ಸಮಾಚಾರ

ಒಬಿಸಿ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಿದ್ರೆ ಅವರಿಗೆ ಇಂಗ್ಲೀಷ್ ಜ್ಞಾನ ಕಮ್ಮಿ ಆಗುತ್ತಂತೆ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಒಬಿಸಿ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ  ಓದಿದ್ರೆ ಅವರಿಗೆ ಇಂಗ್ಲೀಷ್ ಜ್ಞಾನ ಕಮ್ಮಿ ಆಗುತ್ತಂತೆ….

ಹೀಗೆಂದು ಹೇಳಿದವರು KSBCC ಅಧ್ಯಕ್ಷ ಹೆಚ್.ಕಾಂತರಾಜ್, ಮೊನ್ನೆ ನ್ಯಾಷನಲ್  ಲೆವೆಲ್  ಸೆಮಿನಾರ್ನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಆಯೋಜಿಸಿದ್ದ  “ಹಿಂದುಳಿದ ವರ್ಗಗಳ ಸವಾಲುಗಳು” ಎಂಬ ವಿಷಯದ ಬಗ್ಗೆ ಪ್ರಸ್ತಾಪಿಸುವಾಗ ಈ ಹೇಳಿಕೆ ಕೊಟ್ಟಿದಾರೆ. ಆದರೆ ಈ ಹೇಳಿಕೆ ಹಲವು ಕನ್ನಡ ಅಭಿಮಾನಿಗಳ, ಸಂಘ ಸಂಸ್ಥೆಗಳ ಕೆಂಗಣ್ಣಿಗೆ ಗುರಿ ಆಗಿದೆ…

ಈ ಮೊದಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು….!!!!

ಹೌದು, ಇಂಗ್ಲಿಷ್ ಮೀಡಿಯಂ ಶಾಲೆ ತೆರೆಯಲು ಈ ಮೊದಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಲ್. ಹನುಮಂತಯ್ಯ ಅವರು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ” ಇಂಗ್ಲೀಷ್ ಕಲಿಯುವುದು ಅಲ್ಪಸಂಖ್ಯಾತರ ಜ್ಞಾನ ವೃದ್ಧಿಗೆ ಸಹಾಯವಾಗುತ್ತದೆ ಎನ್ನುವುದು ಅವೈಜ್ಞಾನಿಕ ಸಲಹೆ” ಎಂದು ಹೇಳಿಕೆ ನೀಡಿದ್ದರು…

ಅಲ್ಲ ಸ್ವಾಮಿ, ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದಿ ಇಂದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ರಣ ಕಹಳೆ ಮೊಳಗಿಸುತ್ತಿದ್ದಾರೆ, ಕನ್ನಡ ಮೀಡಿಯಂ ನಲ್ಲೇ ಓದಿ ಇಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವ್ರು ಲಕ್ಷಾಂತರ ಜನಕ್ಕೆ ಉದ್ಯೋಗ ದೊರಕಿಸಿ ಕೊಟ್ಟಿದಾರೆ, ನಮ್ಮ ಇಂಡಿಯಾದ ಪ್ರಖ್ಯಾತ ಕೆಮಿಸ್ಟ್ ಭಾರತ ರತ್ನ ಸಿಎನ್ಆರ್ ರಾವ್ ಕೂಡ ಕನ್ನಡದಲ್ಲೇ ಓದಿದ್ದು ಕಾಂತರಾಜ್ ಅವರೇ… ಅದೂ ಅಲ್ಲದೆ ಇವತ್ತು ಕರ್ನಾಟಕ ರಾಜ್ಯದ ಸಿ.ಎಂ ಅವ್ರು ಕೂಡಾ ಕನ್ನಡ ಭಾಷೆ ನಲ್ಲೇ ಓದಿ ಇಂದು ಮುಖ್ಯ ಮಂತ್ರಿ ಆದೋರು ಮರೆತಿರೇನು…??

ಹೋಗ್ಲಿ, ನೀವು ವಕೀಲರು ತಾನೆ ನೀವು ಓದಿದ ಭಾಷೆ ಯಾವುದು…? ಭಾಷೆ ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ತಿಳಿ ಹೇಳುವ ಸಾಧನವೇ ಹೊರೆತು ಬೇರೇನು ಅಲ್ಲ, ಅದನ್ನು ನಮ್ಮ ಜೀವ ಭಾಷೆ ಕನ್ನಡದಲ್ಲೇ ಮಾಡೋಣ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top