News

ಪಾಕಿಸ್ತಾನದ ವಿವಾದಿತ ಮಾಡೆಲ್ ಕಂದೀಲ್ ಬಲೋಚ್ ಹತ್ಯೆ. ಸಾವಿಗೂ ಮುನ್ನ ಭಾರತದ ಪೌರತ್ವ ಬಯಸಿದ್ದಳು

ಬಿಗ್ ಬಾಸ್ ಖ್ಯಾತಿಯ ಪಾಕಿಸ್ತಾನದ ವಿವಾದಿತ ಮಾಡೆಲ್ ಕಂದೀಲ್ ಬಲೋಚ್ ಹತ್ಯೆ

ಮುಲ್ತಾನ್: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಟ್ವಿಟ್ಟರ್ ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಪಾಕಿಸ್ತಾನ ಮಾಡೆಲ್ ಕಂದೀಲ್ ಬಲೋಚ್ ರನ್ನು ಆಕೆಯ ಸಹೋದರನೇ ಹತ್ಯೆ ಮಾಡಿದ್ದಾನೆ.

ಪಾಕಿಸ್ತಾನಿ ರೂಪದರ್ಶಿ ಕಂದೀಲ್ ಬಲೂಚ್ಳನ್ನು ಆಕೆಯ ಅಣ್ಣನೇ ಭಾನುವಾರ ಕೊಲೆಗೈದಿದ್ದ. ಅರೆನಗ್ನ ವಿಡಿಯೋ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಕುಟುಂಬದ ಮಾನ ಹರಾಜು ಮಾಡುತ್ತಿದ್ದಾಳೆ ಎಂದು ಸಿಟ್ಟಿಗೆದ್ದು ಕತ್ತು ಹಿಸುಕಿ ಕೊಲೆ ಗೈದಿದ್ದಾನೆ. ಇದೊಂದು ಮರ್ಯಾದಾ ಹತ್ಯೆ ಎಂದು ಮುಲ್ತಾನ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಸುಲ್ತಾನ್ ಅಜಂ ತಿಳಿಸಿದ್ದರು.

ಬಲೋಚ್ ವಿಡಿಯೋಗಳ ಬಗ್ಗೆ ಅಪಸ್ವರ ಎತ್ತಿದ್ದ ಆಕೆಯ ಸಹೋದರ ಮೂರು ದಿನಗಳ ಹಿಂದೆ ಆಕೆಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಅಧಿಕಾರಿ ಅಜಮ್ ಸುಲ್ತಾನ್ ತಿಳಿಸಿದ್ದಾರೆ.

ತನ್ನ ತವರೂರದ ಮುಲ್ತಾನ್ ನಲ್ಲಿ ಈದ್ ಆಚರಣೆ ಸಂದರ್ಭದಲ್ಲಿ ಆಕೆಯನ್ನು ಕೊಲ್ಲಲಾಗಿದೆ.

ಅಂತರ್ಜಾಲದಲ್ಲಿ ತನ್ನ ವಿಡಿಯೋ ಹಾಗೂ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ತನ್ನ ಸಹೋದರ ತನಗೆ ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಹೀಗಾಗಿ ತನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ಹಾಗೂ ಎಸ್ ಪಿ ಅವರಿಗೆ ಮೂರು ವಾರಗಳ ಹಿಂದೆ ಕಂದೀಲ್ ಬಲೋಚ್ ಪತ್ರ ಬರೆದಿದ್ದರು.

ತನ್ನ ಜೀವಕ್ಕೆ ಅಪಾಯವಿದ್ದು, ಮೊಬೈಲ್ ಗೆ ದೂರವಾಣಿಕರೆ ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದರು.

ಕಳೆದ ವಾರ ಬಿಡುಗಡೆಯಾದ ಆಕೆಯ ‘ಬ್ಯಾನ್’ ಮ್ಯೂಸಿಕ್ ವಿಡಿಯೋ ವೈರಲ್ ಆಗಿದ್ದು, ವಿವಾದದ ಕಿಡಿ ಹೊತ್ತಿಸಿತ್ತು, ಈ ಸಂಬಂಧ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿತ್ತು.

ಸಾವಿಗೂ ಮುನ್ನ ಭಾರತದ ಪೌರತ್ವ ಬಯಸಿದ್ದ ಪಾಕ್ ರೂಪದರ್ಶಿ!

ಕಂದೀಲ್ ಬಲೂಚ್ ತಮ್ಮ ಸಾವಿಗೂ ಕೆಲವು ದಿನಗಳ ಹಿಂದೆ ಪಾಕಿಸ್ತಾನ ತನನ್ನನ್ನು ಯಾವರೀತಿ ನಡೆಸಿಕೊಳ್ಳುತ್ತಿದೆ ಎಂದು ಬರೆದುಕೊಂಡಿದ್ದ ಟ್ವೀಟ್ ಇದೀಗ ಬಯಲಾಗಿದೆ. ಈ ಟ್ವೀಟ್ನಲ್ಲಿ ಪಾಕಿಸ್ತಾನ ನನಗೆ ತುಂಬಾ ನೋವು ನೀಡುತ್ತಿದೆ. ನರೇಂದ್ರ ಮೋದಿ ಅವರೆ ದಯವಿಟ್ಟು ನನಗೆ ಭಾರತೀಯ ಪೌರತ್ವ ನೀಡಿ ಎಂದು ಅಂಗಲಾಚಿಕೊಂಡಿದ್ದಳು.

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲೂ ಕಂದೀಲ್ ಬಲೋಚ್ ಭಾಗವಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top