆಗ ನಂದಗಿರಿ ಎನಿಸಿಕೊಂಡಿತ್ತೆಂದು ಹೇಳಲಾಗುತ್ತದೆ.  ಯೋಗನಂದೀಶ್ವರರು ಇಲ್ಲಿ ತಪವನ್ನಾಚರಿಸಿದ್ದರಿಂದ ಇದಕ್ಕೆ ನಂದಿಬೆಟ್ಟ ಎಂದು ಹೆಸರು ಬಂತೆಂಬ ವಾದವಿದೆ. 11ನೇ ಶತಮಾನದಲ್ಲಿ ಬೆಟ್ಟಕ್ಕೆ ನಂದಗಿರಿ ಎಂದು ಹೆಸರಾಯ್ತಂತೆ. ಅದುವೆ ಮುಂದೆ ಗ್ರಾಮ್ಯರ ಬಾಯಲ್ಲಿ ನಂದಿ ಬೆಟ್ಟವಾಯ್ತು.

ನಂದಿ ಬೆಟ್ಟದ ಬಳಿ ಇರುವ ನಂದಿ ದೇವಾಲಯದ ಸುಂದರ ಸೊಬಗು7ಬಂಡೆಯ ಮೇಲಿಂದ ನಂದಿಬೆಟ್ಟದ ದೃಶ್ಯ

ರಮ್ಯ ತಾಣ : ಕರುನಾಡು. ಕುಲು ಮನಾಲಿ, ಮಸ್ಸೂರಿ ಎಂದೇ ಖ್ಯಾತವಾದ ಗಿರಿಧಾಮ ನಂದಿಬೆಟ್ಟ. ಬೆಂಗಳೂರಿನಿಂದ 6೦ ಕಿ.ಮಿ. ದೂರು ಇರುವ ನಂದಿ ಬೆಟ್ಟ. ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿರುವ ನಂದಿಬೆಟ್ಟ ಬೇಸಿಗೆಯಲ್ಲಿ ತಂಪಾಗಿರುವುದರಿಂದಲೇ ಮೈಸೂರು ಹುಲಿ ಟಿಪ್ಪೂ ಸುಲ್ತಾನರು ಈ ತಾಣಕ್ಕೆ ಮನಸೋತಿದ್ದು. ಹೀಗಾಗೇ ಟಿಪ್ಪೂ ಸಂಸಾರ ಸಮೇತ ಬಿರು ಬೇಸಿಗೆಯಲ್ಲಿ ನಂದಿಗೆ ಬಂದು ಬಿಡಾರ ಹೂಡುತ್ತಿದ್ದರು ಎನ್ನುತ್ತದೆ ಇತಿಹಾಸ. ಟಿಪ್ಪೂ ಬೇಸಿಗೆ ಬಂಗಲೆ, ಟಿಪ್ಪೂ ಕಾಲದ ರಕ್ಷಣಾ ಗೋಡೆಗಳು ಇಂದಿಗೂ ಇಲ್ಲಿ ಅದಕ್ಕೆ ಸಾಕ್ಷಿಯಾಗಿವೆ. ಬ್ರಿಟಿಷರೂ ಇದನ್ನು ಗಿರಿಧಾಮವೆಂದೇ ಪರಿಗಣಿಸಿ ಇಲ್ಲಿ ವಿಶ್ರಾಂತಿ ಬಂಗಲೆಗಳನ್ನೂ ನಿರ್ಮಿಸಿದ್ದಾರೆ.

ನೋಡಬೇಕಾದ ತಾಣಗಳು: ಧುಮ್ಮಿಕ್ಕುವ ಜಲಧಾರೆ, ಚಿಕ್ಕ ಚಿಕ್ಕ ಝರಿ, 6೦೦ ಮೀಟರ್ ಆಳದ ಟಿಪ್ಪೂ ಡ್ರಾಪ್ (ಪ್ರಪಾತ), ತಿಳಿನೀರಿನಿಂದ ತುಂಬಿದ ಸುಂದರ ಕೊಳ – ಅಮೃತ ಸರೋವರ,  ಅರಸರು ಶತ್ರುಗಳಿಂದ ತಪ್ಪಿಸಿಕೊಳ್ಳಲು ನಿರ್ಮಿಸಿದ್ದ ಗುಪ್ತದಾರಿ, ವಿಶಾಲವಾದ ಮಕ್ಕಳ ಆಟದ ಮೈದಾನ, ಟಿಪ್ಪು ಕೋಟೆ, ಯೋಗನಂದೀಶ್ವರ ಹಾಗೂ ಭೋಗ ನಂದೀಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಆದರೆ ಬೆಟ್ಟದ ಮೇಲಿರುವ ಕೋಟೆಯ ಗೋಡೆಗಳು ಹಲವೆಡೆ ಬಿದ್ದು ಹೋಗಿವೆ. ಹತ್ತಿರ ಹೋಗುವುದು ಬಲು ಅಪಾಯಕಾರಿ. ಇಲ್ಲಿ ತಿಂಡಿ ತಿನಿಸುಗಳು ಬಲು ದುಬಾರಿ. ಎಲ್ಲ ಅಂಗಡಿಗಳಲ್ಲೂ ತಂಪು ಪಾನೀಯ, ಪ್ಯಾಕ್ ಮಾಡಿದ ತಿನಿಸುಗಳಿಗೆ ಎಂ.ಆರ್.ಪಿ.ಗಿಂತ ಹೆಚ್ಚಿನ ಹಣ ಸುಲಿಯುತ್ತಾರೆ. ಕಾನೂನು ರೀತ್ಯ ಇದು ಅಪರಾಧವಾದರೂ ಇಲ್ಲಿ ನಿರಂತರವಾಗಿ ನಡೆದಿದೆ.

ನಂದಿಬೆಟ್ಟದ ಸುತ್ತಮುತ್ತ ಏನಿದೆ : ಇಲ್ಲಿಂದ 21 ಕಿ.ಮಿ. ದೂರದಲ್ಲಿ ಕನ್ನಡದ ಕಣ್ಮಣಿ ಭಾರತರತ್ನ ಎಸ್.ಎಂ. ವಿಶ್ವೇಶ್ವರಾಯನವರ ಜನ್ಮಸ್ಥಳ ಮುದ್ದೇನಹಳ್ಳಿ ಇದೆ. ದೇವನಹಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಹಿಂತಿರುಗಿದರೆ ದೇವನಹಳ್ಳಿಯಲ್ಲಿ ಸುಂದರ ಕೋಟೆಯನ್ನೂ ನೋಡಬಹುದು. ಬೆಂಗಳೂರು, ಚಿಕ್ಕಬಳ್ಳಾಪುರಗಳಿಂದ ನಂದಿಗೆ ನೇರ ಬಸ್ ಸೌಕರ್ಯ ಇದೆ. ನಂದಿಯಲ್ಲಿ ತಂಗಲು ಪ್ರವಾಸೋದ್ಯಮ ಇಲಾಖೆ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆಗಳ ವಸತಿಗೃಹಗಳೂ ಇವೆ. ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆದ ಸಂದರ್ಭದಲ್ಲಿ ಗಣ್ಯರಿಗಾಗಿ ಈ ಗಿರಿಧಾಮವನ್ನು ಅಭಿವೃದ್ಧಿಪಡಿಸಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top