fbpx
Karnataka

ಮೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆಯಲ್ಲಿ ಏನಿದೆ ? ಏನಿಲ್ಲಾ??

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ, ಮೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ ಸಿದ್ಧವಾಗಿದ್ದು, ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿದ್ದು, ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧವಾಗಿದೆ.

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಗೆ ಸರ್ಕಾರ ಸಿದ್ಧವಾಗಿರುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಕಾಯ್ದೆಯ ರೂಪುರೇಶೆಯನ್ನು ಸಿದ್ಧಪಡಿಸಿದ್ದು, ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.

ಮೌಢ್ಯ ನಿಷೇಧ ಕಾಯ್ದೆಯಲ್ಲಿ ಇರುವ ಅಂಶಗಳು ಇಲ್ಲಿವೆ..

  • ಪವಾಡದಲ್ಲಿ ವ್ಯಕ್ತಿ ಪ್ರದರ್ಶನ ಮಾಡುವಂತಿಲ್ಲ
  • ನರಬಲಿ ನೀಡುವುದು, ಪ್ರಚಾರ ಮಾಡುವುದಕ್ಕೆ ನಿಷೇಧ
  • ಅತೀಂದ್ರೀಯ ಶಕ್ತಿ ಇದೆ ಎಂದು ನಂಬಿಸುವಂತಿಲ್ಲ
  • ದೈವ ಹಾಗೂ ದೆವ್ವದ ಭಯ ಹುಟ್ಟಿಸುವಂತಿಲ್ಲ
  • ದೆವ್ವ ಓಡಿಸಲು ವ್ಯಕ್ತಿ ಹಿಂಸೆ ಮಾಡುವಂತಿಲ್ಲ
  • ನಗ್ನ ಮೆರವಣಿಗೆ ನಿಷೇಧ
  • ಮಡೆಸ್ನಾನ ನಿಷೇಧಕ್ಕೆ ಒತ್ತು
  • ಸಿಡಿ ಆಚರಣೆ ಪ್ರೋತ್ಸಾಹ, ಪ್ರಚಾರ ನಿಷೇಧ
  • ಬೆರಳಿನ ಮೂಲಕ ಶಸ್ತ್ರಚಿಕಿತ್ಸೆ
  • ದೇವರ ಹೆಸರಿನಲ್ಲಿ ಮಹಿಳೆಯರ ಬೆತ್ತಲೆ ಸೇವೆ ನಿಷಿದ್ಧ
  • ಕೊಂಡ ಹಾಯುವುದಕ್ಕೆ ನಿಷೇಧ
  • ಬಾಯಿಗೆ ಕಬ್ಬಿಣದ ಸಲಾಕೆ ಹಾಕುವುದಕ್ಕೆ ಕಡಿವಾಣ

ಧಾರ್ಮಿಕ, ಆಧ್ಯಾತ್ಮದ ಸ್ಥಳಗಳಲ್ಲಿ ಪೂಜೆ ಸಲ್ಲಿಸುವುದು, ಹರಿಕಥೆ, ಕೀರ್ತನೆ, ದೇವರ ಆರಾಧನೆ, ಚರ್ಚ್ ಗಳಲ್ಲಿ ದೈಹಿಕ ಹಾನಿಯಾಗದ ಆಚರಣೆ, ಹಣಕಾಸಿಗೆ ನಷ್ಟವಾಗದ ಆಚರಣೆಗಳನ್ನು ನಿಷೇಧದಿಂದ ಹೊರಗಿಡಲಾಗಿದೆ.

ಈ ಆಚರಣೆಗಳ ಬಗ್ಗೆ ನಿಗಾ ಇಡಲು ಅಧಿಕಾರಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿದ್ದು,  ನೋಡಲ್ ಅಧಿಕಾರಿ, ಇನ್ ಸ್ಪೆಕ್ಟರ್ ಸಹ ಇರಲಿದ್ದು, ಜೀವಹಾನಿಯಾದರೆ 302 ಅಡಿ ಶಿಕ್ಷೆಯಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top