ಸಮಾಚಾರ

ಸಗಣಿ ತಿನ್ನಿಸಿದ ಗೋರಕ್ಷಾ ದಳದ ಕಾರ್ಯಕರ್ತರ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಕ್ರಮವಾಗಿ ಗೋಮಾಂಸ ರಫ್ತು ಮಾಡುತ್ತಿದ್ದ ಫರೀದಾಬಾದ್ ನ ಮುಸ್ಲಿಂ ಯುವಕರಿಗೆ ಪಂಚಗವ್ಯ( ಆಕಳ ಸಗಣಿ, ಗಂಜಳ, ಹಾಲು ತುಪ್ಪ, ಮೊಸರು) ಒತ್ತಾಯಪೂರ್ವಕವಾಗಿ ತಿನ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಗೋರಕ್ಷಾ ದಳದ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದ ರಿಜ್ವಾನ್ ಹಾಗೂ ಮುಖ್ತಿಯಾರ್, ಮೇವಾಟ್ ನಿಂದ ದೆಹಲಿಗೆ 700 ಕೆಜಿಯಷ್ಟು ಗೋಮಾಂಸ ಕಾರಿನಲ್ಲಿ ಸಾಗಿಸುತ್ತಿದ್ದರು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ವೇಳೆ ವಾಹನವನ್ನು ತಡೆದ ಗೋರಕ್ಷಾ ದಳದ ಕಾರ್ಯಕರತರು ಇಬ್ಬರಿಗೂ ಪಂಚಗವ್ಯ ತಿನ್ನಿಸಿರುವ ವಿಡಿಯೋ ವೈರಲ್ ಆಗಿದೆ. ಪಂಚಗವ್ಯ ತಿನ್ನಿಸುವುದರೊಂದಿಗೆ ಗೋಮಾತಾ ಕಿ ಜೈ ಹಾಗೂ ಜೈ ಶ್ರೀ ರಾಮ್ ಎಂಬ ಘೋಷಣೆಗಳನ್ನು ಕೂಗುವಂತೆ ಜ್ವಾನ್ ಹಾಗೂ ಮುಖ್ತಿಯಾರ್ ಗೆ ಒತ್ತಾಯಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಗೋರಕ್ಷಾ ದಳದ ಕಾರ್ಯಕರ್ತರ ವಿರುದ್ಧ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top