Entertainment

ಅರೆ! ಎನಿದು ಸುದೀಪ್-ರಕ್ಷಿತ್ ಟ್ವೀಟ್ವಾದ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸುದೀಪ್‌ ಮತ್ತು ರಕ್ಷಿತ್‌ ಶೆಟ್ಟಿ ಮಧ್ಯೆ ನಡೆದ ಟ್ವೀಟ್‌ ವಾದ ಹಲವು ವಿಷಯಗಳನ್ನು ಚರ್ಚಿಸಿ, ಅಲ್ಲೇ ತಾರ್ಕಿಕ ಅಂತ್ಯವನ್ನೂ ಕಂಡಿದೆ. ಅಲ್ಲಿಗೆ ಕೆಲ ವಿಷಯಗಳ ಬಗ್ಗೆ ಅವರಿಬ್ಬರಲ್ಲಿ ಬಂದ ಭಿನ್ನಾಭಿಪ್ರಾಯ ಬಿಸಿಬಿಸಿ ವಾದಕ್ಕೆ ತಿರುಗಿ, ಕೊನೆಗೂ ಸುಖಾಂತ್ಯಗೊಂಡಿದೆ.

ಆಗಿದ್ದಿಷ್ಟೇ, ರಕ್ಷಿತ್‌ ಶೆಟ್ಟಿ “ರಾಜರಥ’ ಚಿತ್ರಕ್ಕೆ ಶುಭಕೋರಿ ಟ್ವೀಟ್‌ ಮಾಡಿದ್ದರು. “ಕನ್ನಡ ಚಿತ್ರರಂಗ ರೂಪಾಂತರ (Transformation)ಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ನಾನು ಕೆಲಸ ಮಾಡಲು ಇಷ್ಟಪಡುವ ಅನೂಪ್‌ ಭಂಡಾರಿ ಅವರು ಹೊಸ ಚಿತ್ರ ಮಾಡುತ್ತಿದ್ದಾರೆ, ಶುಭಾಶಯಗಳು’ ಅಂತ ರಕ್ಷಿತ್‌ ಟ್ವೀಟ್‌ ಮಾಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ್‌, “ರೂಪಾಂತರಗೊಳ್ತಿರೋ ಕಾಲಘಟ್ಟ ಅಂದ್ರೇನು, ಇಂಟರೆಸ್ಟಿಂಗ್‌ ಆಗಿದೆ’ ಮರು ಪ್ರಶ್ನೆ ಹಾಕಿದರು. ಅದಕ್ಕೆ ಉತ್ತರಿಸಿದ ರಕ್ಷಿತ್‌, “ದಶಕದ ಹಿಂದೆ ಹೊಸ ಅಲೆ ಚಿತ್ರಗಳಿಗೆ ಅಥವಾ ಸ್ವತಂತ್ರ ಸಿನಿಮಾಗಳಿಗೆ ಇರುವ ಸ್ಕೋಪ್‌ ಕಮ್ಮಿ ಇತ್ತು. ಆದರೆ ಈಗ ಹಾಗಿಲ್ಲ’ ಅಂತ ಸಮರ್ಥನೆ ನೀಡಿದರು. “ಅದಕ್ಕೆ ಕಾಲಘಟ್ಟ ಬದಲಾಗಿದ್ದು ಅಂತ ಹೇಳ್ಳೋದಿಲ್ಲ, ಜನ ಅಂಥ ಸಿನಿಮಾಗಳನ್ನ ಸ್ವೀಕರಿಸೋಕ್ಕೆ (acceptance)ಶುರು ಮಾಡಿದ್ದಾರೆ ಅಂತ ಅರ್ಥ. ನೀವು ಹೇಳ್ತಿರೋ ವಿಷಯಕ್ಕೆ ರೂಪಾಂತರ, ಪದ ಸರಿ ಹೊಂದುತ್ತಿದೆಯಾ?’ ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ರಕ್ಷಿತ್‌, “ರೂಪಾಂತರವಾದ ನಂತರವೇ ಜನ ಸ್ವೀಕರಿಸೋ ಟ್ರೆಂಡ್‌ ಶುರುವಾಗಿರೋದು. ರೂಪಾಂತರ ಅಂದರೆ ಅಂಥ ಬೇರೆ ಥರದ ಸಿನಿಮಾಗಳನ್ನ ಒಪ್ಪಿಕೊಳ್ಳುವುದು, ಸ್ವೀಕರಿಸುವುದು ಅಂತ ಆಗಿರಬಹುದು’ ಅಂತ ಮತ್ತೆ ಉತ್ತರಿಸಿದರು.

ಇದನ್ನು ಮತ್ತೆ ಆಕ್ಷೇಪಿಸಿದ ಸುದೀಪ್‌, “ದಶಕಗಳ ಹಿಂದೆಯೂ ಇಂಥ ಹೊಸ ಅಲೆಯ ಸಿನಿಮಾಗಳು ಬಂದವು, ಹಾಗೇ ಹಲವು ಸ್ಟಾರ್‌ಗಳು ಹುಟ್ಟಿಕೊಂಡಿದ್ದು’ ಅಂತ ಉತ್ತರಿಸಿದರು. “ಜನ ತಮ್ಮನ್ನು ಸ್ವೀಕರಿಸುತ್ತಾರೆ ಅಂತಲೇ ಆ ಸ್ಟಾರ್‌ಗಳು ಹೇಳುತ್ತಿದ್ದರೇ ಹೊರತೂ ರೂಪಾಂತರ ಆಗಿದೆ ಅಂತ ಹೇಳುತ್ತಿರಲಿಲ್ಲ’ ಅಂತಲೂ ಸೇರಿಸಿದರೆ. ಕೊನೆಗೂ ಸೋತ ರಕ್ಷಿತ್‌ ಶೆಟ್ಟಿ “ನಿಜ, ಅದರಲ್ಲಿ ನನಗೂ ಅನುಮಾನವಿಲ್ಲ. ಕನ್ನಡದಲ್ಲಿ ಹೊಸ ಅಲೆಯ ಚಿತ್ರ ಶುರುವಾಗುತ್ತಿದೆ, ಹಾಗೇ ಜನರು ಸ್ವೀಕರಿಸುವ ಟ್ರೆಂಡೂ ಶುರುವಾಗಿದೆ’ ಅಂತ ಉತ್ತರಿಸಿದರು.

ಸ್ವಲ್ಪ ಕಿಚಾಯಿಸಿದಂತೆ ಪ್ರೀತಿಯಿಂದಲೇ ಟ್ವೀಟ್‌ ಮಾಡಿದ ಕಿಚ್ಚ ಸುದೀಪ್‌, “ಸ್ವೀಕರಿಸ್ತಿದ್ದಾರೆ ಅನ್ನೋ ಮಾತು ನಿಮ್ಮ ಬಾಯಲ್ಲೇ ಬಂತಲ್ಲ! ರೂಪಾಂತರ ಅಂದ್ರೆ ಆ ವಾದ ಎಲ್ಲೆಲ್ಲಿಗೋ ಹೋಗುತ್ತೆ. ಒಳ್ಳೇದಾಗಲಿ. ಲವ್‌ ಯೂ’ ಅಂತ ಹೇಳಿದರು. “ಲವ್‌ ಯೂ ಸರ್‌’ ಅಂತ ಹೇಳಿ ರಕ್ಷಿತ್‌ ವಾಗ್ವಾದಕ್ಕೆ ತೆರೆ ಎಳೆದರು.

ರಕ್ಷಿತ್‌ ಶೆಟ್ಟಿ ಮತ್ತು ಸುದೀಪ್‌ ನಡುವಿನ ಸ್ನೇಹ ಬಹಳ ಹಿಂದಿನದು. “ಉಳಿದವರು ಕಂಡಂತೆ’ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಸುದೀಪ್‌, ರಕ್ಷಿತ್‌ಗೆ ಒಂದು ಚಿತ್ರ ನಿರ್ದೇಶಿಸುವಂತೆ ಕೇಳಿದ್ದರು. ಅದಕ್ಕೋಸ್ಕರ ರಕ್ಷಿತ್‌ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷದ ಹೊತ್ತಿಗೆ ಆ ಚಿತ್ರ ಶುರುವಾಗುವ ಲಕ್ಷಣವೂ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top