ಸಮಾಚಾರ

ಶವಗಳ ಜೊತೆ ಜೀವನ ನಡೆಸುತ್ತಿರುವ ಜನ..!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮನುಷ್ಯ ಸತ್ತ ಮೇಲೆ ತುಂಬಾ ಸಮಯ ಶವವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಶುಭವೆಂದು ಭಾವಿಸಲಾಗುತ್ತದೆ. ಆದಷ್ಟು ಬೇಗ ಆತ್ಮಕ್ಕೆ ಮುಕ್ತಿ ಕೋರಿ, ಅಂತಿಮ ಸಂಸ್ಕಾರ ಮಾಡಿ ಮುಗಿಸುತ್ತಾರೆ. ಆದ್ರೆ ಆ ಊರಿನಲ್ಲಿ ಸತ್ತ ನಂತ್ರ ಅಂತಿಮ ಸಂಸ್ಕಾರ ನಡೆಯುವುದೇ ಇಲ್ಲ. ಶವದ ಜೊತೆಯಲ್ಲಿಯೇ ಜನರು ಜೀವನ ಸಾಗಿಸ್ತಾರೆ.

ಹೌದು, ಇಂಡೋನೇಷ್ಯಾದಲ್ಲಿ ಇಂತಹ ವಿಚಿತ್ರ ಪದ್ಧತಿಯೊಂದು ಜಾರಿಯಲ್ಲಿದೆ. ಸತ್ತ ನಂತ್ರ ಸಂಬಂಧಿಕರು ಅಂತಿಮ ಸಂಸ್ಕಾರ ನೆರವೇರಿಸುವುದಿಲ್ಲ. ಬದಲಾಗಿ ತಮ್ಮ ಜೊತೆಯಲ್ಲಿಟ್ಟುಕೊಳ್ಳುತ್ತಾರೆ. ದೈನಂದಿನ ಕೆಲಸಗಳಲ್ಲಿಯೂ ಅವರನ್ನು ಸೇರಿಸಿಕೊಳ್ತಾರೆ.

ಇಂಡೋನೇಷ್ಯಾದ ತೊರಾಜಾ ಸಮುದಾಯದಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ಸತ್ತ ಮೇಲೆಯೂ ವ್ಯಕ್ತಿ ಬದುಕಿದ್ದಾನೆಂದು ನಂಬಲಾಗುತ್ತದೆ. ಶವಗಳ ಜೊತೆ ಜೀವನ ಮಾಡುವುದರ ಜೊತೆಗೆ ಅವುಗಳಿಗೆ ಆಹಾರವನ್ನು ಕೂಡ ಶಾಸ್ತ್ರಕ್ಕಾಗಿ ನೀಡುತ್ತಾರೆ ಜನ. ಸತ್ತ ನಂತ್ರ ಅದ್ಧೂರಿ ಮೆರವಣಿಗೆ ಮಾಡಲಾಗುತ್ತದೆ. ಎಮ್ಮೆಯನ್ನು ಬಲಿ ನೀಡಲಾಗುತ್ತದೆ. ನಂತ್ರ ಫಾರ್ಮಾಲ್ಡಿಹೈಡ್ ಮತ್ತು ನೀರಿದ ದ್ರಾವಣವನ್ನು ದೇಹಕ್ಕೆ ಹಾಕಿ, ಅನೇಕ ವರ್ಷಗಳ ಕಾಲ ಶವ ಕೊಳೆಯದಂತೆ ನೋಡಿಕೊಳ್ಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top