News

ಉದ್ಯೋಗ ಮಾಹಿತಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಎಸ್‌ಎಫ್‌ನಲ್ಲಿ ಗ್ರೂಪ್‌-ಸಿ ಹುದ್ದೆಗಳಿವೆ

ದೇಶದ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಯು ಖಾಲಿ ಇರುವ ಗ್ರೂಪ್‌-ಸಿ ವೃಂದದ ಹುದ್ದೆಗಳನ್ನು ನೇರ ನೇಮಕದ ಮೂಲಕ ಭರ್ತಿ ಮಾಡಿಕೊಳ್ಳಲು ಆಲ್‌ ಇಂಡಿಯಾ ಪರೀಕ್ಷೆಗಳನ್ನು ನಡೆಸಲಿದೆ.

2016-17ನೇ ಸಾಲಿನ ಬಿಎಸ್‌ಎಫ್‌ ಎಂಜಿನಿಯರಿಂಗ್‌ ಸೆಟ್‌ಅಪ್‌(ಸಿವಿಲ್‌) ಮತ್ತು ಎನ್‌ಆಡಿಆರ್‌ಎಫ್‌ ಬಿಎನ್‌ಎಸ್‌ ಪರೀಕ್ಷೆಗಳನ್ನು ಬಿಎಸ್‌ಎಫ್‌ ಆಯೋಜಿಸುತ್ತದೆ.

ಹುದ್ದೆಗಳ ವಿವರ:

ಹೆಡ್‌ ಕಾನ್‌ಸ್ಟೇಬಲ್‌(ಪಯೋನೀರ್‌)-2, ಹೆಡ್‌ ಕಾನ್ಸ್‌ಟೇಬಲ್‌ (ಕಾರ್ಪೆಂಟರ್‌/ಮಸೂನ್‌)-1, ಹೆಡ್‌ ಕಾನ್‌ಸ್ಟೇಬಲ್‌(ಫಿಟ್ಟರ್‌/ಬ್ಲ್ಯಾಕ್‌ಸ್ಮಿತ್‌)-2 ಮತ್ತು ಕಾನ್‌ಸ್ಟೇಬಲ್‌(ಸೆವರ್‌ಮೆನ್‌)-1 ಹುದ್ದೆ ಸೇರಿದಂತೆ ಒಟ್ಟು 6 ಹುದ್ದೆಗಳಿವೆ.

ವಯೋಮಿತಿ:

ಅರ್ಜಿ ಸಲ್ಲಿಸಲು ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:

50 ರೂಪಾಯಿ. ಡಿಡಿ ಅಥವಾ ಪೋಸ್ಟಲ್‌ ಆರ್ಡರ್‌ ಮೂಲಕ ಐಜಿ ಕಮಾಂಡೆಂಟ್‌ ಹೆಸರಲ್ಲಿ ಕಳುಹಿಸಬಹುದು.

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.

ಆಯಾ ರಾಜ್ಯಗಳ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಬೇರೆ ಬೇರೆ ವಿಳಾಸ ನೀಡಲಾಗಿದೆ.

ಪೂರ್ಣ ವಿವರವನ್ನು ಬಿಎಸ್‌ಎಫ್‌ ವೆಬ್‌ಸೈಟ್‌ನಲ್ಲಿರುವ ಅಧಿಸೂಚನೆಯಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್‌ 08, 2016 .

ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ವಿಳಾಸ:

http://bsf.nic.in

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top