fbpx
ಕರ್ನಾಟಕ

ಡ್ರಗ್ಸ್ ಯಾರ್ಡ್ ಆಫ್ ಕರ್ನಾಟಕ: ರಾಜಧಾನಿ ಬೆಂಗಳೂರು

ಬೆಂಗಳೂರು : ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರು ನಗರಕ್ಕೆ ಮಾದಕದ್ರವ್ಯ ಲೋಕದಲ್ಲಿ ಬಳಕೆಯಲ್ಲಿರುವ ಹೆಸರು- ಡ್ರಗ್ಸ್ ಯಾರ್ಡ್ ಆಫ್ ಕರ್ನಾಟಕ.

ಈ ಕಳಂಕ ರಾಜಧಾನಿಗೆ ಸುಮ್ಮನೆ ಮೆತ್ತಿಕೊಂಡಿಲ್ಲ. ದೇಶ- ವಿದೇಶಗಳ ಡ್ರಗ್ ಪೆಡ್ಲರ್ಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಬೆಂಗಳೂರಿನ ಡ್ರಗ್ ಮಾಫಿಯಾ ವಾರ್ಷಿಕ ಕೋಟಿಗಟ್ಟಲೆ ಮೌಲ್ಯದ ಮಾದಕದ್ರವ್ಯವವನ್ನು ಅಮದು ಮಾಡಿಕೊಂಡು ಅನಂತರ ರಾಜ್ಯದಲ್ಲಿ ಬೇಡಿಕೆ ಇರುವ ನಗರಗಳಿಗೆ ಕಳುಹಿಸುವ ವ್ಯವಸ್ಥಿತ ಜಾಲದ ಹೃದಯವನ್ನಾಗಿ ಈ ನಗರವನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ- ಕಳೆದ ಮೂರು ವರ್ಷಗಳಲ್ಲಿ 700 ಕೆ.ಜಿ. ಡ್ರಗ್ಸ್ ಜಪ್ತಿಯಾಗಿರುವ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಅಧಿಕೃತ ದಾಖಲೆಗಳಿಂದಲೇ ಸಿಗುತ್ತದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ ಇದು ಅಧಿಕೃತವಾಗಿ ಜಪ್ತಿಯಾದ ಮಾದಕವಸ್ತುಗಳ ಪ್ರಮಾಣ ಮಾತ್ರ. ಇದರ ನೂರು ಪಟ್ಟು ರಾಜ್ಯದಲ್ಲಿ ಬಳಕೆಯಾಗುತ್ತಿರಬಹುದು ಎಂದು ಅಂದಾಜಿಸುತ್ತಾರೆ. ಈ ಮಾತನ್ನು ನಂಬುವುದಾದರೇ ಕರ್ನಾಟಕದಲ್ಲಿ ಡ್ರಗ್ ದಂಧೆ ಕೋಟ್ಯಾಂತರ ರೂ. ಮೌಲ್ಯದ ಉದ್ದಿಮೆ!

ಬೆಂಗಳೂರು ಡ್ರಗ್ಸ್ ಜಾಲದ ವೃದ್ಧಿಗೆ ಕಾಸ್ಮೋಪಾಲಿಟಿನ್ ಹಿರಿಮೆ ಹಾಗೂ ರಾಷ್ಟ್ರದ ಇತರೆ ನಗರಗಳಿಗಿಂತ ಉತ್ತಮವಾದ ಸಾರಿಗೆ ಸಂಪರ್ಕ ಹೊಂದಿರುವುದು ಬಹುಮುಖ್ಯ ಕಾರಣವಾಗಿದೆ ಎಂದು ಪೊಲೀಸರು ಹಾಗೂ ಕೇಂದ್ರ ಮಾದಕ ವಸ್ತು ನಿಯಂತ್ರಣ ಘಟಕದ ಅಧಿಕಾರಿಗಳು ಹೇಳುತ್ತಾರೆ. ವಿಶ್ವದ ಗಮನ ಸೆಳೆದಿರುವ ಬೆಂಗಳೂರಿಗೆ ಪ್ರವಾಸ, ಶೈಕ್ಷಣಿಕ ಹಾಗೂ ಔದ್ಯೋಮಿಕ ಸಲುವಾಗಿ “ಪರಕೀಯರ’ ಆಗಮನ ಹಾಗೂ ಜಲ, ವಾಯು ಹಾಗೂ ಭೂ ಅಂತರಾಜ್ಯ ಸಾರಿಗೆ ಸಂಪರ್ಕ ಹೊಂದಿರುವುದು ಡ್ರಗ್ಸ್ ಸಾಗಾಣಿಕೆ ದಂಧೆಕೋರರಿಗೆ ಸುಲಭವಾಗಿದೆ.

ಬೆಂಗಳೂರಿಗೆ ಪ್ರಮುಖವಾಗಿ ಮುಂಬೈ, ಗೋವಾ, ಚೆನ್ನೈ ಹಾಗೂ ವಿಶಾಖಪಟ್ಟಣ ಮೂಲಕ ಮಾದಕ ವಸ್ತು ಪೂರೈಕೆಯಾಗುತ್ತಿದೆ. ವಿದೇಶಿಯರು ಬಹುತೇಕ ವಾಯು ಮಾರ್ಗವನ್ನೇ ಬಳಸುತ್ತಾರೆ. ಇಲ್ಲಿಗೆ ಗಾಂಜಾ, ಚರಸ್ಗಳು ಹೊರತುಪಡಿಸಿದರೆ ಕೊಕೇನ್, ಎಲ್‌ಎಸ್ಡಿ, ಬ್ರೌನ್ಶುಗರ್, ಎಂಡಿಎಂ, ಮಿಯ್ನಾಂ ಮಿಯ್ನಾಂ ಸೇರಿ ಇತರೆ ವಿದೇಶಿ ಬ್ರಾಂಡ್ಗಳ ಮಾದಕ ವಸ್ತು ಮಾರಾಟದ ಜಾಲದ ನಿಖರ ಮೂಲ ಪತ್ತೆಯಾಗಿಲ್ಲ. ವಿದೇಶಿಯರು ಸಣ್ಣ ಗುಂಪು ಮಾಡಿಕೊಂಡು ದಂಧೆಯಲ್ಲಿದ್ದಾರೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಡ್ರಗ್ ದಂಧೆಯ ಗೋಲ್ಡನ್ ಟ್ರಾಯಾಂಗಲ್! ಭಾರತದ ಎಲ್ಲಾ ತನಿಖಾ ಏಜೆನ್ಸಿಗಳು ಮಾದಕ ವಸ್ತು ಮಾರಾಟವನ್ನು ಎರಡು ಗುಂಪುಗಳನ್ನಾಗಿ ಗುರುತಿಸಿದ್ದಾರೆ. ಇದರಲ್ಲಿ ಹೆರಾಯಿನ್, ಅಫೀಮು ಅನ್ನು ವಿಶ್ವಕ್ಕೆ ಶೇ.80ಷ್ಟು ಪೂರೈಕೆ ಮಾಡುವ ಆಪಾ^ನಿಸ್ತಾನ ಪ್ರಥಮದಲ್ಲಿದ್ದರೆ, ನಂತರ ಸ್ಥಾನಗಳಲ್ಲಿ ಇರಾನ್, ಪಾಕಿಸ್ತಾನ, ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್ ರಾಷ್ಟ್ರಗಳಿವೆ. ಇವುಗಳನ್ನು “ಗೋಲ್ಡನ್ ಟ್ರೈಯಾಗಲ್’ ( ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್) ಹಾಗೂ “ಗೋಲ್ಡನ್ ಕ್ರೆಸೆಂಟ್’ (ಅಪಾ^ನಿಸ್ತಾನ, ಪಾಕಿಸ್ತಾನ ಹಾಗೂ ಇರಾನ್) ಎಂದು ತನಿಖಾ ಸಂಸ್ಥೆಗಳು ಕರೆಯುತ್ತವೆ.

ಇವುಗಳಿಂದಲೇ ಭಾರತಕ್ಕೆ ಬಹುಪಾಲು ಮಾದಕ ವಸ್ತುಗಳು ಪೂರೈಕೆಯಾಗುವುದು. ಈ ಮಾದಕ ವಸ್ತು ಜಾಲವು ಮೂರು ರೀತಿಯ ಸಾರಿಗೆ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ಹಾಗಾಗಿ ಚೆನ್ನೈ, ವಿಶಾಖಪಟ್ಟಣ, ಮುಂಬೈ ಹಾಗೂ ಗೋವಾಕ್ಕೆ ಜಲ ಮಾರ್ಗದ ಮೂಲಕ ಮಾದಕ ವಸ್ತು ಭಾರತದೊಳಗೆ ಬರುತ್ತದೆ. ಅಲ್ಲಿಂದ ಭೂ ಸಾರಿಗೆ ಮೂಲಕ ಬೆಂಗಳೂರು ತಲುಪತ್ತದೆ. ಅದೇ ರೀತಿ “ಲೋಕಲ್ ಬ್ರಾಂಡ್’ ಗಾಂಜಾವೂ ಆಂಧ್ರಪ್ರದೇಶ ಗುಂಟೂರು, ಕರ್ನೂಲ್, ಅನಂತಪುರ, ತಮಿಳುನಾಡು ಹೊಸೂರು, ಕೃಷ್ಣಗಿರಿ, ಒಡಿಶಾ ರಾಜ್ಯದ ಗಡಿಭಾಗಗಳಿಂದ ಸರಬರಾಜಾಗುತ್ತದೆ. ಇನ್ನು ಪಶ್ಚಿಮ ಘಟ್ಟ ಅರಣ್ಯ ಪ್ರದೇಶ, ಚಾಮರಾಜನಗರ, ಮೈಸೂರು, ಕೋಲಾರ ಹಾಗೂ ಮಡಿಕೇರಿ ಸೇರಿದಂತೆ ರಾಜ್ಯದ ಕೆಲವೆಡೆ ಅಕ್ರಮವಾಗಿ ಗಾಂಜಾ ಬೇಸಾಯ ನಡೆದಿದೆ ಎಂದು ಎನ್ಸಿಬಿ ಪ್ರಾದೇಶಿಕ ನಿರ್ದೇಶಕ (ಕರ್ನಾಟಕ ವಲಯ) ಸುನೀಲ್ ಕುಮಾರ್ ಸಿನ್ಹಾ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ನಂತರ ಮಾದಕ ವಸ್ತುಗಳು, ಮೈಸೂರು ಸೇರಿದಂತೆ ಇತರೆ ಭಾಗಗಳಿಗೆ ಸಾಗಾಣಿಕೆಯಾಗುತ್ತದೆ. ಅಲ್ಲದೆ ಉಡುಪಿ, ಮಂಗಳೂರು ಸೇರಿ ಕರಾವಳಿ ಜಿಲ್ಲೆಗಳಿಗೆ ನೇರವಾಗಿ ಗೋವಾ ಮೂಲಕವೇ ಮಾದಕ ವಸ್ತು ಪೂರೈಕೆಯಾದರೂ ಕೂಡ ಬೆಂಗಳೂರಿನಿಂದಲೇ ವಾಯು ಮಾರ್ಗದ ಮುಖೇನ ಬರುವ ವಿದೇಶಿ ಬ್ರಾಂಡ್ ಡ್ರಗ್Åಗಳು ಸರಬರಾಜಾಗುತ್ತದೆ. ಹೀಗಾಗಿ ಮಾದಕ ವಸ್ತು ದಂಧೆಕೋರರು ಬೆಂಗಳೂರನ್ನು ಯಾರ್ಡ್ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಸಾಗಾಣಿಕೆಗೆ ಎರಡು ರೀತಿ ಮಾದಕ ವಸ್ತು ಸಾಗಾಣಿಕೆಗೂ ಎರಡು ಮಾದರಿಯಲ್ಲಿ ಅಂತರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಬಳಸಿಕೊಳ್ಳುತ್ತಿದೆ. ಒಂದು ನೇರವಾಗಿ ತನ್ನ ಜಾಲದ ಸದಸ್ಯರನ್ನು ಬೆಂಗಳೂರಿಗೆ ಕಳುಹಿಸಿ ಮಾದಕ ವಸ್ತು ಪೂರೈಕೆ ಮಾಡುತ್ತದೆ. ಮತ್ತೂಂದು ಸ್ಥಳೀಯರನ್ನು “ವಿದೇಶ ಪ್ರವಾಸ’ ಭಾಗ್ಯ ಕಲ್ಪಿಸಿ ಅವರ ಮೂಲಕ ಸ್ಮಗ್ಲಿಂಗ್ ಮಾಡುತ್ತಿದ್ದಾರೆ. ಸ್ಥಳೀಯರನ್ನು ವಿದೇಶದಲ್ಲಿ ಉದ್ಯೋಗ ಅಥವಾ ಪ್ರವಾಸ ನೆಪದಲ್ಲಿ ಕರೆಸಿಕೊಂಡು ಬಳಿಕ ಅಲ್ಲಿಂದ ಅವರ ಮೂಲಕ ಡ್ರಗ್ಸ್ ಸಪ್ಲೆ„ ಮಾಡುತ್ತಾರೆ ಎಂದು ಎನ್ಸಿಬಿಯ ಸುನೀಲ್ ಕುಮಾರ್ ಹೇಳುತ್ತಾರೆ.

ಡ್ರಗ್ಸ್ ಸ್ಮಗ್ಲಿಂಗ್ನ ಗುಂಪುಗಳು ಗೋಲ್ಡನ್ ಟ್ರೆಯಾಗಲ್ – ಮಯಾನ್ಮಾರ್, ಥೈಲ್ಯಾಂಡ್, ಲಾವೋಸ್ ಗೋಲ್ಡನ್ ಕ್ರೆಸೆಂಟ್ -ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಇರಾನ್

ಬೆಂಗಳೂರು ಹೇಗೆ ಮಾರ್ಗ ಗೋವಾ, ಮುಂಬೈ, ಚೆನ್ನೈ, ವಿಶಾಖಪಟ್ಟಣ ಹಾಗೂ ವಿಮಾನ ಮೂಲಕ

ಬೆಂಗಳೂರು ಎಲ್ಲೆಲ್ಲಿ ಅತಿ ಹೆಚ್ಚು ಮಾರಾಟ ನಗರದಲ್ಲಿ ವಿದೇಶಿಯರ ಬಾಹುಳ್ಯ ಪ್ರದೇಶ ಕಡೆಗೆ ಅತಿ ಹೆಚ್ಚು ಡ್ರಗ್ಸ್ ದಂಧೆ ಇದೆ. ಇಲ್ಲಿ ಅಕ್ರಮವಾಗಿ ಬಾರ್, ಕ್ಲಬ್ ಹಾಗೂ ರೆಸ್ಟೋರೆಂಟ್ಗಳನ್ನು ನೈಜೀರಿಯಾ ಪ್ರಜೆಗಳು ನಡೆಸುತ್ತಿರುವುದಾಗಿ ಹೆಸರು ಹೇಳ ಬಯಸದ ಸಿಸಿಬಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಅಫ್ರಿಕಾ ಪ್ರಜೆಗಳು ನೆಲೆವೀಡಾಗಿರುವ ಕೊತ್ತನೂರು, ಬಾಣಸವಾಡಿ, ಕೆ.ಆರ್.ಪುರ, ಇಂದಿರಾ ನಗರ, ವರ್ತೂರು, ರಾಮಮೂರ್ತಿ ನಗರ, ಬೈರತಿ ಭಾಗದಲ್ಲಿ ಅತಿ ಹೆಚ್ಚು ಹೆರಾಯಿನ್, ಕೊಕೇನ್, ಎಲ್‌ಎಸ್ಡಿ, ಎಂಡಿಎಂ, ಮಿಯ್ನಾಂ ಮಿಯ್ನಾಂ ಹಾಗೂ ಹಾಶಿಸ್ ಸೇರಿ “ಫಾರಿನ್ ಬ್ರಾಂಡ್’ಗಳು ಮಾರಾಟವಾಗುತ್ತದೆ. ಇನ್ನುಳಿದಂತೆ ಲೋಕಲ್ ಬ್ರಾಂಡ್ ಗಾಂಜಾವು ಎಲ್ಲೆಡೆ ಸಿಗುತ್ತದೆ. ಅದರಲ್ಲೂ ಮೈಸೂರು ರಸ್ತೆ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಶಿವಾಜಿನಗರ ಹಾಗೂ ಯಶವಂತಪುರ ಭಾಗದಲ್ಲಿ ಹೆಚ್ಚಿನದ್ದಾಗಿ ಮಾರಾಟವಾಗುತ್ತದೆ. ಇನ್ನು ನಗರದ ಐಟಿ-ಬಿಟಿ “ಪಬ್’ ಆದ ಎಲೆಕ್ಟ್ರಾನಿಕ್ ಸಿಟಿ, ವೈಟ್ಫೀಲ್ಡ್, ಎಚ್‌ಎಸ್‌ಆರ್ ಲೇಔಟ್, ಮೈಕೋ ಲೇಔಟ್, ಮಡಿವಾಳ ಕಡೆ ಎಲ್ಲಾ ರೀತಿಯ ಮಾದಕ ವಸ್ತುಗಳಿಗೆ ಬೇಡಿಕೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಮಾದಕ ವಸ್ತು ಪ್ರಕರಣ ಸಂಬಂಧ ಜಿಲ್ಲಾವಾರು ಮಾಹಿತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top