fbpx
ಮಾಹಿತಿ

ದೋಣಿಮನೆಯ ಹಿನ್ನೆಲೆ

ನೀವು ಎಂದಾದರೂ ಕೇರಳದ ಹಿನ್ನೀರಿನಲ್ಲಿ ದೋಣಿಮನೆಯಲ್ಲಿ ಕುಳಿತು ನೌಕಾಯಾನ ಮಾಡಿದ್ದೀರಾ? ಇಲ್ಲದಿದ್ದಲ್ಲಿ, ಮಾಡಲೇಬೇಕು. ಇದು ನಿಜವಾಗಿಯೂ ಒಂದು ಅದ್ಭುತ ಹಾಗೂ ಮರೆಯಲಾಗದ ಅನುಭವವಾಗುತ್ತದೆ.

ದೋಣಿ ಮನೆ 3Boathouse-(1)

ಅಲೆಪ್ಪಿಗೆ ಒಮ್ಮೆ ಬಂದು ಇಲ್ಲಿನ ಜಲಮಾರ್ಗಗಳಲ್ಲಿ ಸಂಚರಿಸಿದರೆ ಸಾಕು, ನೀವು ಆ ಕ್ಷಣಗಳನ್ನು ಜೀವಮಾನದಲ್ಲಿ ಮತ್ತಿನೆಂದೂ ಮರೆಯಲಾರಿರಿ! ಇಲ್ಲಿನ ಕಡಲ ತೀರ, ಸರೋವರಗಳು, ದೋಣಿ ಮನೆ ಇವೆಲ್ಲವೂ ನಿಮಗೆ ಹೊಸ ಕಲ್ಪನೆಯನ್ನೇ ಗರಿಗೆದರಿಸುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತ ಹಿನ್ನೀರಿನಲ್ಲಿ ದೋಣಿ ವಿಹಾರ ಮಾಡುತ್ತ ಜಗತ್ತೇ ಮರೆಯಬಹುದಾದಷ್ಟು ಅನುಭೂತಿ ನಿಮ್ಮದಾಗುತ್ತದೆ. ಅಲ್ಲದೆ ಪಟ್ಟಣದ ತುಂಬ ಇತರೆ ಆಕರ್ಷಣೆಗಳು ಹಾಗೂ ಪ್ರಮುಖ ದೇವಸ್ಥಾನಗಳನ್ನೂ ಸಹ ಕಾಣಬಹುದು.

ದೋಣಿ ಮನೆ1

ನಿರ್ಮಾಣದ ಸಾಂಪ್ರದಾಯಿಕ ವಿಧಾನ:

ಪ್ರಸ್ತುತ ದಿನದ ದೋಣಿಮನೆಯು ದೊಡ್ಡದಾಗಿದ್ದು, ಬಿಡುವಿನ ಪ್ರಯಾಣಕ್ಕಾಗಿ ನಿಧಾನವಾಗಿ ಚಲಿಸುವ ಹಾಯಿಗಳನ್ನು ಬಳಸಲಾಗುತ್ತದೆ ಮತ್ತು ಇದು ಹಳೆಯ ಕಾಲದ ಕೆಟ್ಟುವಲ್ಲಂ ನ ನವೀಕೃತ ಆವೃತ್ತಿಯಾಗಿದೆ. ಮೂಲ ಕೆಟ್ಟುವಲ್ಲಂಗಳನ್ನು ಟನ್ ಗಟ್ಟಲೆ ಅಕ್ಕಿ ಮತ್ತು ಮಸಾಲೆಗಳನ್ನು ತರಲು ಬಳಸಲಾಗುತ್ತಿತ್ತು. ಒಂದು ಉತ್ತಮ ದರ್ಜೆಯ ಕೆಟ್ಟುವಲ್ಲಮ್ ಕುಟ್ಟನಾಡಿನಿಂದ ಕೊಚ್ಚಿ ಬಂದರಿಗೆ ಸುಮಾರು 30 ಟನ್ ಸರಕನ್ನು ತರುತ್ತಿತ್ತು.

ದೋಣಿ ಮನೆ 5

ಕೆಟ್ಟುವಲ್ಲಮ್ ಅನ್ನು ನಾರಿನ ಗಂಟುಗಳಿಂದ ಬಂಧಿಸಲಾಗಿರುತ್ತದೆ. ಒಂದೇ ಒಂದು ಮೊಳೆಯನ್ನೂ ದೋಣಿಯ ನಿರ್ಮಾಣಕ್ಕೆ ಬಳಸುವುದಿಲ್ಲ. ದೋಣಿಯನ್ನು ಹಲಸಿನ ಮರದ ಹಲಗೆಗಳನ್ನು ನಾರಿನಿಂದ ಒಟ್ಟಾಗಿ ಸೇರಿಸಿ ತಯಾರಿಸಲಾಗುತ್ತದೆ. ನಂತರ ಇದನ್ನು ಬೇಯಿಸಿದ ಗೋಡಂಬಿ ತಿರುಳಿನಿಂದ ತಯಾರಿಸಿದ ಕಪ್ಪು ರೇಸಿನ್ ನಿಂದ ಬಣ್ಣ ಹಾಕಲಾಗುತ್ತದೆ. ಎಚ್ಚರಿಕೆಯಿಂದ ನಿರ್ವಹಣೆ ಮಾಡಿದಲ್ಲಿ, ಇದನ್ನು ತಲೆಮಾರುಗಳ ಕಾಲ ಬಳಸಬಹುದು.

ದೋಣಿ ಮನೆ ಅಡುಗೆ ಮನೆHouseboat-Vacation-vitalmag10

ಕೆಟ್ಟುವಲ್ಲಂ ನ ಒಂದು ಭಾಗವನ್ನು ಬಿದಿರು ಹಾಗೂ ನಾರಿನಿಂದ ಹೊದಿಸಲಾಗಿರುತ್ತದೆ, ಇದನ್ನು ಪ್ರಯಾಣಿಕರಿಗೆ ಶೌಚಾಲಯ ಹಾಗೂ ಅಡಿಗೆಮನೆಯಾಗಿ ಬಳಸಬಹುದಾಗಿದೆ. ಅಡಿಗೆಯನ್ನು ದೋಣಿಯಲ್ಲಿಯೇ ತಯಾರಿಸಿ, ಹಿನ್ನೀರಿನಿಂದ ತಯಾರಿಸಿದ ತಾಜಾ ಮೀನನ್ನು ನೀಡಲಾಗುತ್ತದೆ.

ದೋಣಿ ಮನೆ 4

ಆಧುನಿಕ ಟ್ರಕ್ ಗಳು ಈ ಪುರಾತನ ಸಾರಿಗೆ ವ್ಯವಸ್ಥೆಯನ್ನು ಸ್ಥಾನಪಲ್ಲಟ ಮಾಡಿದ ನಂತರ, ಕೆಲವರು ಈ ದೋಣಿಯಿಂದ ಹೊಸದನ್ನು ಮಾಡುವ ಯೋಜನೆಯಿಂದ, ಸುಮಾರು 100 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಇಡಲಾಗಿತ್ತು. ಪ್ರಯಾಣಿಕರಿಗೆ ಇರಲು ಅನುಕೂಲವಾಗುವಂತೆ ವಿಶೇಷ ಕೊಠಡಿಗಳನ್ನು ನಿರ್ಮಿಸಿ, ಈ ದೋಣಿಗಳು ನಿಕಟ-ವಿನಾಶದ ಅಂಚಿನಿಂದ ಮತ್ತೆ ಇಂದಿನ ಬಹು ದೊಡ್ಡ ಜನಪ್ರಿಯತೆಯನ್ನು ಪಡೆದಿವೆ.

Srinagar: An aerial view of Dal Lake filled with deluxe houseboats, which is the main attraction of domestic and foreign tourists, in Srinagar on Tuesday. PTI Photo (PTI7_21_2015_000230A)

ಈಗ ದೋಣಿಮನೆಗಳು ಹಿನ್ನೀರಿನಲ್ಲಿ ಪರಿಚಿತ ದೃಶ್ಯವಾಗಿದ್ದು ಅಲಪ್ಪುಳ ಒಂದರಲ್ಲೇ ಸುಮಾರು 500 ದೋಣಿಮನೆಗಳು ಕಂಡುಬರುತ್ತವೆ.

ಬೊಟ್ ಹೌಸ್

ಕೆಟ್ಟುವಲ್ಲಂಗಳನ್ನು ದೋಣಿಮನೆಯಾಗಿ ಪರಿವರ್ತಿಸುವಾಗ, ಕೇವಲ ಪ್ರಾಕೃತಿಕ ಉತ್ಪನ್ನಗಳನ್ನೇ ಬಳಸುವಂತೆ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ಬಿದಿರಿನ ಚಾಪೆಗಳು, ಕಡ್ಡಿಗಳು ಮತ್ತು ಅಡಿಕೆ ಮರದ ಕಾಂಡಗಳನ್ನು ಮೇಲ್ಛಾವಣಿಗೆ ಬಳಸಿದರೆ, ನಾರಿನ ಚಾಪೆ, ಮತ್ತು ಮರದ ಹಲಗೆಗಳನ್ನು ನೆಲಹಾಸಿಗೆ ಬಳಸಲಾಗುತ್ತದೆ ಹಾಗೂ ತೆಂಗಿನಮರದ ಕಾಂಡ ಮತ್ತು ನಾರನ್ನು ಹಾಸಿಗೆಗಾಗಿ ಬಳಸಲಾಗುತ್ತದೆ. ದೀಪಕ್ಕಾಗಿ, ಸೌರ ಫಲಕಗಳನ್ನು ಬಳಸುತ್ತಾರೆ.

ದೋಣಿ ಮನೆ 2

ದೋಣಿಮನೆಯಲ್ಲಿ ಏನೆಲ್ಲಾ ಇದೆ  ಗೊತ್ತಾ?

ಇಂದು, ದೋಣಿಮನೆಯು ಅತ್ಯುತ್ತಮವಾದ ಶಯನಗೃಹಗಳು, ಆಧುನಿಕ ಶೌಚಾಲಯ, ಆಕರ್ಷಕ ಲಿವಿಂಗ್ ರೂಂ, ಅಡಿಗೆಮನೆ ಮತ್ತು ದೃಶ್ಯವನ್ನು ನೋಡಲು ಬಾಲ್ಕನಿಗಳನ್ನು ಹೊಂದಿದ್ದು, ಇದು ಆಧುನಿಕ ಸೌಲಭ್ಯಗಳ ಎಲ್ಲಾ ಅನುಕೂಲಗಳನ್ನೂ ಹೊಂದಿದೆ. ಕಾಂಡ ಅಥವಾ ಅರೆ ಕತ್ತರಿಸಿದ ತಾಳೆಯ ಮೇಲ್ಛಾವಣಿಯು ನೆರಳನ್ನು ನೀಡುತ್ತದೆ ಮತ್ತು ತಡೆರಹಿತ ನೋಟವನ್ನು ಸವಿಯಲು ನೆರವಾಗುತ್ತದೆ. ಹೆಚ್ಚಿನ ದೋಣಿಗಳು 40 ಹೆಚ್ ಪಿ ಎಂಜಿನ್ ನ ಪವರ್ ಅನ್ನು ಹೊಂದಿವೆ. ಎರಡು ಅಥವಾ ಹೆಚ್ಚು ದೋಣಿಮನೆಗಳನ್ನು ಸೇರಿಸಿ ಮಾಡಿದ ದೋಣಿ ಟ್ರೈನ್ ಗಳನ್ನು ಸಹ ವೀಕ್ಷಕರು ದೊಡ್ಡ ಗುಂಪುಗಳಲ್ಲಿ ಬಳಸುತ್ತಾರೆ.

ಬೊಟ್

ಒಂದು ದಿನದ ಪ್ರಯಾಣಕ್ಕೆ 10 ಸಾವಿರ ರೂ.

ಶತಮಾನಗಳ ಹಿಂದೆ ಕೇರಳದ ರಾಜರು ಮತ್ತು ವ್ಯಾಪಾರಿಗಳು ಸಾರಿಗೆ ಸೇವೆಗೆ ದೋಣಿ ಮನೆಗಳನ್ನೇ  ಅವಲಂಬಿಸಿದ್ದರು. ಈಗ ಇದು ಪ್ರವಾಸೋದ್ಯಮವಾಗಿ  ಮಾರ್ಪಟ್ಟಿದೆ. ಹಿನ್ನೀರ ದಂಡೆಯ ಸಣ್ಣ ಹಳ್ಳಿಗಳ ಜನಜೀವನ, ಸಂಸ್ಕೃತಿ, ಸಂಚಾರ ವ್ಯವಸ್ಥೆ ಕೃಷಿ ಪದ್ಧತಿಯ ದರ್ಶನವೂ ಈ ನೀರಯಾನದಲ್ಲಿ ಆಗುತ್ತದೆ. ಐಷಾರಾಮಿ ದೋಣಿಮನೆಗಳ ನಿರ್ಮಾಣಕ್ಕೆ ಲಕ್ಷದಿಂದ ಕೋಟಿಗಟ್ಟಲೆ ಬಂಡವಾಳ ಬೇಕಾಗುತ್ತದೆ. ಕೇರಳದಲ್ಲಿ 1,200 ದೋಣಿಮನೆಗಳಿವೆ. ಇದರಲ್ಲಿ ಹರಿಸಲು ಡಿಸೆಂಬರ್‌ನಿಂದ ಮಾರ್ಚ್‌ ಅವಧಿಯಲ್ಲಿ ವಿದೇಶಿಗರ ದಂಡೇ ಹರಿದುಬರುತ್ತದೆ. ಅಂದಹಾಗೆ ಒಂದು ಕೊಠಡಿಯ ದೋಣಿಮನೆಯಲ್ಲಿ ಒಂದು ದಿನ ಹರಿಸಬೇಕೆಂದರೆ 10 ರಿಂದ 20 ಸಾವಿರ ರೂ. ನೀಡಬೇಕು. ದೋಣಿ ಮನೆಗಳಿಂದ ಕೇರಳ ಗಳಿಸುವ ವಾರ್ಷಿಕ ವರಮಾನ 164 ಕೋಟಿ ರೂ. ಅದರಲ್ಲಿ 120 ಕೋಟಿ ರೂ. ವರಮಾನ ಅಲೆಪ್ಪಿಯ ದೋಣಿ ಮನೆಗಳಿಂದಲೇ ಬರುತ್ತವೆ.

ದೋಣಿ ಮನೆ 6

ದೋಣಿಮನೆಯ ನಿಜವಾದ ಆಕರ್ಷಣೆಯೆಂದರೆ ಸ್ಪರ್ಶಿಸಲಾರದ ಮತ್ತು ಪ್ರವೇಶಿಸಲು ನಿರ್ಬಂಧವಾದ ಗ್ರಾಮೀಣ ಕೇರಳದ  ಉಸಿರು ನಿಲ್ಲಿಸುವಂತಹ ಆಕರ್ಷಕ ನೋಟವನ್ನು ನೀವು ತೇಲುತ್ತಲೇ ನೋಡಬಹುದು! ಈಗ, ಇದು ನಿಜವಾಗಿಯೂ ಆಕರ್ಷಣೀಯವಲ್ಲವೇ?

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top