ಮಾಹಿತಿ

ಕಾಲ ಜ್ಞಾನದ ಬಗ್ಗೆ ಕಿರುಮಾಹಿತಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಭೂಮಿ ಸೂರ್ಯನನ್ನು ಸುತ್ತುವರೆಯುವ ಸಮಯಕ್ಕೆ ನಾವು 1 ವರ್ಷ ಎನ್ನುತ್ತೇವೆ.

ನಮ್ಮ ವಿಜ್ಞಾನದ ಪ್ರಕಾರ.ಭೂಮಿ ಸೂರ್ಯನನ್ನು ಸುತ್ತಲೂ ತೆಗೆದುಕೊಳ್ಳುವ ಸಮಯ 365 ದಿನಗಳು 5 ಗಂಟೆ, 56 ನಿಮಿಷಗಳು, 45 ಸೆಕಂಡ ,51 ಮಿಲಿ ಸೆಕೆಂಡ .

ಆದರೆ ನಾವು ಬಳಸುವ English / ಗ್ರೆಗೋರಿಯನ್ / ಕ್ರೈಸ್ತ ಕ್ಯಾಲೆಂಡರ್ 365 ದಿನ 6 ಗಂಟೆ ಲೆಕ್ಕಕ್ಕೆ ತೆಗೆದು ಕೊಳ್ಳುತ್ತದೆ ( ನಾಲ್ಕು ವರ್ಷಕ್ಕೊಮ್ಮೆ 1 ದಿನ ಸೇರಿಸಿ) . ಅಂದರೆ ಪ್ರತಿ ವರ್ಷ 3 ನಿಮಿಷ 14 ಸೆಕೆಂಡ 49 ಮಿಲಿ ಸೆಕಂಡ ವ್ಯತ್ಯಾಸ ಉಂಟು ಮಾಡುತ್ತದೆ. (ಈ ವ್ಯತ್ಯಾಸ ಸರಿಪಡಿಸಲು ಪ್ರತಿ 400 ವರ್ಷಗಳಿಗೆ ಒಮ್ಮೆ ಇನ್ನೂ 1 ದಿನವನ್ನು ಹೆಚ್ಚುವರಿಯಾಗಿ ಸೇರಿಸುತ್ತದೆ ಆದರೂ ಈ ಇಂಗ್ಲಿಷ್ ಕ್ಯಾಲೆಂಡರ್ ಪೂರ್ತಿ ಪ್ರಮಾಣದ ಸಮಯವನ್ನು ಸರಿದುಗಿಸಲು ಸಾಧ್ಯವಾಗುವುದಿಲ್ಲ ).

ಭಾರತೀಯರ ಕಾಲ ಜ್ಞಾನ/ ಸನಾತನ ಜೋತ್ಯಿಷ ಶಾಸ್ತ್ರ:-

15ನಿಮೇಷ = 1 ಕಾಷ್ಠಾ

30 ಕಾಷ್ಠಾ = 1ಕಲ

30 ಕಲ = 1 ಕ್ಷಣ

12 ಕ್ಷಣ. = 1 ಮುಹೂರ್ತ (48 ನಿಮಿಷಗಳು).

30 ಮುಹೂರ್ತ = 1ದಿನ ( ಅಹೋರಾತ್ರಿ) = 1 ತಿಥಿ.

15 ದಿನ = 1 ಪಕ್ಷ.

2 ಪಕ್ಷ, = 1 ಮಾಸ ( ತಿಂಗಳು)

2ಮಾಸ = 1ಋತು.

6 ಋತು = 12 ಮಾಸ = 1ವರ್ಷ ( ಮನುಷ್ಯ ವರ್ಷ) = 1 ಸಂವತ್ಸರ.

1 ಮನುಷ್ಯ ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು, ದಕ್ಷಿಣಾಯನ = ರಾತ್ರಿ) .

360 ಮನುಷ್ಯ ವರ್ಷ = 1 ದೇವ ವರ್ಷ.

1,200 ದೇವ ವರ್ಷ = 4,32,000 ಮನುಷ್ಯ ವರ್ಷಗಳು = ಕಲಿಯುಗದ ಅವಧಿ.

2,400 ದೇವ ವರ್ಷಗಳು = 8,64,000 ಮನುಷ್ಯ ವರ್ಷಗಳು = ದ್ವಾಪರ ಯುಗ.

3,600 ದೇವ ವರ್ಷಗಳು = 12,96,000 ಮನುಷ್ಯ ವರ್ಷಗಳು ತ್ರೇತಾಯುಗದ ಅವಧಿ.

4,800 ದೇವ ವರ್ಷ = 17,28,000 ಮನುಷ್ಯ ವರ್ಷ = ಕೃತಯುಗ ಅವಧಿ.

 

ಒಟ್ಟಾರೆ 12,000 ದೇವ ವರ್ಷ = 43,20,000 ಮನುಷ್ಯ ವರ್ಷ = 1 ಚತುರ್ಯುಗದ ಅವಧಿ /ವ್ಯಾಪ್ತಿ.

71 ಚತುರ್ಯುಗ = 1 ಮನ್ವಂತರ

14 ಮನ್ವಂತರ = ಬ್ರಹ್ಮನ 1 ಹಗಲು

14 ಮನ್ವಂತರ = ಬ್ರಹ್ಮನ 1 ರಾತ್ರಿ.

28 ಮನ್ವಂತರ = ಬ್ರಹ್ಮನ 1 ದಿನ = 1 ಕಲ್ಪ = 85,881,60,000 ಮನುಷ್ಯ ವರ್ಷಗಳು.

360 ಬ್ರಹ್ಮ. ದಿನ = 1 ಬ್ರಹ್ಮ ವರ್ಷ

100 ಬ್ರಹ್ಮ ವರ್ಷ = 1 ಬ್ರಹ್ಮ ಪಟ್ಟ.

ಹೀಗೆ ಮುಂದುವರಿಯುತ್ತದೆ ನಮ್ಮ ಹಿರಿಯರ ಜ್ಞಾನ.

ಇದರಿಂದ ನಮಗೆ ಸ್ಪಷ್ಟವಾಗುತ್ತೆ ಈ ಅವ್ಯಜ್ಞಾನಿಕ ಗ್ರೆಗೋರಿಯನ್ ಕ್ಯಾಲೆಂಡರ್ ಎಷ್ಟೇ ತಿಣುಕಾಡಿದರು ಸಮಯವನ್ನು ನಿಖರವಾಗಿ ಅಳೆಯಲು ಸಾಧ್ಯವಾಗುವುದಿಲ್ಲವೆಂದು ಆದರೆ ನಮ್ಮ ಜೋತಿಷ್ಯ ವಿಜ್ಞಾನ ಸ್ಪಷ್ಟವಾಗಿ ನಿಖರವಾಗಿ ಕಾಲವನ್ನು ಸೂಚಿಸುತ್ತದೆ.

 ಆದರಿಂದ ಭಾರತೀಯ ಯುವಕರೇ , ಬಂಧುಗಳೇ ಜನವರಿ 1ರಂದು ಹೊಸ ವರ್ಷ ಆಚರಿಸೊದನ್ಬು ಬಿಟ್ಟು ನಮ್ಮ ಭಾರತೀಯ ಪರಂಪರೆಯ ಸನಾತನ ಹಬ್ಬಗಳನ್ನು ಶಾಸ್ತ್ರೀಯವಾಗಿ ಆಚರಿಸೋಣ.

ಮತ್ತು ಇಂದಿನ ಜಾಗತಿಕರಣದ ಯುಗದಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಕೇವಲ ವ್ವವಹಾರಕ್ಕೆ ಮಾತ್ರ ಸೀಮಿತ ವಾಗಿರಲಿ ಆಚರಣೆ ಬೇಡ

Comments

comments

Click to comment

Leave a Reply

Your email address will not be published. Required fields are marked *

To Top