Kannada Bit News

ಸಿದ್ದರಾಮಯ್ಯರಿಂದ ಬೆಂಗಳೂರಿಗೆ ವರ್ಷದ 365 ದಿನಗಳು ಕೂಡಾ ‘ಮದ್ಯದ ಭಾಗ್ಯ’

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಂಗಳೂರು: ಬೆಂಗಳೂರಿಗರಿಗರಿಗೆ ಮಧ್ಯರಾತ್ರಿ ನಂತರವೂ ಮದ್ಯ ಹೀರುವ ‘ಭಾಗ್ಯ’ ವನ್ನು ಸಿದ್ದರಾಮಯ್ಯ ಸರ್ಕಾರ ಕರುಣಿಸಿದೆ. ಇಲ್ಲಿ ತನಕ ವಾರಾಂತ್ಯದಲ್ಲಿ ಮಾತ್ರ ರಾತ್ರಿ 1 ಗಂಟೆ ತನಕ ಓಪನ್ ಇರುತ್ತಿದ್ದ ಮದ್ಯದಂಗಡಿಗಳು ಇನ್ಮುಂದೆ ವರ್ಷದ 365 ದಿನಗಳು ಕೂಡಾ ತೆರೆದಿರುತ್ತವೆ. ರಾತ್ರಿ 1 ಗಂಟೆವರೆಗೆ ಮದ್ಯದಂಗಡಿಗಳು ಓಪನ್ ಇರುವುದಕ್ಕೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸರು ಕೂಡಾ ಅಪರಾಧ ಪ್ರಕರಣಗಳ ಹೆಚ್ಚಳ, ಭದ್ರತೆ ಒದಗಿಸಲು ಸಿಬ್ಬಂದಿ ಕೊರತೆ ಇದೆ ಎಂದು ವಿರೋಧಿಸಿದ್ದರು. ಆದರೆ, ಅಬಕಾರಿ ಇಲಾಖೆ ಶಿಫಾರಸ್ಸಿಗೆ ಸಿದ್ದರಾಮಯ್ಯ ಅವರು ಸಮ್ಮತಿಸಿರುವುದು ರಾತ್ರಿಪಾಳಿ ಮತ್ತು ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು, ಪ್ರಿಯರಿಗೆ ಖುಷಿ ಕೊಟ್ಟಿದೆ.

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಶಿವಾಜಿನಗರ, ರಿಚ್ಮಂಡ್ ಸರ್ಕಲ್, ಮೆಜೆಸ್ಟಿಕ್, ಗಾಂಧಿನಗರ, ಕಲಾಸಿಪಾಳ್ಯ, ಕೆ.ಆರ್.ಮಾರ್ಕೆಟ್ ಸೇರಿ ನಗರದಲ್ಲಿರುವ ಪಬ್, ಕ್ಲಬ್ ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ಗಳ ಮಾಲೀಕರಿಗೆ ಭರ್ಜರಿ ಲಾಭ ಸಿಗುವ ನಿರೀಕ್ಷೆಯಿದೆ. ರಾತ್ರಿ 1 ಗಂಟೆಯವರೆಗೆ ತೆರೆದಿರುವ ಹೋಟೆಲ್ ಹಾಗೂ ಬಾರ್‌ಗಳು ಭದ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕು. ಅಕ್ಕಪಕ್ಕದಲ್ಲಿ ವಾಸಿಸುತ್ತಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ. ನಗರದಲ್ಲಿ 222 ಹೊಸ ಹೊಯ್ಸಳ ರಸ್ತೆಗೆ ಇಳಿಸಲಾಗಿದೆ. ಪೊಲೀಸ್ ಕಂಟ್ರೋಲ್ ರೂಂ 100ಗೆ ಕರೆ ಬಂದ ತಕ್ಷಣ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ತೆರಳುತ್ತಾರೆ. ಮದ್ಯ ಮಾರಾಟ ಅವಧಿ ವಿಸ್ತರಣೆಗೆ ಅಭ್ಯಂತರವಿಲ್ಲ ಎಂದು ಅಬಕಾರಿ ಇಲಾಖೆಗೆ ತಿಳಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top