News

ಈ ಲಿಸ್ಟ್ ನಲ್ಲಿ ನಿಮ್ಮ ಫೋನ್ ಇದ್ಯಾ, ಹಾಗಿದ್ರೆ ವಾಟ್ಸ್ಆ್ಯಪ್ ಬಳಕೆ ಮಾಡುವುದನ್ನು ಮರೆತುಬಿಡಿ..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸ್ಮಾರ್ಟ್’ಫೋನ್ ಇಟ್ಟುಕೊಂಡವರು ವಾಟ್ಸ್ಆ್ಯಪ್ ಬಳಕೆ ಮಾಡುವುದು ತೀರಾ ಸಾಮಾನ್ಯ. ಫೇಸ್ಬುಕ್’ನಂತೆ ವಾಟ್ಸ್ಆ್ಯಪ್ ಕೂಡ ನಮ್ಮ ನಿತ್ಯಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್ ಬಳಕೆ ಮಾಡುವಾಗ ನಾವು ಎಚ್ಚರ ವಹಿಸಬೇಕಾದ ಕೆಲ ಅಂಶಗಳ ಬಗ್ಗೆ ಕೆಳಗೆ  ನೀಡಿದ್ದೇವೆ.

ಜಗತ್ತಿನ ಅತ್ಯಂತ ಪ್ರಸಿದ್ಧ ಸಾಮಾಜಿಕ ಜಾಲತಾಣಗಳ ಪೈಕಿ ವಾಟ್ಸ್ಆ್ಯಪ್ ಅತ್ಯಂತ ಪ್ರಸಿದ್ಧವಾಗಿದೆ. ಜಗತ್ತಿನ ಬಹುತೇಕ ಮಂದಿ ತಮ್ಮಲ್ಲಿರುವ ಸಣ್ಣ ಪುಟ್ಟ ಮೊಬೈಲ್ಗಳಲ್ಲಿ ಕೂಡಾ ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ಆದರೆ ಇನ್ನುಮುಂದೆ ಅದಕ್ಕೆಲ್ಲಾ ಫುಲ್ಸ್ಟಾಪ್ ಬೀಳಲಿದೆ. ಇನ್ನುಮುಂದೆ ವಾಟ್ಸ್ಆ್ಯಪ್ ಬೇಕೆಂದರೆ ಜನರು ಆಂಡ್ರಾಯ್ಡ್, ವಿಂಡೋಸ್ ಅಥವಾ ಐಒಎಸ್ ಫೋನ್ಗಳನ್ನೇ ಖರೀದಿಸಬೇಕಿದೆ. ಇನ್ನಿತರ ಆಪರೇಟಿಂಗ್ ಸಿಸ್ಟಂಗಳಾದ ಸಿಂಬಿಯನ್, ನೋಕಿಯಾ ಎಸ್40, ಬ್ಲಾಕ್ಬೆರ್ರಿ ಫೋನ್ಗಳಿಗೆ 2016ರ ಡಿಸೆಂಬರ್ ಅಂತ್ಯದಿಂದ ವಾಟ್ಸ್ಆ್ಯಪ್ ಸೇವೆ ಸ್ಥಗಿತಗೊಳ್ಳಲಿದೆ.

ವಾಟ್ಸ್ಆ್ಯಪ್ ಆಂಡ್ರಾಯ್ಡಾ, ವಿಂಡೋಸ್, ಐಒಎಸ್ ಹೊರತುಪಡಿಸದ ಆಪರೇಟಿಂಗ್ ಸಿಸ್ಟಂಗಳಿಗೆ ಸೇವೆಯನ್ನು ಸ್ಥಗಿತಗೊಳಿಸಲಿದೆ ಎನ್ನುವ ಮಾತುಗಳು ಮಾರ್ಚ್ನಿಂದಲೇ ಕೇಳಿಬಂದಿತ್ತು. ಆದರೆ ಇದೀಗ 2016ರ ಡಿಸೆಂಬರ್ನಿಂದ ಸೇವೆ ಸ್ಥಗಿತಗೊಳಿಸುವ ನಿರ್ಧಾರವನ್ನು ವಾಟ್ಸ್ಆ್ಯಪ್ ಪ್ರಕಟಿಸಿದೆ.

ವಾಟ್ಸ್ಆ್ಯಪ್ ಈ ನಿರ್ಧಾರಕ್ಕೆ ಬರಲು ಹೆಚ್ಚಿನ ಜನರು ವಿಂಡೋಸ್, ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂ ಉಳ್ಳ ಮೊಬೈಲ್ಗಳನ್ನೇ ಬಳಸುತ್ತಿರುವುದು ಕಾರಣವಾಗಿದೆ. 2009ರಲ್ಲಿ ವಾಟ್ಸ್ಆ್ಯಪ್ ತನ್ನ ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಬ್ಲಾಕ್ಬೆರ್ರಿ, ಸಿಂಬಿಯನ್ ಆಪರೇಟಿಂಗ್ ಸಿಸ್ಟಂನ ಫೋನ್ಗಳೇ ಅಧಿಕ ಸಂಖ್ಯೆಯಲ್ಲಿದ್ದವು. ಬಳಿಕ ನಾಟಕೀಯವಾಗಿ ಮಾರುಕಟ್ಟೆಯಲ್ಲಿ ಈ ಫೋನ್ಗಳ ಸಂಖ್ಯೆ ಇಳಿಮುಖವಾಗಿತ್ತು. ವಾಟ್ಸ್ಆ್ಯಪ್ ಮುಂದಿನ ದಿನಗಳಲ್ಲಿ ಪರಿಚಯಿಸಲಿರುವ ಹೊಸ ಫೀಚರ್ಗಳನ್ನು ಈ ಆಪರೇಟಿಂಗ್ ಸಿಸ್ಟಂಗಳಿಗೆ ನೀಡಲು ಸಾಧ್ಯವಿಲ್ಲದ ಕಾರಣ ಈ ನಿರ್ಧಾರಕ್ಕೆ ವಾಟ್ಸ್ಆ್ಯಪ್ ಬಂದಿದೆ ಎನ್ನಲಾಗಿದೆ.

2016ರ ಡಿಸೆಂಬರ್ನಿಂದ ವಾಟ್ಸ್ಆ್ಯಪ್ ಸೇವೆಗಳು ಸ್ಥಗಿತಗೊಳ್ಳಲಿರುವ ಫೋನ್ಗಳ ವಿವರ

Nokia Asha 201,

Nokia Asha 205 Chat Edition, Nokia Asha 206, Nokia Asha 208, Nokia Asha 210, Nokia Asha 300, Nokia Asha 301, Nokia Asha 302, Nokia Asha 303, Nokia Asha 305, Nokia Asha 306, Nokia Asha 308, Nokia Asha 309, Nokia Asha 310, Nokia Asha 311, Nokia Asha 515, Nokia Asha 500, Nokia Asha 501, Nokia Asha 502, Nokia Asha 503, Nokia Asha 230, Nokia C3-00, Nokia C3-01, Nokia X2-01, Nokia X3-02, Nokia X2-00, Nokia X7, Nokia E6, Nokia N8, Nokia C6, Nokia C7, Nokia E7, Nokia 500, Nokia 600, Nokia 603, Nokia 700, Nokia 701, Nokia 808, Nokia 5800, Nokia 5530, Nokia 5230, Nokia 5233, Nokia 5235, Nokia N97, Nokia N97 mini, Nokia X6, Nokia X5-01, Nokia C6, Nokia C5-03, Samsung i8910 Omnia HD, Sony Ericsson Satio, Sony Ericsson Vivaz, Sony Ericsson Vivaz Pro, Nokia 5700, Nokia 6110, Nokia 6120, Nokia 6121, Nokia 6124, Nokia 6700, Nokia 6290, Nokia E51, Nokia E63, Nokia E66, Nokia E71, Nokia E90 Communicator, Nokia N76, Nokia N81, Nokia N81 8GB, Nokia N82, Nokia N95, Nokia N95 8GB, Nokia 5320, Nokia 5630, Nokia 5730, Nokia 6210, Nokia 6220, Nokia 6650 fold, Nokia 6710 Navigator, Nokia 6720, Nokia 6730, Nokia 6760 Slide, Nokia 6790 Surge, Nokia C5, Nokia E52, Nokia E55, Nokia E72, Nokia E73, Nokia E75, Nokia E5, Nokia N78, Nokia N79, Nokia N85, Nokia N86 8MP, Nokia N96, Samsung GT-i8510, Samsung GT-I7110, Samsung SGH-L870, Samsung SGH-G810 and Samsung SGH-iNNN.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top