ಸಮಾಚಾರ

ಇನ್ನ್ಮೇಲೆ ರೈತರಿಗೂ ಬೀಳುತ್ತೆ ತೆರಿಗೆ…!!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹೌದು ಓದುಗರೇ, ಆಶ್ಚರ್ಯವೆನ್ನಿಸಿದರೂ ನಂಬಲೇಬೇಕಾದ ಸಂಗತಿಯೊಂದು ಹೊರಬಿದ್ದಿದೆ. ಕಳೆದ ತಿಂಗಳು ರಾಜಸ್ವ  ಗ್ಯಾನ್  ಸಂಗಮ್ ಅವರು ತೆರಿಗೆ ನಿರ್ವಾಹಕರ ಎರಡು ದಿನದ ಸಮ್ಮೇಳನದಲ್ಲಿ ನೇರೇಂದ್ರ ಮೋದಿ ಬಳಿ ಈ ವಿಚಾರ ಪ್ರಸ್ತಾಪಿಸಿದ್ದು, ಸಮ್ಮೇಳನದಲ್ಲಿ tax ಅಧಿಕಾರಿಗಳು ಈ ವಿಚಾರವಾಗಿ ಗಂಭೀರವಾಗಿ ವಿಚಾರ ಮಂಡಿಸಿದ್ದು, ಒಂದು ಕೋಟಿಗು ಮೀರಿದ ಆದಾಯ ಹೊಂದಿರುವ ರೈತನನ್ನ ತೆರಿಗೆ ಪದ್ಧತಿ ಒಳಗೆ ತರುವ ಕಾಯ್ದೆಯನ್ನು ಮಂಡಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

 

ಅತಿ ಹೆಚ್ಚು ರೈತರ ಜನಸಂಖ್ಯೆ ಇರುವ ರಾಷ್ಟ್ರ ಭಾರತದಲ್ಲಿ ಸುಮಾರು 25 ಕೋಟಿ ಕುಟುಂಬಗಳು ತೆರಿಗೆ ಕಟ್ಟುವ ಕುಟುಂಬಗಳಿದ್ದು ಅದರಲ್ಲಿ 15 ಕೋಟಿ ವ್ಯವಸಾಯ ಮಾಡುತ್ತಿದ್ದರೆ, ಇನ್ನುಳಿದ ಕುಟುಂಬಗಳು ಬೇರೆ ವೃತ್ತಿ ಮಾಡುತ್ತಿದ್ದಾರೆ, ಎಂದು ರಾಜ್ಯ ಹಣಕಾಸು  ಸಚಿವ ಜಯಂತ್ ಸಿನ್ಹಾ ನರೇಂದ್ರ ಮೋದಿಗೆ ವಿವರಿಸಿದರು ಎನ್ನಲಾಗಿದೆ. ಸಭೆಯಲ್ಲಿ ತೆರಿಗೆ ಅನ್ನು ನಿಗದಿತ ಸಮಯದ ಒಳಗಾಗಿ ಕಟ್ಟುವ ಸಾರ್ವಜನಿಕರಿಗೆ ಉತ್ತೇಜಿಸುವ ಸಲುವಾಗಿ ಅವರನ್ನು insurance cover ಗೆ ಒಳಪಡಿಸುವ ಯೋಜನೆಯನ್ನು ಅಧಿಕಾರಿಗಳು ಪ್ರಧಾನಿ ಮುಂದಿಟ್ಟರು ಎನ್ನಲಾಗಿದೆ.

 

ಅದೇನೇ ಇರಲಿ, ರೈತರ ರಾಷ್ಟ್ರ ಎಂದೇ ಖ್ಯಾತಿ ಪಡೆದಿರುವ ಭಾರತದಲ್ಲಿ ಇಂದು ಸಾವಿರಾರು ಜನರಿಗೆ ಅನ್ನ ನೀಡುತ್ತಿರುವ ರೈತ ಭಾರತದ ಬೆನ್ನೆಲುಬು ಎಂದೇ ಕರೆಸಿಕೊಳ್ಳುತ್ತಾನೆ, ಆದರೆ ಸರ್ಕಾರದ ಈ ನಡೆ ಭಾರಿ ಕೋಲಾಹಲ ಉಂಟು ಮಾಡಿದ್ದು, ಈ ವಿಚಾರವಾಗಿ ರೈತ ಸಂಘಗಳು ಎಚೆತ್ತುಕೊಂಡಿದ್ದು, ಇದನ್ನು ತಪ್ಪಿಸುವ ಸಲುವಾಗಿ ಈಗಾಗಲೇ ಕಾರ್ಯೋನ್ಮುಖವಾಗಿವೆ.

 

ಮೊದಲೇ ವಿದ್ಯುತ್ ಶಕ್ತಿ ತೊಂದರೆ, ಕಲಬೆರಕೆ ರಸಗೊಬ್ಬರ, ನೀರಿನ ಅಭಾವ, ದಲ್ಲಾಳಿಗಳ ಪ್ರಭಾವದಿಂದ ಬೇಸತ್ತಿರುವ ರೈತರು ಆತ್ಮಹತ್ಯ ಹಾದಿ ತುಳಿಯುತ್ತಿದ್ದು, tax ಎಂಬ ಭೂತ ಗಾಯದ ಮೇಲೆ ಬರೆ ಎಳೆದಂತೆಯೇ ಸರಿ…

 

ಆದರೆ ಸರ್ಕಾರಕ್ಕೆ “ವ್ಯವಸಾಯದ ಆದಾಯ” ಎಂದು ಕಪ್ಪು ಹಣವನ್ನು ತೋರಿಸುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ, ಆದರೆ 1 ಕೋಟಿಗೂ ಮೀರಿದ ವ್ಯವಸಾಯದ ಆದಾಯ ಹೊಂದಿರುವ ರೈತರನ್ನು target ಮಾಡುತ್ತಿರುವ ಸರ್ಕಾರದ ಕ್ರಮವೇನೇ ಸರಿ ಇದ್ದರೂ, ಯಾರೊ ಮಾಡುತ್ತಿರುವ ತಪ್ಪಿಗೆ ಯಾರೊ ಬೆಲೆ ತೆರಬೇಕಾದ ಪರಿಸ್ಥಿತಿ ಉಂಟು ಮಾಡಿದೆ, ನಿಜವಾದ ರೈತನಿಗೆ ಪೆಟ್ಟು ಬೀಳುತ್ತಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top