ಕರ್ನಾಟಕ

“ಮೌಢ್ಯ ವಿರೋಧಿ ಕಾಯ್ದೆ ಕರ್ನಾಟಕಕ್ಕೆ ಬೇಕಾ? ಬೇಡ್ವಾ?”

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಾಜ್ಯದಲ್ಲಿ ಮತ್ತೆ ಮೌಢ್ಯ ವಿರೋಧಿ ಕಾಯ್ದೆ ಜಾರಿಗೆ ? ಜುಲೈ 4ರಿಂದ ಆರಂಭವಾಗುವ ಅಧಿವೇಶನದಲ್ಲಿ ಕಾಯ್ದೆ ಮಂಡನೆ. ಮೌಢ್ಯ ವಿರೋಧಿ ಕಾಯ್ದೆ ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಉತ್ಸುಕ. ಈಗಾಗಲೇ ಕಾಯ್ದೆ ಕರಡು ಸಿದ್ದವಾಗಿದ್ದು, ಬುಧವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಕಾಯ್ದೆ ಮಂಡನೆ ಯಾಗುವ ನೀರಿಕ್ಷೆಯಿದೆ. ಬೇರೆ ರಾಜ್ಯಗಳಲ್ಲಿ ಈಗಾಗಲೆಈ ಕಾಯ್ದೆ ಜಾರಿಯಾಗಿದ್ದು, ಇದರ ಅಧ್ಯಯನ ನಡೆಸಿರುವ ಸರ್ಕಾರ, ಅದರ ಅಂಶಗಳ ಆಧಾರದಲ್ಲಿ ಕಾಯ್ದೆ ರಚನೆ ಮಾಡುವ ಸಂಭವ ಹೆಚ್ಚಾಗಿದೆ. ಶತಾಯಗತಾಯ ಈ ಬಾರಿ ಕಾಯ್ದೆ ಜಾರಿಗೆ ತರಲು ಸರ್ಕಾರ ಯತ್ನ ನಡೆಸಲಿದ್ದು, ಈ ಹಿಂದೆ ಕಾಯ್ದೆ ಜಾರಿಗೆ ತರಲು ಯತ್ನಿಸಿದ್ದಾಗ ಕೆಲ ಸಮುದಾಯದವರು, ಕೆಲ ಮಠಾಧೀಶರು, ಬಿಜೆಪಿ ನಾಯಕರಿಂದ ವಿರೋಧವಾಗಿತ್ತು. ಮೌಢ್ಯ ಪ್ರತಿಬಂಧಕ ಕಾಯ್ದೆ ಅನೇಕ ಜನರ ಶ್ರದ್ಧೆ-ಆಚರಣೆಗಳಿಗೆ ಧಕ್ಕೆ ತರುಲಿದ್ದು, ಈ ಮೂಲಕ ಜನರ ಆಚರಣೆಗೆ ತಡೆ ಒಡ್ಡಲು ಸರ್ಕಾರ ಹವಣಿಸುತ್ತಿದೆ, ಆದರೆ ಸರ್ಕಾರವು ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದು, ಕಂದಾಚಾರ, ಮೌಢ್ಯಗಳಿಗೆ, ಮಾಟ-ಮಂತ್ರಗಳಿಗೆ ಕಡಿವಾಣ ಹಾಕಲು ಯತ್ನಿಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.  ಇದು ರಾಜಕೀಯ ತಿರುವು ಪಡೆಯುತ್ತಿದ್ದು, ಕೆಲವರು ಅದರ ವಿರುದ್ಧ ನಿಂತರೆ ಮತ್ತೆ ಕೆಲವರು ಪರವಾಗಿ ಹೋರಾಡುತ್ತಿದ್ದಾರೆ. ನೀವೇನಂತೀರಿ…?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top