ಸಮಾಚಾರ

ತೊಗರಿಬೇಳೆಗಾಗಿ ಎಪಿಎಂಸಿಯತ್ತ ಮುಖ ಮಾಡಿದ ಗ್ರಾಹಕರು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಎಲ್ಲಿ ನೋಡಿದರೂ ಬೇಳೆ-ಕಾಳುಗಳ ಬೆಲೆ ಏರಿಕೆಯದ್ದೇ ಸುದ್ದಿ. ಅದರಲ್ಲೂ ದಿನನಿತ್ಯ ಸಾಂಬಾರಿಗೆ ಬಳಸುವ ತೊಗರಿಬೇಳೆ ಪ್ರತಿ ಕೆ.ಜಿ ಗೆ 200 ರೂ ಗಡಿ ದಾಟಿ ಗೃಹಿಣಿಯರ ಕಣ್ಣೀರಿಗೆ ಕಾರಣವಾಗಿತ್ತು. ಆದರೆ ಇದೀಗ ಅಂಗಡಿಗಳಲ್ಲಿ, ಮಾಲ್ಗಳಲ್ಲಿ ಧಿಡೀರ್ ತೊಗರಿಬೇಳೆ ದರ ಕುಸಿದಿದೆ. ಸರ್ಕಾರ ಎಪಿಎಂಸಿಗಳಲ್ಲಿ ನಿಗದಿತ ದರಕ್ಕೆ ತೊಗರಿಬೇಳೆ ಮಾರಾಟ ಆರಂಭಿಸಿರುವುದು ಇದಕ್ಕೆ ಕಾರಣ. ಬೆಲೆ ಏರಿಕೆಯ ಲಾಭ ಪಡೆಯಲು ಕೃತಕ ಅಭಾವ ಸೃಷ್ಟಿಸಿ ದರ ಏರಿಸಿದ್ದ ಖಾಸಗಿ ವರ್ತಕರು ಇದೀಗ ಸರ್ಕಾರಿ ಬೆಲೆಗೆ ಸಮನಾಗಿ ತೊಗರಿಬೇಳೆ ಮಾರಾಟ ಆರಂಭಿಸಿದ್ದಾರೆ.

ತೊಗರಿ ಬೇಳೆ ಬೆಲೆ ಏರಿಕೆಗೆ ಮಧ್ಯಮವರ್ಗದ ಜನರು ಕಂಗಾಲಾಗಿದ್ದರು. ಹೀಗಾಗಿ ಎಚ್ಚೆತ್ತ ಕೇಂದ್ರ ಸರ್ಕಾರ ತೊಗರಿಬೇಳೆ ಕೆ.ಜಿಗೆ 130 ರೂ. ದರ ನಿಗದಿ ಮಾಡಿ ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಗುಲ್ಬರ್ಗಾದಲ್ಲಿ ಉತ್ಪಾದನೆಯಾಗುವ ಪಟ್ಕಾ ಎನ್ನುವ ಉತ್ತಮ ತಳಿಯ ತೊಗರಿಬೇಳೆಯನ್ನೇ ಎಪಿಎಂಸಿಯಲ್ಲಿ ವಿತರಿಸಲಾಗುತ್ತಿರುವುದ್ದರಿಂದ ಜನರು ಸಹಜವಾಗಿ ಎಪಿಎಂಸಿಯತ್ತ ಮುಖ ಮಾಡಿದ್ದರು.

ಹೀಗಾಗಿ ಬೆಲೆ ಏರಿಕೆ ಲಾಭ ಪಡೆಯಲು 200 ರೂ. ಗೆ ದರ ಏರಿಸಿದ್ದ ವರ್ತಕರು ನಿಧಾನಕ್ಕೆ ದರ ಇಳಿಸಲು ಮುಂದಾಗಿದ್ದಾರೆ. ಹೀಗಾಗಿ ಈಗ ನಗರದ ಎಲ್ಲಾ ಅಂಗಡಿಗಳಲ್ಲಿ ಹೆಚ್ಚೆಂದರೆ 140 ರೂ.ಗೆ ತೊಗರಿಬೇಳೆ ದೊರೆಯುತ್ತಿದೆ. ಇನ್ನು ಎಪಿಎಂಸಿ ಈಗಾಗಲೇ 4 ಟನ್ನಷ್ಟು ತೊಗರಿಬೇಳೆ ಮಾರಾಟ ಮಾಡಿದ್ದು, ಇನ್ನಷ್ಟು ಬೇಡಿಕೆ ಇದೆ. ಒಟ್ಟಿನಲ್ಲಿ ದರ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಶ್ಲಾಘನೀಯವಾಗಿದ್ದು, ಜನರ ಮೇಲಿನ ಹೊರೆ ಇಳಿಸಲು ನೆರವಾಗಿದೆ.

Comments

comments

Click to comment

Leave a Reply

Your email address will not be published. Required fields are marked *

To Top