ಸಮಾಚಾರ

ಗಿರ್ ಗೋವಿನ ಮೂತ್ರದಲ್ಲಿ ಚಿನ್ನ ಪತ್ತೆ ಹಚ್ಚಿದ ವಿಜ್ಞಾನಿಗಳು!

ಜುನಾಗಢ್: ಪ್ರಸಿದ್ಧ ಗಿರ್  ತಳಿಯ ಗೋ ಮೂತ್ರದಲ್ಲಿ ಬಂಗಾರದ ಅಂಶ ಪತ್ತೆಯಾಗಿರೋದನ್ನು ಜುನಾಗಢ್ ಕೃಷಿ ವಿಶ್ವವಿದ್ಯಾಲಯ(ಜೆಎಯು)ದ ವಿಜ್ಞಾನಿಗಳು ಸತತ 4 ವರ್ಷಗಳ ಅಧ್ಯಯನದಿಂದ ದೃಢಪಡಿಸಿರುವುದಾಗಿ ವರದಿ ತಿಳಿಸಿದೆ.

ಗಿರ್ ಹಸುಗಳ ಮೂತ್ರದಲ್ಲಿ ಬಂಗಾರದ ಅಂಶ ಪತ್ತೆಯಾಗಿದೆ. ವಿಜ್ಞಾನಿಗಳು 400ಕ್ಕೂ ಅಧಿಕ ಗಿರ್ ಹಸುಗಳ ಮೂತ್ರ ಪರೀಕ್ಷೆಯನ್ನು ಜೆಎಯುನ ಫುಡ್ ಟೆಸ್ಟಿಂಗ್ ಪ್ರಯೋಗಾಲಯದಲ್ಲಿ ನಡೆಸಿದ್ದಾರೆ.

ಪ್ರಯೋಗಾಲಯದ ಪರೀಕ್ಷೆಯಲ್ಲಿ ಗಿರ್ ಹಸುವಿನ 1 ಲೀಟರ್ ಮೂತ್ರದಲ್ಲಿ 3 ಮಿಲಿ ಗ್ರಾಂನಿಂದ 10 ಮಿಲಿ ಗ್ರಾಂವರೆಗೆ ಬಂಗಾರದ ಅಂಶ ಇದ್ದಿರುವುದು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜುನಾಗಢ್ ಕೃಷಿ ಯೂನಿರ್ವಸಿಟಿ ಬಯೋಟೆಕ್ನೋಲಜಿ ವಿಭಾಗದ ಮುಖ್ಯಸ್ಥ ಡಾ.ಬಿ.ಎ.ಗೋಲಾಖಿಯಾ ಅವರ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಗಿದೆ. ಗ್ಯಾಸ್ ಕ್ರೋಮಾಟೋಗ್ರಾಫಿ -ಮಾಸ್ ಸ್ಪೆಕ್ಟೋಮೆಟ್ರಿ(ಜಿಸಿ-&ಎಂಎಸ್) ವಿಧಾನ ಬಳಸಿ ಗೋ ಮೂತ್ರದ ಪ್ರಯೋಗ ಮಾಡಲಾಗಿದೆ. 5100 ಸಂಯುಕ್ತಗಳೂ ಗೋಮೂತ್ರದಲ್ಲಿ ಕಂಡುಬಂದಿದೆ. ಇವುಗಳಲ್ಲಿ 338ಕ್ಕೂ ಹೆಚ್ಚು ಪ್ರತಿಜೀವಕ (ಆಂಟಿ ಬಯಾಟಿಕ್)ಗಳಾಗಿದ್ದು, ಜೌಷಧೀಯ ಬಳಕೆಗೆ ಬರುತ್ತದೆ. ಎಮ್ಮೆ, ಕುದುರೆ, ಒಂಟೆ, ಮೇಕೆ ಗಳ ಮೂತ್ರವನ್ನೂ ಪ್ರಯೋಗಕ್ಕೆ ಗುರಿಪಡಿಸಲಾಗಿತ್ತು ಎಂದು ಗೋಲಾಖಿಯಾ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top