ಸಮಾಚಾರ

ಗುಜರಾತ್ ನಲ್ಲಿ ದುರಂತ ಘಟನೆ ಪತಿ ಮೇಲೇ ಬಿದ್ದ ದಢೂತಿ ಪತ್ನಿ: ದಂಪತಿ ಸಾವು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಹಮದಾಬಾದ್: ರಾಜ್ ಕೋಟ್: ದಢೂತಿ ದೇಹದಿಂದ ವಿಶ್ವದಾಖಲೆ ಮಾಡುವುದು, ಸ್ತೂಲಕಾಯದಿಂದ ಆರೋಗ್ಯ ಹದಗೆಟ್ಟು ಮೃತಪಡುವುದು ಹೊಸದೇನಲ್ಲ. ಆದರೆ, ಮಹಿಳೆಯಬ್ಬರ ದಢೂತಿ ದೇಹ ಇಡೀ ಕುಟುಂಬದ ನೆಮ್ಮದಿಯನ್ನೇ ನಾಶಪಡಿಸಿದರೆ? ಹೆಂಡತಿ ಮೇಲೆ ಬಿದ್ದ ರಭಸಕ್ಕೆ ಪತಿ ಹಾಗೂ ಪತ್ನಿ ಒಬ್ಬರೂ ಒಟ್ಟಿಗೆ ಮೃತಪಟ್ಟರೆ? ನಂಬಲು ಕಷ್ಟವೆನಿಸಿದರೂ ಇಂಥದ್ದೊಂದು ದಾರುಣ, ವಿಚಿತ್ರ ಹಾಗೂ ವಿಷಾದಕರ ಘಟನೆ ಗುಜಾರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ.

68 ವರ್ಷದ ಮಂಜುಳಾ ವಾತ್ಲಾನಿ 128ಕೆಜಿ ತೂಕ ಹೊಂದಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮಗ ಆಶೀಶ್ ನನ್ನು ನೋಡಲು ಗಡಿಬಿಡಿಯಿಂದ ಮೆಟ್ಟಿಲು ಹತ್ತುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪತ್ನಿ ಮಂಜುಳಾ ಮೆಟ್ಟಿಲು ಏರುತ್ತಿದ್ದಾಗ ಬೆನ್ನಹಿಂದೆಯೇ ಪತಿ ನಟವರ್ ಲಾಲ್ ಕೂಡಾ ಬರುತ್ತಿದ್ದರು. ಅತಿಯಾದ ಭಾರ ಹೊಂದಿದ್ದ ಪತ್ನಿ ಸಮತೋಲನ ಕಳೆದುಕೊಂಡು ಕಾಲು ಜಾರಿದ ಪರಿಣಾಮ ಪತಿಯ ಮೈಮೇಲೆ ಬಿದ್ದಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಇಬ್ಬರೂ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

ಸೊಸೆಗೂ ಕಾಲು ಮುರಿತ:

ಅತ್ತೆ ಮಾವ ಉರುಳೀಬಿದ್ದಿದ್ದರಿಂದ ಗಾಬರಿಗೊಂಡ ನಿಶಾ, ಇವರನ್ನು ರಕ್ಷಿಸಲು ಓಡಿ ಬರುತ್ತಿರುವಾಗ ತಾನೂ ಜಾರಿ ಬಿದ್ದಿದ್ದಾಳೆ. ಇದರಿಂದ ಆಕೆಯ ಕಾಲು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top