ಸಮಾಚಾರ

ಸಾಯೋಕೆ ಮುಂಚೆ ನೋಡಲೇ ಬೇಕಾದ ಸಿನಿಮಾ

ಆಲೆಮನೆ ಎಂಬ ಪದವೇ ಹಲವರಿಗೆ ಅಪರಿಚಿತ. ಕಬ್ಬು ಕೊಯ್ಲಿನ ಸೀಸನ್ನಲ್ಲಿ ಕಬ್ಬಿನಗದ್ದಾಯ ಕಬ್ಬಿನಹಾಲು ಮತ್ತು ಬಿಸಿಬೆಲ್ಲ ಮಾಡುವ ಪ್ರಕ್ರಿಯೆಗೆ ಆಲೆಮನೆ ಅಂತಾರೆ. ಅದನ್ನೇ ಶೀರ್ಷಿಕೆಯಾಗಿಟ್ಟು ಸಿನಿಮಾ ಮಾಡಿದ್ದರು ಮೋಹನ್ ಕುಮಾರ್ ಎಂಬ ನಿರ್ದೇಶಕರು. ಸಸ್ಪೆ ಥ್ರಿಲ್ಲರ್ ಆಗಿದ್ದ ಈ ಚಿತ್ರದಲ್ಲಿ ಸುರೇಶ್ ಹೆಬ್ಳಿಕರ್ ಮತ್ತು ರೂಪಾ ಚಕ್ರವರ್ತಿ ಪ್ರಧಾನ ಪಾತ್ರದಲ್ಲಿದ್ದರು. ಇದು ಅಂದಿನ ಕಾಲದಲ್ಲಿ ಅಡಲ್ಟ ಥ್ರಿಲ್ಲರ್ ಕೆಟಗರಿಯ ಚಿತ್ರ ಅನಿಸಿಕೊಂಡಿತ್ತು.

ಮನೋವ್ಯಾಧಿ ಇರುವಾತ ಹಾಗೂ ಆತನ ಸುಂದರ ಪತ್ನಿ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾರೆ. ಪತ್ನಿ ಒಂದು ಸಂಜೆ ಬರ್ಬರ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗುತ್ತಾಳೆ. ಆರೋಪ ಪತಿಯ ಮೇಲೆ ಬರುತ್ತೆ. ಆರೋಪದಿಂದ ಆತ ಹೇಗೆ ಹೊರಬರುತ್ತಾನೆ. ಹಳ್ಳಿಗೆ ಹೊಸದಾಗಿ ಬಂದ ಶಿಕ್ಷಕ ಚಿತ್ರಕ್ಕೆ ಹೇಗೆ ತಿರುವು ನೀಡುತ್ತಾನೆ ಎಂಬುದೇ ಮುಂದಿನ ಕಥೆ. ಚಿತ್ರಕ್ಕೆ ಅಶ್ವಥ್-ವೈದಿ ಜೋಡಿಯ ಸಂಗೀತವಿತ್ತು. ದೊಡ್ಡರಂಗೇಗೌಡ ಸಾಹಿತ್ಯದ ಎಸ್ಪಿಬಿ ಗಾಯನದ ನಮ್ಮೂರ ಮಂದಾರ ಹೂವೇ.. ಗೀತೆಯನ್ನು ಕೇಳದ ಕನ್ನಡಿಗನೇ ಇರಲಿಕ್ಕಿಲ್ಲ. ಅಷ್ಟೊಂದು ಜನಪ್ರಿಯ ಹಾಡದು. 1981ರಲ್ಲಿ ತೆರೆಕಂಡ ಈ ಚಿತ್ರ ಕಮರ್ಷಿಯಗಿಯೂ ಯಶಸ್ವಿಯಾಗಿತ್ತು.

ದೊಡ್ಡರಂಗೇಗೌಡ ಸಾಹಿತ್ಯದ ಎಸ್ಪಿಬಿ ಗಾಯನದ ನಮ್ಮೂರ ಮಂದಾರ ಹೂವೇ.. ಕೇಳಿ ಆನಂದಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top