fbpx
ವಿಶೇಷ

ಮೂಗುತಿ ಮಹತ್ವ ಗೊತ್ತೇ…?

ಮೂಗುತಿಯಿಂದ ಹೆಚ್ಚಾಗುತ್ತೆ ಮುಖದ ಅಂದ ..

ನಿಮಗೆ ನೆನಪಿರಬಹುದು. ಒಂದು ಕಾಲದಲ್ಲಿ ಟೆನಿಸ್ ತಾರೆ ಸಾನಿಯಾ ಮೂಗುತಿ ಸುಂದರಿ ಎಂದೇ ಪ್ರಖ್ಯಾತಿ ಪಡೆದಿದ್ದಳು. ಈಗಲೂ ಆಕೆಯ ಸೌಂದರ್ಯಕ್ಕೆ ಅದೇ ಮೂಗುಬೊಟ್ಟು. ಕಾಲೇಜು ಹುಡುಗಿಯರಿಗಂತೂ ಇದೇ ಸ್ಟೈಲು, ಮಾಡರ್ನ್ ಫ್ಯಾಷನ್. ಭಾರತೀಯರ ಬದುಕಿನಲ್ಲಿ ಬೇರೂರಿರುವ ಕೆಲವು ಸಂಸ್ಕøತಿಗಳನ್ನು ಎಂದೂ ಬದಲಾಯಿಸಲಾರದಷ್ಟು ಜನರಲ್ಲಿ ಹಾಸುಹೊಕ್ಕಾಗಿ ಉಳಿದಿವೆ, ಹಾಗೂ  ಮುಂದಿನ ಪೀಳಿಗೆಗಳಿಗೂ ಸಾಗುತ್ತಲೇ ಬಂದಿವೆ. ಅದರಲ್ಲಿ ಮೂಗುತಿಯೂ ಒಂದು. ಅದು ಹೆಣ್ಣಿನ ಸೌಂದರ್ಯದ ಪ್ರತೀಕ, ಸೌಭಾಗ್ಯದ ಪ್ರತೀಕ,  ಹೆಣ್ಣಿನ ಮೂಗಿನಲ್ಲಿ ಮೂಗುತಿ ಇದ್ದರೆ ಮೂಗಿಗೆ ವಿಶೇಷವಾದ ರಂಗಿನ ಜೊತೆಗೆ ಆಕೆಯಾ ಅಂದವನ್ನು ಹೆಚ್ಚಿಸುತ್ತದೆ.

ಮೂಗಿಗೆ ಮೂಗುತಿಯೇ ಅಂದ ಅನ್ನೋ ಹಾಗೆ ಮೂಗುತಿಯ ಬಳಕೆಯು ಪ್ರತಿಯೊಂದು ಧರ್ಮದಿಂದ ಧರ್ಮಕ್ಕೆ ಸಂಪ್ರದಾಯದ ಜೊತೆಗೆ ಅವರವರ ಪ್ರದೇಶಕ್ಕೆ ತಕ್ಕಂತೆ ಆಕಾರದಲ್ಲಷ್ಟೇ ಅಲ್ಲ, ಹೆಸರಲ್ಲೂ ಬದಲಾಗುತ್ತಿರುತ್ತದೆ.ಇಂತಹ ಮೂಗುತಿಯನ್ನು ನತ್ತು, ಮೂಗು ಬೊಟ್ಟು, ಬೇಸರಿ, ಬುಲಾಕು ಇತ್ಯಾದಿಯಾಗಿ ಕರೆಯುತ್ತಾರೆ.

* ಮೂಗುತಿ ಮಹತ್ವ ಗೊತ್ತೇ…?

ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷವಾದ ಮಹತ್ವವನ್ನು ಕೊಡಲಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ ಆದ್ದರಿಂದ ಇದರ ಧರಿಸುವಿಕೆಯಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯ ನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಅಷ್ಟೆ ಅಲ್ಲದೆ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ಬಿಂದು ಒತ್ತಡದ(ಆಕ್ಯಪ್ರೆಶರ್) ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ. ಕುದುರೆಗೆ ಹೇಗೆ ಮೂಗಿಗೆ ದಾರವನ್ನು ಕಟ್ಟಿ ಅದನ್ನು ನಿಯಂತ್ರಿಸಲಾಗುತ್ತೆದೆಯೋ ಅದೇ ರೀತಿಯಾಗಿ ಮೂಗುತ್ತಿ ಕೂಡ ಹೆಣ್ಣಿನ ಕೋಪ, ಹಟ, ಚಂಚಲತೆಯನ್ನು ನಿಗ್ರಹಿಸುತ್ತದೆ. ಮೂಗುತಿಯಲ್ಲಿಯೂ ವಿವಿಧ ಪ್ರಕಾರದ ಮೂಗುತಿಗಳಿವೆ, ಮದುವೆಯಂತಹ ಸಮಾರಂಭಗಳಲ್ಲಿ ದೊಡ್ಡದಾದÀ ಬಳೆಯಾಕಾರದ ಮೂಗುತಿ ವಧುವಿನ ಸಂದರ್ಯಕ್ಕೆ ಸಾಕ್ಷಿಯಾಗಿ ನಿಂತಿರುತ್ತದೆ. ಭಾರತೀಯ ಹೆಂಗಳೆಯರು ಅವರವರ ಆಚರಣೆಗಳಿಗೆ ತಕ್ಕಂತೆ ಅವರವರ ಇಚ್ಚೆಯ ಪ್ರಕಾರವಾಗಿ ಮೂಗುತ್ತಿಯನ್ನು ಧರಿಸುತ್ತಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top