ಬೆಂಗಳೂರು : ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕೊನೆಗೂ ಕನ್ನಡ ಮಾತನಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಮೀಟ್ ಅಂಡ್ ಗ್ರೀಟ್ ಕಾರ್ಯಕ್ರಮದಲ್ಲಿ ಅವರು ಬಹಳ ಹೊತ್ತು ಕನ್ನಡ ಮಾತನಾಡಿದ್ದಾರೆ.
ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ವೇಳೆ ಸಾಮಾನ್ಯ ಕನ್ನಡಿಗ ಹಾಗೂ ದಿ ನ್ಯೂಸಿಸಮ್ ತಂಡ ಕನ್ನಡ ಬಾರದ ವೆಂಕಯ್ಯ ನಾಯ್ಡು ವಿರುದ್ಧ ದೊಡ್ಡ ಅಭಿಯಾನ ನಡೆಸಿತ್ತು. [ವೆಂಕಯ್ಯ ಸಾಕಯ್ಯ: ಆನ್ಲೈನ್ ಅಭಿಯಾನ ಹಿಟ್!] ಮೂರು ಬಾರಿ ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕದಿಂದ ಆಯ್ಕೆ ಮಾಡಿದ್ರು ವೆಂಕಯ್ಯ ನಾಯ್ಡು ಕನ್ನಡ ಕಲಿಯಲಿಲ್ಲ. ಕನ್ನಡ/ಕನ್ನಡಿಗರ ಪರ ಕೆಲಸ ಮಾಡಲಿಲ್ಲ ಎಂದು “ವೆಂಕಯ್ಯ ಸಾಕಯ್ಯ” ಎಂಬ ದೊಡ್ಡ ಅಭಿಯಾನ ನಡೆಸಿತ್ತು. [Bengaluru trends #VenkayyaSakayya]ಅದಕ್ಕೆ ಕರ್ನಾಟಕದ ಜನ ಕೂಡ ದೊಡ್ಡ ಸಾಥ್ ನೀಡಿದ್ದರು. ಅದರ ಫಲವಾಗಿ ಬಿಜೆಪಿ ವೆಂಕಯ್ಯ ನಾಯ್ಡು ಅವರಿಗೆ ರಾಜ್ಯ ಸಭೆಗೆ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆ ಮಾಡಲು ಟಿಕೆಟ್ ನೀಡಲಿಲ್ಲ. ಅದರ ಫಲವಾಗಿ ಇಂದು ವೆಂಕಯ್ಯ ನಾಯ್ಡು ಬೆಂಗಳೂರಿಗೆ ಆಗಮಿಸಿ ಕನ್ನಡ ಕಲಿತು ಕನ್ನಡದಲ್ಲಿಯೇ ಮಾತಾಡಿದ್ದಾರೆ. ಅವರು ಏನೇನು ಕನ್ನಡದಲ್ಲಿ ಮಾತನಾಡಿದ್ದಾರೆ? ಈ ಕೆಳಗಿದೆ ನೋಡಿ. ನೀವೆ ಓದಿ…
ಆತ್ಮೀಯ ಸ್ನೇಹಿತರೇ ತಾಯಂದಿರೇ, ಅಣ್ಣ ತಮ್ಮಂದಿರೇ, ಎಲ್ಲರಿಗೂ ನಮಸ್ಕಾರ. ಮೂರು ಬಾರಿ ಸತತವಾಗಿ ಕರ್ನಾಟಕದಿಂದ ರಾಜ್ಯ ಸಭೆಗೆ ಕಳುಹಿಸಿದ್ದಕ್ಕಾಗಿ ಕರ್ನಾಟಕದ ಜನತೆಗೆ, ಭಾರತೀಯ ಜನತಾ ಪಾರ್ಟಿಗೆ ಹಾಗೂ ಶಾಸಕರಿಗೆ ಹೃದಯಪೂರ್ವಕ ವಂದನೆಗಳು.
ನನಗಾಗಿ ಈ ಸಭೆಯನ್ನು ಏರ್ಪಾಡು ಮಾಡಿರುವ ಎಲ್ಲ ನಾಯಕರಿಗೆ ಧನ್ಯವಾದಗಳು. ನಾನು 1993 ರಿಂದ ರಾಷ್ಟ್ರದ ಮಟ್ಟದಲ್ಲಿ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಯಾವುದೇ ಒಂದು ಪ್ರಾಂತ್ಯಕ್ಕೆ, ಯಾವುದೇ ಒಂದು ಭಾಷೆಗೆ ಸೀಮಿತವಾಗಿಲ್ಲ, ಆಗೋದು ಇಲ್ಲ. ನಾನು ಯಾವುದೇ ರಾಜ್ಯದಿಂದ ಗೆದ್ದು ಬಂದ್ರು ಕರ್ನಾಟಕವನ್ನು ಮರೆಯೋದಿಲ್ಲ. I never never forget it at all ಎಂದು ಕನ್ನಡದಲ್ಲಿ ಮಾತನಾಡಿದ್ದಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
