fbpx
ತಿಂಡಿ ತೀರ್ಥ

ಹುಬ್ಬಳ್ಳಿ ಖಡಕ್ ಜ್ವಾಳದ ರೊಟ್ಟಿ ವಿದೇಶದಲ್ಲೂ ಸಿಕ್ತಾವ್ರೀ!

ಹುಬ್ಬಳ್ಳಿ: ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ಕಡೆ ಕುಳಿತು ನೀವು ಹುಬ್ಬಳ್ಳಿಯ ಖಡಕ್ ಜೋಳದ ರೊಟ್ಟಿ ಸವಿಯಬಹುದು. ಹೌದು, ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಆಹಾರ ಜೋಳದ ರೊಟ್ಟಿ ಈಗ ವಿದೇಶಗಳಿಗೆ ಪ್ರಯಾಣಿಸುತ್ತಿದೆ.

Chapati-catering india arab di bali

ಹುಬ್ಬಳ್ಳಿಯ ಪೂರ್ವ ಫುಡ್ ಪ್ರಾಡಕ್ಟ್ಸ್ ಉತ್ತರ ಕರ್ನಾಟಕದ ಜೋಳದ ರೊಟ್ಟಿಯನ್ನು ವಿದೇಶಗಳಿಗೆ ರವಾನಿಸುತ್ತಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಪಶ್ಚಿಮ ಏಷ್ಯಾ, ಅಮೆರಿಕ ಮುಂತಾದ ದೇಶಗಳಲ್ಲಿ ರೊಟ್ಟಿಗೆ ಬೇಡಿಕೆ ಹೆಚ್ಚಾಗಿದೆ.
ಪಾಟೀಲ್ ಕುಟುಂಬ ಪೂರ್ವ ಫುಡ್ ಪ್ರಾಡಕ್ಟ್ಸ್ಅನ್ನು ನಡೆಸುತ್ತಿದೆ. 10 ರಿಂದ 12 ರೊಟ್ಟಿಗಳನ್ನು ಪ್ಯಾಕ್ ಮಾಡಿ ವಿದೇಶಕ್ಕೆ ಕಳಿಸಲಾಗುತ್ತದೆ. ಏಳು ಹಂತಗಳಲ್ಲಿ ಪ್ಯಾಕ್ ಮಾಡಿರುವ ರೊಟ್ಟಿಗಳು 6 ರಿಂದ 9 ತಿಂಗಳ ತನಕ ಕೆಡದೇ ಹಾಗೇ ಉಳಿಯುತ್ತವೆ.

ಚಿಕ್ಕ ಮೆಸ್ ಆರಂಭ : ಲಿಂಗೇಗೌಡ ಪಾಟೀಲ್ ಮತ್ತು ಪುಷ್ಪಾ ಪಾಟೀಲ್ ಈ ಪೂರ್ವ ಫುಡ್ ಪ್ರಾಡಕ್ಟ್ಸ್ ನೋಡಿಕೊಳ್ಳುತ್ತಾರೆ. 2011ರಲ್ಲಿ ಇವರು ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಚಿಕ್ಕ ಮೆಸ್ ಆರಂಭಿಸಿದರು. 2 ರಿಂದ 3 ಮಹಿಳೆಯರು ಆಗ ದಿನಕ್ಕೆ 500-600 ರೊಟ್ಟಿ ಮಾಡುತ್ತಿದ್ದರು.

ಈಗ ರೊಟ್ಟಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳುವ ಲಿಂಗೇಗೌಡರು, ಸದ್ಯ 35 ಮಹಿಳೆಯರು ನಿತ್ಯ 10 ರಿಂದ 12 ಸಾವಿರ ರೊಟ್ಟಿಗಳನ್ನು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಪ್ರತಿ ತಿಂಗಳು 1.5 ರಿಂದ 2 ಲಕ್ಷ ರೊಟ್ಟಿಗಳನ್ನು ಮಾರಾಟ ಮಾಡುತ್ತಾರೆ. ಕಳೆದ ವಾರ 16 ಸಾವಿರ ರೊಟ್ಟಿಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗಿದೆ. ಜೋಳದ ಜೊತೆಗೆ ಸಜ್ಜೆ ರೊಟ್ಟಿ, ರಾಗಿ ರೊಟ್ಟಿ, ಚಪಾತಿ, ಶೇಂಗಾ ಚಟ್ನಿಯನ್ನು ಮಾರಾಟ ಮಾಡಲಾಗುತ್ತಿದೆ. ಜೋಳದ ರೊಟ್ಟಿಯ ಗುಣ ಮಟ್ಟ ಕಡಿಮೆಯಾಗದಂತೆ ಪುಷ್ಪಾ ಪಾಟೀಲ್ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ದೇಶದಲ್ಲೂ ಹೆಚ್ಚಿ ಬೇಡಿಕೆ : ಹುಬ್ಬಳ್ಳಿಯಲ್ಲಿ ತಯಾರಾಗುವ ಜೋಳದ ರೊಟ್ಟಿಗೆ ದೇಶದಲ್ಲೂ ಭಾರೀ ಬೇಡಿಕೆ ಇದೆ. ಬೆಂಗಳೂರು, ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ಕರ್ನಾಟಕವ ವಿವಿಧ ಜಿಲ್ಲೆಗಳು. ಗುರ್ಗಾಂವ್, ಮುಂಬೈ, ಹೈದರಾಬಾದ್, ಸೂರತ್, ಗುಜರಾತ್‌ನಲ್ಲಿಯೂ ಬೇಡಿಕೆ ಹೆಚ್ಚಿದೆ. ಬೀದರ್‌ನಲ್ಲಿರುವ ಎಸ್‌ಎಸ್ ರೆಡ್ಡಿ ಫುಡ್ ಪ್ರಾಡಕ್ಟ್ಸ್ ಹುಬ್ಬಳ್ಳಿಯಿಂದ ಪ್ರತಿ ತಿಂಗಳು ಸುಮಾರು 40 ರಿಂದ 45 ಸಾವಿರ ರೊಟ್ಟಿಯನ್ನು ಖರೀದಿ ಮಾಡುತ್ತದೆ. ಪ್ರತಿದಿನ 200 ರೊಟ್ಟಿಯನ್ನು ಅಮೆರಿಕ, ಇಂಗ್ಲೆಂಡ್‌, ಹೈದರಾಬಾದ್, ತೆಲಂಗಾಣಕ್ಕೆ ಕಳುಹಿಸಲಾಗುತ್ತದೆ

Source: oneindia

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top