ಧರ್ಮ

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಮಹಿಳೆ!

ವಾರಂಗಲ್: ಮಾನವೀಯತೆ ಪದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬಹುಶಃ ಸಿಗಲಾರದು. ವೃದ್ಧಾಶ್ರಮದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುಸ್ಲಿಂ ಮಹಿಳೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮುಸ್ಲಿಮ್

ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಯಾಕುಬ್ ಬಿ ಎಂಬಾಕೆ ತನ್ನ ಪತಿಯ ಜೊತೆಗೂಡಿ ವೃದ್ದಾಶ್ರಮವನ್ನು ನಡೆಸುತ್ತಿದ್ದಾರೆ. ವೃದ್ದಾಶ್ರಮದಲ್ಲಿ ಆಶ್ರಯ ಪಡೆದು ಟೇಲರ್ ವೃತ್ತಿ ಮಾಡಿಕೊಂಡಿದ್ದ ಕೆ.ಶ್ರೀನಿವಾಸ್(70ವರ್ಷ) ಮಂಗಳವಾರ ರಾತ್ರಿ ತೀರಿಕೊಂಡಿದ್ದರು. ಶ್ರೀನಿವಾಸ್ ಎರಡು ವರ್ಷಗಳ ಹಿಂದೆ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿದ್ದರು. ಕುಟುಂಬದಿಂದ ಹೊರಹಾಕಲ್ಪಟ್ಟಿದ್ದ ಶ್ರೀನಿವಾಸ್ಗೆ ಯಾಕುಬ್ ಬಿ ಆಶ್ರಯ ನೀಡಿದ್ದರು.

ಶ್ರೀನಿವಾಸನ್ ಮೃತಪಟ್ಟಾಗ ಅವರ ಮಗ ಶರತ್ಗೆ ಫೋನ್ ಮಾಡಿ ವಿಷಯ ತಿಳಿಸಲಾಗಿತ್ತು. ಆದರೆ ಆತ ತಾನು ಮತಾಂತರವಾಗಿದ್ದು, ಹಿಂದೂ ಪದ್ದತಿಯಂತೆ ಅಂತಿಮ ವಿಧಿ-ವಿಧಾನವನ್ನು ನೆರವೇರಿಸಲಾರೆ ಎಂದು ಹೇಳಿದ್ದ.

ನಂತರ ಕೀರ್ತಿ ಶ್ರೀನಿವಾಸ್ ಅವರನ್ನು ನೋಡಿಕೊಳ್ಳುತ್ತಿದ್ದ ಮುಸ್ಲಿಂ ಮಹಿಳೆ ಯಾಕೂಬಿ ಹಿಂದೂ ವಿಧಿ ವಿಧಾನದಂತೆ ತಾನೇ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ನಡೆಸುವುದಾಗಿ ನಿರ್ಧರಿಸಿದರು. ಅದರಂತೆ ಶವದ ಮೆರವಣಿಗೆಯಲ್ಲಿ, ಹೆಗಲ ಮೇಲೆ ಮಡಕೆ ಹೊತ್ತು,ಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top