fbpx
ಸಮಾಚಾರ

ಭಾರತದ ಸೈನ್ಯದಲ್ಲಿ 9 mm ಗುಂಡುಗಳ ಕೊರತೆ…

ಅತಿ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಮೊದಲನೇ ಸ್ಥಾನ ಪಡೆದಿರುವ ಬಲಿಷ್ಠ ರಾಷ್ಟ್ರ ಭಾರತಕ್ಕೆ 9 mm ಗುಂಡುಗಳ ಕೊರತೆ ಉಂಟಾಗಿದೆ. ಇದರಿಂದ ಎಚ್ಚತ್ತುಕೊಂಡಿರುವ ರಕ್ಷಣಾ ಸಚಿವಾಲಯ ತಕ್ಷಣ ಗ್ಲೋಬಲ್ ಟೆಂಡರ್ ಮೂಲಕ ಆಮದು ಮಾಡಿಕೊಳ್ಳಲು ಸೂಚಿಸಿದೆ.

ಭಾರತವು ಸುಮಾರು 9 ಲಕ್ಷದಷ್ಟು ಬಲಿಷ್ಠ ಪ್ಯಾರಾಮಿಲಿಟರಿ ಪಡೆ ಹೊಂದಿದ್ದು, ಭಾರತದ ಗಡಿ, ಪಠಾಣ್ ಕೋಟ್ ನಲ್ಲಿ ನೆಡೆದ ದಾಳಿಗಳ ತುರ್ತು ಸಂದರ್ಭಗಳಲ್ಲಿ ಸೈನ್ಯ ತೊಡಗಿಕೊಳ್ಳುತ್ತದೆ, ಆದರೆ ಈ ಕೊರತೆ ಭಾರತ ಸೈನ್ಯ ಶಕ್ತಿಯನ್ನು ಕುಗ್ಗಿಸಿದೆ.

“THE SUNDAY EXPRESS ” ಮಾಹಿತಿ ಪ್ರಕಾರ 2016-2017 ನಲ್ಲಿ ಸರಿ ಸುಮಾರು 75% ರಷ್ಟು 9 mm ಗುಂಡುಗಳ ಕೊರತೆ ಇದೆ. 9.3 ಕೋಟಿಯಷ್ಟು ಬೇಡಿಕೆ ಇದ್ದು, ordinance factory board(OFB) 75 ಲಕ್ಷದ ಬದಲು 2.3 ಕೋಟಿ ಪೂರೈಕೆ ಮಾಡಲು ಒಪ್ಪಿಕೊಂಡಿದೆ.

‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುದ್ರಂತೆ” ಅನ್ನೋ ಗಾದೆ ತರ ಸಚಿವಾಲಯ ಕೊರತೆಯಿಂದ ಎಚ್ಚತ್ತುಕೊಂಡಿದ್ದು, 9 mm ಗುಂಡುಗಳನ್ನು ತಯಾರಿಸಲು ಕಾರ್ಖಾನೆ ತೆರೆಯಲು ಯೋಜನೆ ಹಾಕಿದೆ, ಇನ್ನು ಮುಂದೆಯಾದರೂ ಈ ರೀತಿ ಆಗದೆ ಇರುವ ರೀತಿಯಲ್ಲಿ ಸಚಿವಾಲಯ ನೋಡಿಕೊಳ್ಳಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top