ಸಮಾಚಾರ

ಭಗತ್ ಸಿಂಗ್ ಭಯೋತ್ಪಾದಕರೆಂದು ಉಲ್ಲೇಖ: 6 ನೇ ತರಗತಿ ಪಠ್ಯಪುಸ್ತಕದಲ್ಲಿ ಎಡವಟ್ಟು!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಂಗಳೂರು: ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂಬಂತೆ ಸೆಂಟ್ರಲ್ ಸಿಲೆಬಸ್ ನ 6ನೇ ತರಗತಿ ಪುಸ್ತಕದಲ್ಲಿ ಬಿಂಬಿಸಲಾಗಿದೆ. ಈ ಬಗ್ಗೆ ಮೇಲ್ಮನೆ ಕಲಾಪದಲ್ಲಿ ಸದಸ್ಯರು ಚರ್ಚೆ ನಡೆಸಬೇಕು. ಬಳಿಕ ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.

ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಸೂರ್ಯಸೇನ್ ಅವರನ್ನು ಕ್ರಾಂತಿಕಾರಿ ಭಯೋತ್ಪಾದಕರು ಎಂಬಂತೆ ಬಿಂಬಿಸಲಾಗಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಯುವಾಗ ಸದಸ್ಯರು ಹಾಜರಿರಬೇಕು. ಇದನ್ನು ಮಾನವ ಸಂಪನ್ಮೂಲ ಸಚಿವರ ಗಮನಕ್ಕೂ ತರಲಾಗುವುದು ಎಂದು ಹೇಳಿದರು.

ಈ ಪುಸ್ತಕದಲ್ಲಿ ಏನಿದೆ?

ಇತಿಹಾಸ ತಜ್ಞ ಬಿಪಿನ್ ಚಂದ್ರ, ಮೃದುಲಾ ಮುಖರ್ಜಿಯವರು’ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ ಎಂಬ ಪುಸ್ತಕ ಬರೆದಿದ್ದಾರೆ. ಈ ಅಧ್ಯಾಯ 20ರಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸೂರ್ಯಸೇನ್ ‘ಕ್ರಾಂತಿಕಾರಿ ಭಯೋತ್ಪಾದಕರು’ ಎಂದು ಉಲ್ಲೇಖಿಸಲಾಗಿದೆ.

ಚಿತ್ತಗಾಂಗ್ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಸ್ಯಾಂಡರ್ಸ್’ನ್ನು ಭಗತ್ ಸಿಂಗ್ ಕೊಂದಿದ್ದರು. ಇದನ್ನೇ ಉಲ್ಲೇಖಿಸಿ ಭಯೋತ್ಪಾದಕ ಚಟುವಟಿಕೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

Comments

comments

Click to comment

Leave a Reply

Your email address will not be published. Required fields are marked *

To Top