ಸಮಾಚಾರ

69 ವರ್ಷಗಳ ನಂತರ ಹಳ್ಳಿಗೆ ಬಂದ ಬಸ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಸಿಲ್ಪತ ಗ್ರಾಮದ ನಿವಾಸಿಗಳು ಬಸ್ ಬಂದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಈ ಗ್ರಾಮಕ್ಕೆ ರಸ್ತೆ ನಿರ್ಮಿಸಲಾಗಿತ್ತು. ಅದಿಬದ್ರಿ ತಾಲೂಕಿನಿಂದ ಸಿಲ್ಪತ ಗ್ರಾಮಕ್ಕೆ 21 ಕಿಲೋ ಮೀಟರ್ ರಸ್ತೆ ನಿರ್ಮಿಸಲಾಗಿದೆ. ಪಕ್ಕಾ ರಸ್ತೆಯಾದ ನಂತರ ಈ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಿದೆ.

69 ವರ್ಷಗಳ ನಿರಂತರ ಕಾಯುವಿಕೆಯ ನಂತರ ಈ ಊರಿನ ಜನ ಬಸ್ಸಿನ ಸೌಭಾಗ್ಯ ಕಂಡಿದ್ದಾರೆ. ಅದು ಸಾಧ್ಯವಾಗಿದ್ದು, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮೂಲಕ. ಈಗ ಈ ಹಳ್ಳಿ ಜನ ಬಸ್ ನಲ್ಲಿ ಓಡಾಡುವಂತಾಗಿದೆ.

ಹತ್ತಿರ ಮಾರುಕಟ್ಟೆಗೆ ಹೋಗಲೂ ಸಹ ನಾವು ದಿನನಿತ್ಯ ಹಲವು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತಿತ್ತು, ಇನ್ನು ಪಟ್ಟಣಗಳಿಗೆ ತೆರಳುವುದು ಇನ್ನೂ ಕಷ್ಟದ ಕೆಲಸವಾಗಿತ್ತು. ಆದರೆ ಸ್ವಾತಂತ್ರ್ಯ ಬಂದ 69 ವರ್ಷಗಳ ನಂತರ ನಮ್ಮ ಕನಸು ನನಸಾಗಿದೆ. ನಮ್ಮ ಊರಿನ ಮುಂದಿನ ತಲೆಮಾರಿನವರು ನಾವು ಅನುಭವಿಸಿದ ಕಷ್ಟ ಅನುಭವಿಸುವ ಅಗತ್ಯವಿಲ್ಲ. ಅವರಿಗೆ ರಸ್ತೆ ಸಂಪರ್ಕ ಸಿಕ್ಕಿದೆ ಎಂದು ಗ್ರಾಮದ ಕಲಮ್ ಸಿಂಗ್ ಬಿಶ್ತ್ ಸಂತಸ ಹಂಚಿಕೊಂಡಿದ್ದಾರೆ.

ಉತ್ತರಾಖಂಡ ರಸ್ತೆ ಸಾರಿಗೆ ನಿಗಮದ ಬಸ್ ಮೊದಲ ಬಾರಿಗೆ ಈ ಊರಿಗೆ ಬಂದಾಗ ಊರಿನ ಜನರು ಸಂತಸದಿಂದ ಸ್ವಾಗತಿಸಿದ್ದಾರೆ. ನಮ್ಮ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ 2 ವರ್ಷದ ಹಿಂದೆಯೇ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ಹಲವು ಬಾರಿ ನಾವು ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ ನಂತರ ನಮ್ಮ ಗ್ರಾಮಕ್ಕೆ ರಸ್ತೆ ನಿರ್ಮಿಸಲಾಯಿತು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.

Comments

comments

Click to comment

Leave a Reply

Your email address will not be published. Required fields are marked *

To Top