ಸಮಾಚಾರ

ಲಂಚದ ಹಣ ಹಂಚಿಕೊಳ್ಳಲು ನಡು ರಸ್ತೆಯಲ್ಲೇ ಪೊಲೀಸರ ಫೈಟಿಂಗ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

(ವೈರಲ್ ವಿಡಿಯೋ)

ಲಕ್ನೋ: ಜನರ ಜಗಳ ಬಿಡಿಸುವ ಪೊಲೀಸರೇ ಹೀಗೆ ತಾವೇ ಕೆಳಗೆ ಮೇಲೆ ಆಗಿದ್ದಾರೆ…? ಅದಕ್ಕೂ ಕಾರಣವಿದೆ.

ಭ್ರಷ್ಟಾಚಾರ ತಡೆಗೆ ಎಷ್ಟೆಲ್ಲಾ ಕಠಿಣ ಕ್ರಮಗಳನ್ನು ಕೈಗೊಂಡರೂ, ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೆಳ ಹಂತದಿಂದ ಹಿಡಿದು ಉನ್ನತ ಹಂತದವರೆಗೆ ಭ್ರಷ್ಟಾಚಾರ ಬೇರು ಬಿಟ್ಟಿದ್ದು, ಭ್ರಷ್ಟರ ನಡುವೆ ಪ್ರಾಮಾಣಿಕರು ಕಳೆದು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಲಂಚದ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದು, ಪೊಲೀಸರೇ ನಡು ರಸ್ತೆಯಲ್ಲಿ ಫೈಟಿಂಗ್ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪೊಲೀಸ್ ಇಲಾಖೆ ಭ್ರಷ್ಟಾಚಾರ ತಡೆಯುವ ಪ್ರಮುಖ ಇಲಾಖೆಯಾಗಿದ್ದರೂ, ಇಲ್ಲಿಯೇ ಹೆಚ್ಚು ಭ್ರಷ್ಟಾಚಾರ ನಡೆಯುತ್ತದೆ ಎಂಬ ಆರೋಪಗಳಿವೆ. ಇದಕ್ಕೆ ಪೂರಕ ಎನ್ನುವಂತೆ ಲಂಚದ ಹಣ ಹಂಚಿಕೊಳ್ಳಲು ಪೊಲೀಸರು ಹೊಡೆದಾಡಿಕೊಂಡಿದ್ದಾರೆ. ಬೀದಿ ವ್ಯಾಪಾರಿಗಳಿಂದ ಕೆಲವು ಬೀಟ್ ಪೊಲೀಸರು ಹಣ ಸಂಗ್ರಹಿಸಿದ್ದಾರೆ.

 ಈ ಘಟನೆ ನಡೆದಿರುವುದು ಉತ್ತರಪ್ರದೇಶದ ರಾಜಧಾನಿ ಲಕ್ನೋನಲ್ಲಿ. ಲಕ್ನೋ ನಗರದ ಆಯಕಟ್ಟಿನ ಸ್ಥಳ ಇದು. ಇಲ್ಲಿ ಕರ್ತವ್ಯಕ್ಕೆ ನೇಮಕವಾಗುವ ಪೊಲೀಸರು ಸಂಜೆ ವೇಳೆಗೆ ತಾವು ಪಡೆದಿದ್ದ ಅಂದಿನ ಲಂಚವನ್ನು ಹಂಚಿಕೊಳ್ಳುವುದು ಒಂದು ವ್ಯವಸ್ಥೆ. ಅದರಂತೆ ಭಾನುವಾರ (ನಿನ್ನೆ) ಸಂಜೆ ಆ ದಿನದ ಕಲೆಕ್ಷನ್ ಹಂಚಿಕೊಳ್ಳುವಾಗ ಉಂಟಾದ ಭಿನ್ನಾಭಿಪ್ರಾಯವೇ ಈ ಪೊಲೀಸ್ ಜಗಳದ ಮೂಲಕಾರಣ ಎನ್ನುವುದು  ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top