ಸಮಾಚಾರ

ಕಿರಿಕಿರಿಯಾಗು ಹಾರ್ನ್ ಬಳಸಿದರೆ ಭಾರಿ ದಂಡ ಬೀಳುವ ಸಾಧ್ಯತೆ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕೇಂದ್ರ ಸರ್ಕಾರ, ಮೋಟಾರು ವಾಹನ ಕಾಯ್ದೆಯಲ್ಲಿ ಹಲವಾರು ಮಾರ್ಪಾಟುಗಳನ್ನು ಮಾಡುತ್ತಿದ್ದು, ಟ್ರಾಫಿಕ್ ನಲ್ಲಿ, ಹಾರ್ನ್ ನಿಷೇಧಿತ ವಲಯದಲ್ಲಿ ಹಾರ್ನ್ ಮಾಡಿದರೆ ಹಾಗೂ ನಿಗದಿಪಡಿಸಿದ ಹಾರ್ನ್ ಗಳನ್ನು ಹೊರತುಪಡಿಸಿ ಹೆಚ್ಚು ಶಬ್ದ ಹೊರ ಹೊಮ್ಮುವ ಹಾರ್ನ್ ಗಳನ್ನು ಹಾಕಿಸಿಕೊಂಡರೆ ಅಂತಹ ವಾಹನ ಸವಾರರಿಗೆ ಭಾರೀ ಫೈನ್ ಬೀಳಲಿದೆ.

ಟ್ರಾಫಿಕ್ ನಲ್ಲಿ ಜನರಿಗೆ ಕಿರಿಕಿರಿಯಾಗುವಂತೆ ಹಾರ್ನ್ ಮಾಡಿದರೆ ಹಾಗೂ ಹಾರ್ನ್ ಮಾಡುವುದನ್ನು ನಿಷೇಧಿಸಿರುವ ಸ್ಥಳಗಳಲ್ಲಿ ಹಾರ್ನ್ ಮಾಡಿದರೆ ಅಂತವರ ಪ್ರಥಮ ತಪ್ಪಿಗೆ 500 ರೂ. ದಂಡ ನಂತರದ ತಪ್ಪಿಗೆ 1 ಸಾವಿರ ರೂ. ಗಳವರೆಗೆ ದಂಡ ವಿಧಿಸಲಾಗುತ್ತದೆ.

ಅಲ್ಲದೇ ಆಕರ್ಷಕವಾಗಿರುತ್ತದೆಂಬ ಕಾರಣ ಹೆಚ್ಚು ಶಬ್ದ ಮಾಡುವ ಹಾರ್ನ್ ಹಾಕಿಸಿಕೊಳ್ಳುವ ವಾಹನ ಸವಾರರಿಗೆ 5 ಸಾವಿರ ರೂ. ಗಳವರೆಗೆ ದಂಡ ವಿಧಿಸಲಾಗುತ್ತದಲ್ಲದೇ ಅಂತಹ ಹಾರ್ನ್ ಗಳನ್ನು ಅಳವಡಿಸುವ ಗ್ಯಾರೇಜ್ ನವರಿಗೆ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಚಿಂತನೆ ನಡೆಸಲಾಗಿದೆ. ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಮಳೆಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದ್ದು, ಅನುಮೋದನೆಗೊಂಡ ಬಳಿಕ ಇದು ಜಾರಿಗೆ ಬರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top