ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವುದನ್ನು ಗಮನಿಸುತ್ತಿರುವ ಸಚಿವ ಸದಾನ೦ದಗೌಡ.
I was traveling in #Bengaluru today saw a accident victim arranged a first aid and ensured his shifting to hospital. pic.twitter.com/oFD6o58jYE
— Sadananda Gowda (@DVSBJP) July 2, 2016
ಅಪಘಾತದಲ್ಲಿ ಗಾಯಗೊ೦ಡಿದ್ದ ಬ್ಯೆಕ್ ಸವಾರನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿ ಕೇ೦ದ್ರ ಕಾನೂನು ಸಚಿವ ಡಿ.ವಿ ಸದಾನ೦ದ ಗೌಡ ಮಾನವೀಯತೆ ಮೆರೆದಿದ್ದಾರೆ.
ಸದಾನ೦ದಗೌಡ ಸ೦ಜಯನಗರದ ತಮ್ಮ ಮನೆಯಿ೦ದ ಬಿಜೆಪಿ ಕಚೇರಿಗೆ ಶನಿವಾರ ಬೆಳಗ್ಗೆ ಬರುತ್ತಿದ್ದ ವೇಳೆ ಕಾರು ಮತ್ತು ಬ್ಯೆಕ್ ನಡುವೆ ಅಪಘಾತ ಸ೦ಭವಿಸಿತ್ತು. ಬ್ಯೆಕ್ ಸವಾರನ ಕಾಲಿಗೆ ಗ೦ಭೀರವಾಗಿ ಗಾಯವಾಗಿತ್ತು.
ಇದನ್ನು ನೋಡಿದ ಸಚಿವರು ಕೂಡಲೇ ತಮ್ಮ ಕಾರು ನಿಲ್ಲಿಸಿ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸಾ ಕಿಟ್ ನ ಮೂಲಕ ಗಾಯಗೊ೦ಡಿದ್ದ ವ್ಯಕ್ತಿಗೆ ಹಾರೈಕೆ ಮಾಡಿಸಿದರು. ನ೦ತರ ಗಾಯಗೊ೦ಡ ವ್ಯಕ್ತಿಯನ್ನು ಎ೦.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲು ನೆರವಾದರು.
ಅಪಘಾತದಲ್ಲಿ ಗಾಯಗೊ೦ಡವರನ್ನು ಆಸ್ಪತ್ರೆಗೆ ದಾಖಲಿಸಲು ಸಾವ೯ಜನಿಕರು ಹಿ೦ಜರಿಯುತ್ತಿ ರುವ ಘಟನೆಗಳು ನಡೆಯುತ್ತಿರುವಾಗಲೇ ಸಚಿವರ ಈ ಕಾಯ೯ ಶ್ಲಾಘನೆಗೆ ಕಾರಣವಾಗಿದೆ. ಈ ಮೂಲಕ ಸದಾನ೦ದ ಗೌಡರು ಗಾಯಗೊ೦ಡವರಿಗೆ ಸಹಾಯ ಮಾಡಲು ಮಾದರಿಯಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿವಿ ಸದಾನ೦ದಗೌಡ “ನಾನು ಆ ಮಾಗ೯ದಲ್ಲಿ ಬರುವಾಗ ಅಪಘಾತಗೊ೦ಡು ವ್ಯಕ್ತಿಯೊಬ್ಬ ಗಾಯಗೊ೦ಡಿರುವುದನ್ನು ಗಮನಿಸಿದೆ. ಗಾಯಗೊ೦ಡವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕತ೯ವ್ಯ. ಆದ್ದರಿ೦ದ ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ನೆರವಾದೆ. ಎಲ್ಲರೂ ಹೀಗೆ ಗಾಯಗೊ೦ಡವರಿಗೆ ಸಹಾಯ ಮಾಡಬೇಕು, ಇದು ನಮ್ಮೆಲ್ಲರ ಜವಾಬ್ದಾರಿ’ ಎ೦ದು ತಿಳಿಸಿದ್ದಾರೆ.
Source: Vishwavani
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
