ಕಿತ್ತು ಹೋಗಿರುವ ರಸ್ತೆ ಗುಂಡಿಗಳಿಗೆ ಎಚ್ ಎಸ್ ಆರ್ ಲೇಔಟ್ ನಿವಾಸಿಗಳು ಪೂಜೆ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳೆ ಎಲ್ಲಿದ್ದೀರಿ?.. ಬನ್ನಿ ಸಾರ್ ಬನ್ನಿ, ಬಂದು ತೀರ್ಥ-ಪ್ರಸಾದ ಸ್ವೀಕರಿಸಿ…
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೇನು ಬರವೇ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಸ್ತೆ ದುರಸ್ತಿ ಮಾಡಿದೆ ಇನ್ನಾದರೂ ಆರಾಮವಾಗಿ ಓಡಾಡಬಹುದು ಎಂದು ಅಂದುಕೊಂಡಿದ್ದರೆ ಮರುದಿನ ಅದೇ ಜಾಗವನ್ನು ಜಲಮಂಡಳಿ ಅಗೆದು ಹಾಕಿರುತ್ತದೆ. ಈ ಬಗ್ಗೆ ಎಷ್ಟು ಹೇಳಿದರೂ ಅಷ್ಟೇ ಬಿಡಿ.
ರಸ್ತೆಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ, ಬೀದಿಗಿಳಿದು ಹೋರಾಟ ಮಾಡಿ ಮನವಿ ಸಲ್ಲಿಕೆ ಮಾಡಿದ್ದನ್ನು ನೋಡಿದ್ದೇವೆ. ಆದರೆ ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಎಚ್ ಎಸ್ ಆರ್ ಲೇಔಟ್ ನಾಗರಿಕರು ರಸ್ತೆ ಗುಂಡಿಗೆ ಪೂಜೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ರಸ್ತೆ ಗುಂಡಿಯ ಸುತ್ತ ಕಲಶ ಇಟ್ಟು, ರಂಗೋಲಿ ಹಾಕಿ ಪೂಜೆ ಮಾಡಿ ಪ್ರಸಾದವನ್ನು ನೀಡಿದ್ದಾರೆ. #PotholePooje ಎಂಬ ಹಾಶ್ ಟ್ಯಾಗ್ ನ್ನು ಟ್ವಿಟ್ಟರ್ ನಲ್ಲಿ ಕ್ರಿಯೆಟ್ ಮಾಡಿದ್ದಾರೆ.
Lol what a shame on @BBMPCOMM1 good work guys @WeAreHSRLayout @WeAreBangalore #PotholePooje https://t.co/1qGRvYfHdX
— ThirdEye (@3rdEyeDude) July 9, 2016
ಪೂಜೆ ಹೇಗೆ ನಡೆಯಿತು?
ಬಿದ್ದ ಮಳೆಗೆ ನೀರು ತುಂಬಿಕೊಂಡ ರಸ್ತೆ ಗುಂಡಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ನಂತರ ರಂಗೋಲಿ ಬಳಿದು, ತೆಂಗಿನ ಕಾಯಿ ಒಡೆಯಲಾಯಿತು. ಸರಿಯಾದ ‘ಮಂಗಳಾರತಿ’ಯನ್ನು ಮಾಡಲಾಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
