fbpx
ಸಮಾಚಾರ

update ಆದ ಬೆಂಗಳೂರು ಪೊಲೀಸ್….

ಇಂದು ಬೆಳಿಗ್ಗೆ ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ 222 ಹೈಟೆಕ್ ಹೊಯ್ಸಳ ವಾಹನಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದರು.

ಸುಮಾರು 14.60 ಕೋಟಿ ವೆಚ್ಚದಲ್ಲಿ ನೂತನ ವಾಹನಗಳನ್ನು ಖರೀದಿ ಮಾಡಲಾಗಿದ್ದು, ಕರೆ ಮಾಡಿದ ಸ್ಥಳವನ್ನು ಪತ್ತೆಹಚ್ಚುವ ಜಿಪಿಎಸ್, ತುರ್ತು ಮತ್ತು ಅಪಾಯದ ಸಮಯದಲ್ಲಿ ಸಾರ್ವಜನಿಕರಿಗೆ ನೆರವಾಗುವ ಅಗತ್ಯ ವ್ಯವಸ್ಥೆಗಳನ್ನು ಈ ವಾಹನಗಳು ಹೊಂದಿವೆ.ಇವುಗಳಲ್ಲಿ ಟ್ಯಾಬ್, ಜಿಪಿಎಸ್, ಇಂಟರ್ನೆಟ್ ವ್ಯವಸ್ಥೆ ಇದ್ದು, ಈ ಎಲ್ಲಾ ವಾಹನಗಳು ಪೊಲೀಸ್ ನಿಯಂತ್ರಣ ಕೊಠಡಿ ಸಂಪರ್ಕದಲ್ಲಿರುತ್ತವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಹೇಳಿದ್ದಾರೆ.

ಬೆಂಗಳೂರಿನಾದ್ಯಂತ ಸದ್ಯ 184 ಹೊಯ್ಸಳ ವಾಹನಗಳಿದ್ದು, ಹೊಸ ವಾಹನಗಳು ಬಂದ ನಂತರ ಹಳೆಯ ವಾಹನಗಳನ್ನು ಆಯಾ ಠಾಣೆಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ.
ಗಸ್ತಿನ ವೇಳೆಯಲ್ಲಿ ವಾಹನದಲ್ಲಿ ಎಎಸ್‌ಐ, ಚಾಲಕ, ಇಬ್ಬರು ಸಹಾಯಕ ಸಿಬ್ಬಂದಿ ಇರುತ್ತಾರೆ.

100ಗೆ ಕರೆಮಾಡುದ್ರೆ ಗೊತ್ತಾಗುತ್ತೆ ನಿಮ್ಮ current ಲೊಕೇಷನ್ : ತುರ್ತು ಸಂದರ್ಭದಲ್ಲಿ 100ಕ್ಕೆ ಕರೆ ಮಾಡಿದರೆ ಆಗ ಜಿಪಿಎಸ್ ಮೂಲಕ ಸ್ಥಳವನ್ನು ಪತ್ತೆ ಹಚ್ಚಲಾಗುತ್ತದೆ ಸ್ಥಳಕ್ಕೆ ತೆರಳುವ ಹೊಯ್ಸಳ ವಾಹನದ ಸಿಬ್ಬಂದಿ, ಸಾರ್ವಜನಿಕರನ್ನು ರಕ್ಷಿಸುವ ಜೊತೆಗೆ, ಗಂಭೀರ ಸ್ವರೂಪದ ಘಟನೆಗಳು ನಡೆದಿದ್ದರೆ ಅಲ್ಲಿಯ ಚಿತ್ರ ಹಾಗೂ ವಿಡಿಯೋವನ್ನು ನಿಯಂತ್ರಣ ಕೊಠಡಿಗೆ ಕಳುಹಿಸಿಕೊಡಲಿದೆ,ಪ್ರತಿ ಪೊಲೀಸ್ ವಿಭಾಗಕ್ಕೆ ಇಂತಿಷ್ಟು ವಾಹನಗಳೆಂದು ನಿಗದಿಪಡಿಸಲಾಗಿದ್ದು, ಈ ಎಲ್ಲ ಹೊಯ್ಸಳ ವಾಹನಗಳ ನಿಯಂತ್ರಣ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ಗೆ ಒಳಪಟ್ಟಿರುತ್ತದೆ ಎಂದು ಮಾಹಿತಿ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top