Karnataka

ಕ್ರೀಡಾಪಟುಗಳನ್ನು ಹುರಿದುಂಬಿಸಿ, ಶುಭಕೋರಿದ ಪ್ರಧಾನಿ

ನವದೆಹಲಿ: ಗೆದ್ದಮೇಲೆ ಅಭಿನಂದಿಸಲು ನಮ್ಮ ದೇಶದಲ್ಲಿ ಸಾಕಷ್ಟು ನಾಯಕರಿದ್ದಾರೆ…ಆದರೆ ಗೆಲುವಿನ ಮುಂಚೆ ಅವರ ಆತ್ಮವಿಶ್ವಾಸ ಹೆಚ್ಚಿಸಲು ಇರುವುದು ಮೋದಿಜಿ ಮಾತ್ರ….

ಈ ಬಾರಿಯ ಒಲಿಂಪಿಕ್ಸ್ಗೆ ತೆರಳುತ್ತಿರುವ ಭಾರತೀಯ ಅಥ್ಲೀಟ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಸೋಮವಾರ ಬೆಳಗ್ಗೆ ಇಲ್ಲಿನ ಮಾಣಿಕ್ಷಾ ಸೆಂಟರ್ನಲ್ಲಿ ಏರ್ಪಡಿಸಲಾಗಿದ್ದ ಪ್ರಧಾನಿ ಭೇಟಿ ಸಮಾರಂಭಕ್ಕೆ ಆಗಮಿಸಿದ್ದ ನರೇಂದ್ರ ಮೋದಿ, ಕ್ರೀಡಾಪಟುಗಳನ್ನು ಹುರಿದುಂಬಿಸಿದರು.

ಹಿಂದಿನ ಕೂಟಗಳಿಗೆ ಹೋಲಿಸಿದರೆ, ಅಂದಹಾಗೆ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ (ನೂರಕ್ಕೂ ಹೆಚ್ಚು) ಅಥ್ಲೀಟ್ಗಳು ಒಲಿಂಪಿಕ್ಸ್ಗೆ ಕಾಲಿಟ್ಟಿದ್ದಾರೆ. ಬಾಕ್ಸರ್ಗಳಾದ ಮನೋಜ್ ಕುಮಾರ್, ಶಿವಥಾಪ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಸೇರಿದಂತೆ ಹಲವಾರು ಪ್ರಮುಖ ಕ್ರೀಡಾಪಟುಗಳು ಪ್ರಧಾನಿಯ ನುಡಿಗಳಿಂದ ಮುದಗೊಂಡರು.

ಅಥ್ಲೀಟ್ಗಳಿಗೆ ಪ್ರಧಾನಿ ಶುಭಾಶಯ

ಅಥ್ಲೀಟ್ಗಳಿಗೆ ಪ್ರಧಾನಿ ಶುಭಾಶಯ1 ಅಥ್ಲೀಟ್ಗಳಿಗೆ ಪ್ರಧಾನಿ ಶುಭಾಶಯ2 ಅಥ್ಲೀಟ್ಗಳಿಗೆ ಪ್ರಧಾನಿ ಶುಭಾಶಯ3 ಅಥ್ಲೀಟ್ಗಳಿಗೆ ಪ್ರಧಾನಿ ಶುಭಾಶಯ4

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top