ಸಮಾಚಾರ

ಸಾಲದಲ್ಲಿ ಮುಳುಗಿದ ಭಾರತ: ಮರುಪಾವತಿ ಅನುಮಾನ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮದ್ಯದ ದೊರೆ ವಿಜಯ್ ಮಲ್ಯ, ಸುಸ್ತಿ ಸಾಲ ಬಾಕಿಯ ರಾಯಭಾರಿಯಾಗಬಹುದು. ಆದರೆ ಅವರು ಭಾರತದಲ್ಲಿ ಎದುರಿಸುತ್ತಿರುವ ದೊಡ್ಡ ಸಮಸ್ಯೆಯ ಒಂದು ಭಾಗ ಮಾತ್ರ.

2013ರಿಂದ 2015ರ ಅವಧಿಯಲ್ಲಿ ಭಾರತೀಯ ಬ್ಯಾಂಕುಗಳು ಸುಮಾರು 1.14 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿವೆ. ಇನ್ನೂ 3.6 ಲಕ್ಷ ಕೋಟಿ ರೂಪಾಯಿ ಸಾಲ ಅನುತ್ಪಾದಕ ಆಸ್ತಿಯಾಗಿ ಬ್ಯಾಂಕ್ ದಾಖಲೆಗಳಲ್ಲಿ ಕೊಳೆಯುತ್ತಿದೆ. ಸರಕಾರಿ ನೀತಿಗಳಿಂದ ಈ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸೂಚನೆಗಳು ಸ್ಪಷ್ಟವಾಗಿವೆ.

ಕಳೆದ ವಾರ ಬಿಡುಗಡೆ ಮಾಡಲಾದ ಇತ್ತೀಚಿನ ಹಣಕಾಸು ಸ್ಥಿರತೆ ವರದಿಯ ಆಧಾರದಲ್ಲಿ ನೋಡಿದರೆ, ಭಾರತ ಸರಕಾರ ಬ್ಯಾಂಕಿಂಗ್ ವ್ಯವಸ್ಥೆಯನ್ನು ದಿವಾಳಿ ಮಾಡುವ ಸೂಚನೆಗಳು ಕಾಣುತ್ತಿವೆ. ಭಾರತದ ಬ್ಯಾಂಕಿಂಗ್ ಕ್ಷೇತ್ರದ ಕೆಟ್ಟದಿನಗಳು ಇನ್ನೂ ಮುಗಿದಿಲ್ಲ ಎನ್ನುವುದನ್ನು ಈ ವರದಿ ಸೂಚಿಸುತ್ತದೆ. ಭಾರತದ ಬ್ಯಾಂಕ್ಗಳ ಅನುತ್ಪಾದಕ ಆಸ್ತಿ ಪ್ರಮಾಣ ಇನ್ನಷ್ಟು ಹೆಚ್ಚಲಿದೆ. ಆರ್ಥಿಕತೆ ಉತ್ತಮವಾಗಿ ಕಾರ್ಯನಿರ್ವಹಿಸಲು ಆರಂಭ ವಾಗಿ, ಖಾಸಗಿ ವಲಯದ ಕಂಪೆನಿಗಳು ಸಾಲ ಮರುಪಾವತಿ ಮಾಡುವವರೆಗೂ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ. ಭಾರತ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಬ್ಯಾಂಕ್ಗಳು ಎದುರಿಸುತ್ತಿರುವ ಸಾಲದ ಸಮಸ್ಯೆಗಳನ್ನು ಬಗೆಹರಿಸಲು ತಲೆ ಕೆರೆದುಕೊಳ್ಳುತ್ತಿರುವ ಸಂದರ್ಭದಲ್ಲೇ ಈ ವರದಿ ಪ್ರಕಟವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ ರಾಜನ್ ಎಲ್ಲ ಸುಸ್ತಿ ಬಾಕಿಯ ಲೆಕ್ಕಾಚಾರ ಪಕ್ಕಾ ಮಾಡಲು 2017ರ ಮಾರ್ಚ್ ವರೆಗೆ ಸಮಯಾವಕಾಶ ನೀಡಿದ್ದಾರೆ. ಅಂದರೆ ವಸೂಲಾತಿಗೆ ಸಾಧ್ಯವಿಲ್ಲದ ಅಥವಾ ವಸೂಲಿ ಮಾಡುವುದು ಸವಾಲು ಎನಿಸುವ ಸಾಲಗಳನ್ನು ಪ್ರತ್ಯೇಕವಾಗಿಸಿ, ಬ್ಯಾಲೆನ್ಸ್ಶೀಟ್ ಸ್ವಚ್ಛಮಾಡಲು ಈ ಗಡುವು ವಿಧಿಸಿದ್ದಾರೆ.

ಬಂಡವಾಳ ಶಾಹಿಗಳಿಂದ ರಕ್ಷಿಸಿ

ಭಾರತೀಯ ಬ್ಯಾಂಕುಗಳನ್ನು ಬಂಡವಾಳಶಾಹಿ ದೈತ್ಯರಿಂದ ರಕ್ಷಿಸುವುದು ದೊಡ್ಡ ಸವಾಲು ಎಂದು ಭಾರತದ ಮಾಧ್ಯಮಗಳು ಈ ಪರಿಸ್ಥಿತಿಯನ್ನು ಬಣ್ಣಿಸಿವೆ. ಅಂದರೆ ದೊಡ್ಡ ಮೊತ್ತದ ಸಾಲ ಪಡೆದ ಸಣ್ಣ ಸಂಖ್ಯೆಯ ಸದಸ್ಯರ ಸಮಸ್ಯೆ ಇದು. ಸರಿಸುಮಾರು ಐದು ಕೋಟಿ ಅಥವಾ ಹೆಚ್ಚಿನ ಮೊತ್ತದ ಸಾಲ ಹೊಂದಿರುವ ಸುಸ್ತಿದಾ ರರರೇ ಈ ಅನುತ್ಪಾದಕ ಆಸ್ತಿಯ ಸಿಂಹಪಾಲು ಹೊಂದಿದ್ದಾರೆ. ಕಳೆದ ಮಾರ್ಚ್ ವರೆಗಿನ ಅಂಕಿ ಸಂಖ್ಯೆಗಳನ್ನು ಅವಲೋಕಿಸಿದರೆ, ದೊಡ್ಡ ಸಾಲಗಾರರು ಶೇ. 58ರಷ್ಟು ಸಾಲ ಪಡೆದಿದ್ದರೆ, ಒಟ್ಟು ಅನುತ್ಪಾದಕ ಆಸ್ತಿಯಲ್ಲಿ ಇಂಥ ದೊಡ್ಡ ಸಾಲದ ಕುಳಗಳ ಪ್ರಮಾಣ ಶೇ. 86.4ರಷ್ಟಿದೆ ಎಂದು ವರದಿ ಸ್ಪಷ್ಟಪಡಿಸಿದೆ.

ಸಾಲದ ಸುಸ್ತಿಬಾಕಿ ಹೊಂದಿರುವ ಅಗ್ರ 100 ಮಂದಿ ಸಾಲಗಾರರು, ದೇಶದಲ್ಲಿ ವಸೂಲಾಗದ ಸಾಲದ ಅಥವಾ ಸುಸ್ತಿಬಾಕಿಯ ಐದನೇ ಒಂದು ಭಾಗದಷ್ಟು ಸಾಲವನ್ನು ಪಡೆದಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕಿನ ವರದಿಯ ಪ್ರಕಾರ, ನಿವ್ವಳ ಅನುತ್ಪಾದಕ ಆಸ್ತಿಯ ಅನುಪಾತ ಗಣನೀಯವಾಗಿ ಹೆಚ್ಚಿದೆ. ಕಳೆದ ಸೆಪ್ಟೆಂಬರ್ನಲ್ಲಿ ಶೇ. 5.1ರಷ್ಟಿದ್ದ ಈ ಅನುತ್ಪಾದಕ ಆಸ್ತಿಯ ಅನುಪಾತ ಮಾರ್ಚ್ ವೇಳೆಗೆ ಶೇ. 7.6ಕ್ಕೆ ಹೆಚ್ಚಿದೆ. ವಿಸ್ತೃತವಾಗಿ ಆರ್ಥಿಕ ಸ್ಥಿತಿಗತಿ ಮತ್ತಷ್ಟು ಹದಗೆಟ್ಟರೆ 2017ರ ಮಾರ್ಚ್ ವೇಳೆಗೆ ಇದು ಶೇ. 9.3ಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.

ಭಾರತೀಯ ಬ್ಯಾಂಕ್ಗಳಿಗೆ ಇನ್ನೊಂದು ಕಳವಳಕಾರಿ ಅಂಶವೆಂದರೆ, ದೊಡ್ಡ ಕಾರ್ಪೊರೇಟ್ ಸಾಲಗಾರರು. ಈಗಾಗಲೇ ದೊಡ್ಡ ಮೊತ್ತದ ಸಾಲದ ಹೊರೆ ಇರುವ ಈ ಸಂಸ್ಥೆಗಳು, ನಿಗದಿತ ಅವಧಿಯನ್ನು ಮರುಪಾವತಿ ಮಾಡುವ ಸಾಧ್ಯತೆ ವಿರಳ. ಮರುಪಾವತಿ ಮಾಡದೇ ಇರುವ ಸಾಧ್ಯತೆಯೂ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಆರ್ಥಿಕ ಸ್ಥಿರತೆ ವರದಿಯನ್ನು ಬಿಡುಗಡೆ ಮಾಡುವ ವಾರದ ಮುಂಚೆ, ‘ಇಂಡಿಯಾ ರೇಟಿಂಗ್ಸ್ ಅಂಡ್ ರೀಸರ್ಚ್’ ಎಂಬ ರೇಟಿಂಗ್ ಏಜೆನ್ಸಿ ನಡೆಸಿದ ಅಧ್ಯಯನದ ಪ್ರಕಾರ, ಸುಮಾರು 6.7 ಲಕ್ಷ ಕೋಟಿ ಇರುವ ಕಾರ್ಪೊರೇಟ್ ಸಾಲ ಸುಸ್ತಿಯಾಗುವ ಎಲ್ಲ ಸಾಧ್ಯತೆಯೂ ಇದೆ. ಈ ಅಧ್ಯಯನದ ಪ್ರಕಾರ 500 ಸಾಲಗಾರರ ಪೈಕಿ 240 ಸಾಲಗಾರ ಸಂಸ್ಥೆಗಳು ತಮ್ಮ ಸಾಲದ ಹೊಣೆಗಾರಿಕೆಯನ್ನು ಪೂರೈಸಲು ಅಗತ್ಯ ಹಣಕಾಸು ಸಂಪನ್ಮೂಲ ಹೊಂದಿಲ್ಲ. ಅಂದರೆ ಹಾಲಿ ಸಾಲವನ್ನು ತೀರಿಸಲು ಮತ್ತೆ ಹೊಸ ಸಾಲ ಪಡೆಯಬೇಕಾದ ಪರಿಸ್ಥಿತಿ ಇದೆ. ಇದರಲ್ಲಿ 4.7 ಲಕ್ಷ ಕೊಟಿ ರೂಪಾಯಿ ಈಗಾಗಲೇ ಅವಧಿ ಮುಗಿದ ಸಾಲಗಳಾಗಿವೆ.

ಬ್ಯಾಂಕುಗಳಿಗೆ ಇರುವ ದೊಡ್ಡ ಸವಾಲೆಂದರೆ, ಸುಸ್ತಿ ಬಾಕಿಯ ಪೈಕಿ ಮೂರನೇ ಒಂದರಷ್ಟು ಸಾಲವನ್ನು ಈ 500 ಕಂಪೆನಿಗಳಿಗೆ ನೀಡಿವೆ. ಈ ಕಂಪೆನಿಗಳು ಮರುಪಾವತಿ ಮಾಡಲು ವಿಫಲವಾದರೆ, ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ ಎಂದು ಇಂಡಿಯಾ ರೇಟಿಂಗ್ಸ್ ಆಯಂಡ್ ರೀಸರ್ಚ್ ಸಂಸ್ಥೆಯ ಅಧ್ಯಯನ ಸ್ಪಷ್ಟಪಡಿಸಿದೆ.

ಬಂಡವಾಳ ಕೊರತೆ ಯಿಂದಾಗಿ ಬ್ಯಾಂಕುಗಳು ಸಾಲವನ್ನು ಆದ್ಯತೆಯ ಮೇರೆಗೆ ನೀಡುತ್ತಿವೆ. ಹೆಚ್ಚುವ ಅನುತ್ಪಾದಕ ಆಸ್ತಿ ಹಾಗೂ ಸುಸ್ತಿ ಬಳಿಕದ ವಸೂಲಾತಿ ದೊಡ್ಡ ಸವಾಲಾಗಿ ದೆೇಶದ ಪ್ರಮುಖ ಸಾಲಗಾರ ಸಂಸ್ಥೆಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ವೇದಾಂತ, ಜೈಪ್ರಕಾಶ್ ಅಸೋಸಿಯೇಟ್ಸ್ ಮತ್ತು ಭಾರ್ತಿ ಏರ್ಟೆಲ್ ಸೇರಿವೆ. ಮೇ ತಿಂಗಳಲ್ಲಿ ‘ದ ಹಿಂದೂ’ ಪತ್ರಿಕೆ ವರದಿ ಮಾಡಿದಂತೆ, ಬ್ಯಾಂಕುಗಳು ಸಾಲ ವಸೂಲಾತಿಗೆ ಕ್ರಮ ಕೈಗೊಂಡ ಬಳಿಕ, ದೇಶದ ಕೆಲ ದೊಡ್ಡ ಕಾರ್ಪೊರೇಟ್ ಕಂಪೆನಿಗಳು, ತಮ್ಮ ಆಸ್ತಿಗಳ ಮಾರಾಟಕ್ಕೆ ಸರದಿಯಲ್ಲಿ ನಿಂತಿವೆ.

ಆಶಾಕಿರಣ

ನಿರಾಸೆಯ ಕಾರ್ಮೋಡದ ನಡುವೆ ಕಾಣುವ ಏಕೈಕ ಬೆಳ್ಳಿರೇಖೆ ಎಂದರೆ, ಆರ್ಬಿಐ ತನ್ನ ವರದಿಯಲ್ಲಿ ಹೇಳಿರುವಂತೆ ಅಲ್ಪಾವಧಿಯಲ್ಲಿ ಕೆಲ ಕಂಪೆನಿಗಳ ಮರುಪಾವತಿ ಸಾಮರ್ಥ್ಯ ಹೆಚ್ಚಿದ್ದು, ಭಾಗಶಃ ಬಾಕಿಯನ್ನು ಪಾವತಿಸಲು ಅವು ಶಕ್ತವಾಗಲಿವೆ. ಮರು ಪಾವತಿಯಲ್ಲಿ ದೊಡ್ಡಮಟ್ಟದ ಪ್ರಗತಿ ನಿರೀಕ್ಷಿಸು ವಂತಿಲ್ಲ ವಾದರೂ, ವರದಿಯ ಪ್ರಕಾರ, ವಸೂಲಾತಿ ನಿಧಾನವಾಗಿ ಸುಧಾರಿಸುವ ಸಾಧ್ಯತೆ ಇದೆ.

ಕಳೆದ ಸೆಪ್ಟಂಬರ್ನಲ್ಲಿ ಶೇ. 19.6ರಷ್ಟಿದ್ದ ನಷ್ಟದಾಯಕ ಕಂಪೆನಿಗಳು ಮಾರ್ಚ್ ವೇಳೆಗೆ ಶೇ. 14ಕ್ಕೆ ಇಳಿದಿವೆ. ಇಂಥ ನಷ್ಟದಾಯಕ ಕಂಪೆನಿಗಳೆಂದರೆ ಇವುಗಳ ಮೌಲ್ಯ ಋಣಾತ್ಮಕವಾಗಿರುತ್ತದೆ ಅಥವಾ ಸಾಲದ ಪ್ರಮಾಣ ಈಕ್ವಿಟಿಯ ಎರಡು ಪಾಲು ಇರುತ್ತದೆ.

ಇಂತಹ ತೀರಾ ನಷ್ಟದಾಯಕ ಕಂಪೆನಿಗಳ ಶೇಕಡಾವಾರು ಪ್ರಮಾಣ ಮಾರ್ಚ್ ವೇಳೆಗೆ ಶೇ. 12.9ರಷ್ಟಿತ್ತು. ತೀರಾ ನಷ್ಟದಾಯಕ ಕಂಪೆನಿ ಅಂದರೆ ಸಾಲದ ಪ್ರಮಾಣ, ಈಕ್ವಿಟಿಯ ಮೂರು ಪಟ್ಟಿನಷ್ಟಿರುವುದು. ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಈ ಪ್ರಮಾಣ ಶೇ. 15ರಷ್ಟಿತ್ತು. ಇಷ್ಟಾಗಿಯೂ ಇದು ದೊಡ್ಡ ಸಂಖ್ಯೆಯಾಗಿದ್ದು, ಈ ಕಂಪೆನಿಗಳಿಂದ ಸಾಲ ವಸೂಲಾತಿ ಮಾಡುವುದು ನಿಜಕ್ಕೂ ದೊಡ್ಡ ಸವಾಲಿನ ಕೆಲಸ.

ಆದಾಗ್ಯೂ ಭಾರತೀಯ ರಿಸರ್ವ್ ಬ್ಯಾಂಕಿನ ಅಂಕಿ ಅಂಶಗಳು 2600 ಲಿಸ್ಟೆಡ್ ಸರಕಾರೇತರ, ಹಣಕಾಸು ವಹಿವಾಟು ನಡೆಸದ ಕಂಪೆನಿಗಳಿಗಷ್ಟೇ ಸೀಮಿತವಾಗಿದ್ದು, ಇದರ ಬೇರು ಇನ್ನಷ್ಟು ಆಳಕ್ಕೆ ಇಳಿದಿರುವ ಸಾಧ್ಯತೆ ಇದೆ.

ಡಿಸೆಂಬರ್ನಲ್ಲಿ ಮಿಂಟ್, ಲಿಸ್ಟೆಡ್ ಹಾಗೂ ಲಿಸ್ಟ್ ಮಾಡದ ಕಾರ್ಪೊರೇಟ್ ಕಂಪೆನಿಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿದೆ. ಇದು ಕೇವಲ ಕಾರ್ಪೊರೇಟ್ ಸಮೂಹಗಳಿಗಷ್ಟೇ ಸೀಮಿತವಾದ ಸಮಸ್ಯೆಯಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದೆ.

ಕೆಲ ಪ್ರದೇಶಗಳಲ್ಲಿ ಸಮಸ್ಯೆ ತೀರಾ ಗಂಭೀರವಾಗಿದೆ. ಆದರೆ ಇದು ಕೇವಲ ಬೆರಳೆಣಿಕೆಯ ಕಂಪೆನಿಗಳಿಗಷ್ಟೇ ಇದು ಸೀಮಿತವಲ್ಲ. ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಸಾಲದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದ್ದು, ಸಣ್ಣ ಕಂಪೆನಿಗಳು ಕೂಡಾ ತೀರಾ ಸಂಕಷ್ಟದಲ್ಲಿವೆ.

ಕೃಪೆ: scroll.in. varthabharathi.

Comments

comments

Click to comment

Leave a Reply

Your email address will not be published. Required fields are marked *

To Top