ಸಣ್ಣ ಕಥೆ

ಶೌರ್ಯ ಸಾಹಸ ಮೆರೆದ ಸೈನಿಕನೊಬ್ಬನ ಕಥೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬರೀ ಚೂರಿಯಿಂದ ಮೂವರು ಶಸ್ತ್ರಧಾರಿ ಐಸಿಸ್‌ ಉಗ್ರರನ್ನು ಕೊಂದ ಯೋಧ !

ಲಂಡನ್‌ : ಎಲ್ಲಾ ಯುದ್ಧ ಗಳಲ್ಲಿಯೂ ಸೈನಿಕರ ಶೌರ್ಯ ಸಾಹಸದ ತನ್ನದೇ ಆದ ಒಂದು ಇತಿಹಾಸವಿದ್ದು ಅಂತಹದ್ದೇ ಶೌರ್ಯ ಸಾಹಸ ಮೆರೆದ ಸೈನಿಕನೊಬ್ಬನ ಕಥೆ ಇರಾಕ್‌ನಲ್ಲಿ ಐಸಿಸ್‌ ಉಗ್ರರ ವಿರುದ್ಧದ ಕಾದಾಟದಲ್ಲಿ ನಡೆದಿದೆ.

ವರದಿಯಾದಂತೆ ಐಸಿಸ್‌ ಉಗ್ರರ ವಿರುದ್ಧ ಸಮರ ಸಾರಿರುವ ಮಿತ್ರ ಪಡೆಗಳಲ್ಲಿದ್ದ ಬ್ರಿಟಿಷ್‌ ವಿಶೇಷ ವಾಯುಪಡೆಯ ಸೈನಿಕನೊಬ್ಬ ಮೂವರು ಶಸ್ತ್ರಧಾರಿ ಐಸಿಸ್‌ ಉಗ್ರರನ್ನು18 ಇಂಚುಗಳಷ್ಟು ಉದ್ದವಾದ ಗೂರ್ಖಾ ಚೂರಿಯಲ್ಲಿ ಇರಿದು ಕೊಂದಿದ್ದಾನೆ. ಇರಾಕ್‌ ಪಡೆಗಳೊಂದಿಗೆ ಫ‌ಲುಜಾ ಎಂಬಲ್ಲಿನ ಪಾಳು ಕಟ್ಟಡವೊಂದರ ಮೇಲೆ  ಉಗ್ರರ ವಿರುದ್ಧ ಭಾರೀ  ಕಾರ್ಯಾಚರಣೆಗಿಳಿದ ವೇಳೆ ಸೈನಿಕ ಈ ಸಾಹಸ ತೋರಿದ್ದಾನೆ.

ಕಾರ್ಯಾಚರಣೆಯಲ್ಲಿ ಉಗ್ರರ ಹೊಂಚು ದಾಳಿಯಲ್ಲಿ ಕೆಲವು ಇರಾಕ್‌ ಸೈನಿಕರು ಹುತಾತ್ಮರಾದರೆ ನಾಲ್ವರು ಗಂಭೀರವಾಗಿ ಗಾಯಗೊಂಡರು. ಈ  ವೇಳೆ ಬ್ರಿಟಿಷ್‌ ಸೈನಿಕನ ಬಂಧೂಕಿನಲ್ಲಿ ಗುಂಡು ಬರಿದಾಗಿತ್ತು,ಇದನ್ನೇ ಕಾದಿದ್ದ ಉಗ್ರರು ಜೀವಂತವಾಗಿ ಸೆರೆ ಹಿಡಿಯಲು ಮುಂದಾದರು. 15 ವರ್ಷಗಳ ಸೇನಾ ಅನುಭವ ಹೊಂದಿದ್ದ ಯೋಧ ಕುಕ್ರಿ (ಚಾಕು ) ತೆಗೆದು ತನ್ನ ಮೇಲೆರಗಿದ್ದ ಉಗ್ರರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಪರಿಣಾಮವಾಗಿ ಮೂವರು ಕತ್ತು ಸೀಳಿ ಸತ್ತು ಬಿದ್ದರೆ,ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡರು. ಸ್ಥಳದಲ್ಲಿದ್ದ ಇನ್ನೋರ್ವ ಉಗ್ರ ಪಲಾಯನಗೈದ .

ಗಾಯಗೊಂಡ ಸೈನಿಕರನ್ನು ಸುರಕ್ಷಿತವಾಗಿ ಸಾಗಿಸಿ ರಕ್ತದಿಂದ ಮುಳುಗಿ ಹೋಗಿದ್ದ ಬ್ರಿಟಿಷ್‌ ಸೈನಿಕನನ್ನು ನೋಡಿದ ಇರಾಕ್‌ ಪಡೆಗಳು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಭಾವಿಸಿದರು. ಆದರೆ ರಕ್ತ ತನ್ನದಲ್ಲ ಎಂದು ಘಟನೆಯನ್ನು ವಿವರಿಸಿದ ಸೈನಿಕ ಮತ್ತೆ ಉಗ್ರರ ಬೇಟೆಗೆ ಮುಂದುವರೆದ.

ವಿಶ್ವಪ್ರಸಿದ್ದ ನೇಪಾಳದ ಗೂರ್ಖಾ ಸೈನಿಕರು ‘ಹೇಡಿಯಾಗುವುದಕ್ಕಿಂತ ಸಾಯುವುದೇ ಮೇಲು’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಬ್ರಿಟಿಷ್‌ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಸಾಮನ್ಯವಾಗಿ ಬಳಸುವ ಗೂರ್ಖಾ ಚೂರಿಯನ್ನು ಎಲ್ಲಾ ಹೆಚ್ಚಿನ ಸೈನಿಕರು ಬಳಕೆ ಮಾಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top