fbpx
News

ದೈನಂದಿನ ರಾಶಿಫಲ, ಜುಲೈ 17

400x400_MIMAGE352351b5ed18ce65e4fcadb0fe63ca7f

ಮೇಷ :: ಹೊಸ ಯೋಜನೆಗಳನ್ನು ಮತ್ತು ಕಾರ್ಯಗಳನ್ನು ಪ್ರಾರಂಭಿಸಲು ಇಂದು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಏನೇ ಆದರೂ, ಮಧ್ಯಾಹ್ನದ ಬಳಿಕ ಯಶಸ್ಸಿನ ಸಾಧ್ಯತೆಯು ಇನ್ನಷ್ಟು ದಟ್ಟವಾಗಲಿದೆ. ದಿನದ ಪೂರ್ವಾರ್ಧದಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು, ಆದರೆ, ನಿಮ್ಮನ್ನು ನಿಯಂತ್ರಿಸಿಕೊಳ್ಳಿ, ದ್ವಿತೀಯಾರ್ಧವು ಸಮಾಧಾನ ಹಾಗೂ ಸಂತಸದಿಂದ ಕೂಡಿರುತ್ತದೆ. ಮುಂಜಾನೆಯ ತೊಂದರೆಗಳಿಂದ ವಿರಾಮ ಪಡೆಯಲು, ಧ್ಯಾನ ಮತ್ತು ಯೋಗ ಮಾಡಿ. ಇದು ನಿಮಗೆ ದೈರ್ಯ ನೀಡುತ್ತದೆ. ನಿಮ್ಮ ಮಾತು ಮತ್ತು ವರ್ತನೆಯಲ್ಲಿನ ಹಿಡಿತವು ಕಿರಿಕಿರಿ, ಜಗಳ ಮತ್ತು ಕಲಹವನ್ನು ತೊಲಗಿಸಲು ಸಹಕಾರಿಯಾಗುತ್ತದೆ. ನೀವು ಮಾತನಾಡುವ ಮುನ್ನ ಯೋಚಿಸಿ. ನಿಮ್ಮ ಆರೋಗ್ಯದ ಮೇಲೂ ಹೆಚ್ಚು ಗಮನಹರಿಸಬೇಕಾಗುತ್ತದೆ. ಹಾಳುಮೂಳು ತಿಂಡಿಗಳ ಸೇವನೆಯನ್ನು ಆದಷ್ಟು ತಪ್ಪಿಸಿ. ಮುಂಜಾನೆಯ ವೇಳೆ ಕಚೇರಿಯಲ್ಲಿ ನಿಮಗೆ ಉತ್ತಮ ಕೆಲಸದ ವಾತಾವರಣವಿರುವುದಿಲ್ಲ ಆದರೆ, ಮಧ್ಯಾಹ್ನದ ಬಳಿಕ ಎಲ್ಲವೂ ಸುಧಾರಿಸಲ್ಪಡುತ್ತದೆ.

400x400_MIMAGE28ed18d16e36ea9970c7cc1b1e6d5b18ವೃಷಭ :: ಇಂದು ನೀವು ನಿಮ್ಮ ದಿನವನ್ನು ನಿಶ್ಚಿಂತೆಯಿಂದ ಪ್ರಾರಂಭಿಸುವಿರಿ ಆದರೂ,ಇದು ದಿನವಿಡೀ ಸಾಧ್ಯವಾಗಲಾರದು ಎಂಬುದಾಗಿ ಗಣೇಶ ಹೇಳುತ್ತಾರೆ. ಆದ್ದರಿಂದ ಮುಂಜಾನೆಯ ವೇಳೆಗೆ ಗ್ರಹಗತಿಗಳಿಂದ ದೊರೆಯಲ್ಪಡುವ ಅನುಗ್ರಹದ ಗರಿಷ್ಟ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ವಿಹಾರಕ್ಕೆ ತೆರಳಿ. ಇದು ಸಂಜೆಯ ವೇಳೆಗಿನ ‘ಬಿಸಿ’ಯನ್ನು ತಡೆದುಕೊಳ್ಳಲು ಸಹಾಯವಾಗುತ್ತದೆ. ಮಧ್ಯಾಹ್ನದ ಬಳಿಕ ನೀವು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳೊಂದಿಗಿನ ಅರ್ಥರಹಿತ ಚರ್ಚೆ ಹಾಗೂ ವಾಗ್ವಾದಗಳಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಅಸಹನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಲ್ಲಿ ಪರಿಸ್ಥಿತಿಯು ಕಷ್ಟಕರವಾಗಲಿವೆ. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಿಸಿ. ಸಂಜೆಯ ವೇಳೆಗೆ ಸ್ವಲ್ಪ ಅನಾರೋಗ್ಯ ಕಾಡಬಹುದು. ಧ್ಯಾನ ಮತ್ತು ಯೋಗವು ದಿನದ ಶ್ರಮದಾಯಕ ನೋವನ್ನು ತಗ್ಗಿಸುತ್ತದೆ.

400x400_MIMAGEa143e67819b34e4ffc529e1862274dec

ಮಿಥುನ :: ನಿಮ್ಮನ್ನು ಆರೋಗ್ಯಕರ, ಸಂಪದ್ಭರಿತ ಮತ್ತು ಎಲ್ಲಾ ವಿಚಾರಗಳಲ್ಲೂ ವಿವೇಕದಿಂದಿರಿಸುವಂತಹ ದಿನವನ್ನು ಗಣೇಶ ನಿಮಗೆ ದಯಪಾಲಿಸುತ್ತಾರೆ. ಈ ಸಂತಸಭರಿತ ದಿನದ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದುಕೊಳ್ಳಬೇಕು ಮತ್ತು ನಿಮ್ಮ ಸ್ನೇಹಿಕರು ಹಾಗೂ ಪ್ರೀತಿಪಾತ್ರರೊಂದಿಗೆ ಪ್ರವಾಸ ತೆರಳಬಹುದು. ಕಚೇರಿಯಲ್ಲೂ, ವಾತಾವರಣವು ತೊಂದರೆಗಳಿಂದ ಮುಕ್ತವಾಗಿರುತ್ತದೆ ಮತ್ತು ನಿಮ್ಮೊಳಗಿನ ಧನಾತ್ಮಕ ಚೈತನ್ಯವು ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ಉತ್ತೇಜನವನ್ನು ನಿಮಗೆ ನೀಡುತ್ತದೆ. ಸಹೋದ್ಯೋಗಿಗಳೂ ನಿಮಗೆ ಸಹಕಾರ ನೀಡಲಿದ್ದಾರೆ. ಮನೆಯಲ್ಲಿ, ವಾತಾವರಣದಲ್ಲಿನ ಲವಲವಿಕೆಯು ನಿಮ್ಮ ಊಟದ ತಟ್ಟೆಯವರೆಗೂ ಸಾಗುತ್ತದೆ. ನೀವು ಸ್ವಾದಿಷ್ಟ ಭೋಜನ ಸವಿಯುವಿರಿ.

400x400_MIMAGE698903ad8ea2539fe8f1665d2bd0288aಕರ್ಕಾಟಕ :: ಸ್ವಲ್ಪ ಉದರ ವ್ಯಾಧಿಯ ಹೊರತಾಗಿ ಈ ದಿನವು ಉತ್ತಮವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಹೊರಗಡೆ ಎಲ್ಲೂ ತಿನ್ನದಂತೆ ನೋಡಿಕೊಳ್ಳಿ ಇಲ್ಲವಾದಲ್ಲಿ ಸೋಂಕಿಗೆ ಈಡಾಗಬಹುದು. ಆದರೂ, ಮಧ್ಯಾಹ್ನದ ಬಳಿಕ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ಸುಧಾರಿಸಲ್ಪಡುವುದರೊಂದಿಗೆ, ಮುಂಜಾನೆಯ ಚಿಂತೆಗಳಿಂದ ನಿಮಗೆ ವಿಶ್ರಾಂತಿಯನ್ನು ಗ್ರಹಗತಿಗಳು ನೀಡುತ್ತವೆ. ಕಚೇರಿಯಲ್ಲೂ, ನಿಮ್ಮ ಸಹೋದ್ಯೋಗಿಗಳ ಬೆಂಬಲದೊಂದಿಗೆ, ವಾತಾವರಣವು ಸ್ನೇಹಪರವಾಗಿರುತ್ತದೆ. ದಿನದ ದ್ವಿತೀಯಾರ್ಧದಲ್ಲಿ ಅಪೂರ್ಣಗೊಂಡಿರುವ ಕಾರ್ಯಗಳನ್ನು ಮತ್ತು ಯೋಜನೆಗಳನ್ನು ಪೂರ್ಣಗೊಳಿಸಲು ಶಕ್ತರಾಗುವಿರಿ.

400x400_MIMAGE6fa749964e5cf585da5635991abdcb92

ಸಿಂಹ :: ಚಿಕಿತ್ಸೆಗಿಂತ ನಿರೋಧ ಲೇಸು;ಈ ಉಕ್ತಿಯನ್ನು ಅಳವಡಿಸುವಲ್ಲಿ ಇಂದು ನೀವು ಸಫಲರಾಗುತ್ತೀರಿ. ಮಾನಸಿಕ ಅಸ್ಥಿರತೆ, ವೈದ್ಯಕೀಯ ವ್ಯಾಧಿಗಳು ಮತ್ತು ವೈಮನಸ್ಯ ಸಂಬಂಧ ಮುಂತಾದವುಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವಿರಿ. ಮತ್ತು ನೀವು ಮಾಡಬೇಕಾದುದೇನೆಂದರೆ, ಧನಾತ್ಮಕವಾಗಿ ಚಿಂತಿಸಿ, ಆರೋಗ್ಯ ವಿಚಾರಕ್ಕೆ ಸಂಬಂಧಿಸಿದ ನಿರಾತಂಕವನ್ನು ತಪ್ಪಿಸಿ ಮತ್ತು ನಿಮ್ಮ ದುರಾಕ್ರಮಣ ಪ್ರವೃತ್ತಿಯನ್ನು ತೊಲಗಿಸಿ. ನಿಮ್ಮ ಖರ್ಚು ಮತ್ತು ಹೂಡಿಕೆಯ ಮೇಲೆ ನೀವು ಕಣ್ಣಿಟ್ಟಿರಬೇಕಾಗುತ್ತದೆ ಇಲ್ಲವಾದಲ್ಲಿ, ನೀವು ಆರ್ಥಿಕ ನಷ್ಟಕ್ಕೆ ಒಳಗಾಗುವಿರಿ. ಆದರೂ, ಭವಿಷ್ಯದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ದಿನ. ಬೌದ್ಧಿಕ ಚರ್ಚೆ ಮತ್ತು ಮಾತುಕತೆಗಳಿಂದ ದೂರವಿರಿ.

400x400_MIMAGEbe10caab148db629c7c46ed7646a52ea

ಕನ್ಯಾ :: ದಿನದ ಪೂರ್ವಾರ್ಧದಲ್ಲಿ ಗ್ರಹಗತಿಗಳು ನಿಮ್ಮ ಪರವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧಗಳು ವೃದ್ಧಿಗೊಳ್ಳುತ್ತವೆ ಮತ್ತು ಇತರರಿಂದಲೂ ನೀವು ಸಮಾನ ಪ್ರಯೋಜನವನ್ನು ಪಡೆಯುವಿರಿ. ಮದ್ಯಾಹ್ನದ ಬಳಿಕ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ತೊಂದರೆಯುಂಟಾಗುವ ಸಂಭವವಿರುವುದರಿಂದ, ನೀವು ಹೆಚ್ಚು ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ. ಸಂಬಂಧಿಗಳೊಂದಿಗಿನ ವ್ಯಾಜ್ಯವು ಅವರೊಂದಿಗಿನ ಸಂಬಂಧವನ್ನು ಹಾಳುಗೆಡಹುತ್ತದೆ. ಆದ್ದರಿಂದ, ನಿಮ್ಮ ಸ್ಪಷ್ಟ ನಿಲುವನ್ನು ಹೊಂದಲು ಪ್ರಯತ್ನಿಸಿ ಮತ್ತು ನಿಮ್ಮ ಕೋಪದ ಮೇಲೆ ನಿಯಂತ್ರಣವಿರಿಸಿ. ನಿಮ್ಮ ತಾಯಿಯ ಆರೋಗ್ಯ ಚಿಂತೆಯ ಕಾರಣವಾಗಲಿದೆ. ಅದರ ಮೇಲೆ ಗಮನಹರಿಸಿ. ತಿಳಿಯದ ನೀರಿರುವ ಪ್ರದೇಶಗಳಿಂದ ದೂರವಿರಿ.

400x400_MIMAGEfb4c4829d93bd9ac6ba88d9bef39141c

ತುಲಾ :: ಈ ದಿನವು ಉತ್ತಮ ಅಂಶಗಳೊಂದಿಗೆ ಪ್ರಾರಂಭಗೊಳ್ಳಲಾರದು ಆದರೂ, ಮಧ್ಯಾಹ್ನದ ಬಳಿಕ ಪರಿಸ್ಥಿತಿಯು ಸುಧಾರಿಸಲ್ಪಡುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಮಟ್ಟದ ತಗ್ಗುವಿಕೆಯು ಆಕ್ರೋಶ, ಉದ್ವೇಗ ಮತ್ತು ನಕಾರಾತ್ಮಕತೆಗೆ ಹಾದಿ ಮಾಡಿಕೊಡುತ್ತದೆ. ಮತ್ತು ಅವುಗಳನ್ನು ತೊಲಗಿಸಲು ನೀವು ಯೋಗ ಮತ್ತು ಧ್ಯಾನ ಮಾಡಬೇಕಾಗಿದೆ. ಇಂತಹುದೇ ಪರಿಸ್ಥಿತಿ ಮುಂದವರಿದಲ್ಲಿ, ನಿಮ್ಮ ದುರಾಕ್ರಮಣ ಪ್ರವೃತ್ತಿಯು ಹೆಚ್ಚಳಗೊಳ್ಳುತ್ತದೆ ಮತ್ತು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಕಷ್ಟದ ಪರಿಸ್ಥಿತಿ ಉಂಟಾಗುತ್ತದೆ. ಸಂಜೆಯ ವೇಳೆಗೆ, ಮನೆಯಲ್ಲಿ ಸಂತಸಭರಿತ ವಾತಾವರಣವನ್ನು ಸೃಷ್ಟಿಸುವ ಮೂಲಕ ಮುಂಜಾನೆಯ ಬೇಸರವನ್ನು ಸರಿದೂಗಿಸುತ್ತದೆ. ಹೊಸ ಯೋಜನೆ ಅಥವಾ ಕಾರ್ಯಗಳನ್ನು ನೀವು ಪ್ರಾರಂಭಿಸಬಹುದು. ನಿಮ್ಮ ಪ್ರತಿಸ್ಪರ್ಧಿಗಳು ಕೂಡಾ ಸೋಲನ್ನೊಪ್ಪಿಕೊಳ್ಳುತ್ತಾರೆ.

400x400_MIMAGE1e8f3b7959caba4148b21f35be354eb8

ವೃಶ್ಚಿಕ :: ಈ ದಿನವು ನಿಮಗೆ ಸಾಮಾನ್ಯ ದಿನವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಈ ದಿನದ ಎಲ್ಲಾ ಲಾಭಗಳನ್ನು ಪಡೆಯಲು ನೀವು ಹೊಂದಾಣಿಕೆ, ಅರ್ಥೈಸಿಕೊಳ್ಳುವಿಕೆ ಮತ್ತು ದೃಢ ನಿಲುವನ್ನು ಹೊಂದಬೇಕಾಗುತ್ತದೆ. ಈ ನಿಲುವಲ್ಲಿ ನೀವು ಯಶಸ್ಸನ್ನು ಸಾಧಿಸಬೇಕಾದರೆ, ಮತ್ತು ತೃಪ್ತಿ ಮತ್ತು ಸಂತಸವನ್ನು ಅನುಭವಿಸಬೇಕಾದರೆ ನಿಮ್ಮ ಕುಟುಂಬ ಸದಸ್ಯರೊಂದಿಗಿನ ಅರ್ಥಹೀನ ಚರ್ಚೆಗಳನ್ನು ತಪ್ಪಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಮತ್ತು ಕಾಳಜಿವಹಿಸುವ ಅಗತ್ಯವಿದೆ. ಅದರ ಮೇಲೆ ಕಣ್ಣಿಟ್ಟಿರಿ. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನವಿರಲಿ. ಬೆಡಗಿನ ವಸ್ತುಗಳ ಖರೀದಿಯು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಲ್ಲದು. ವಿದ್ಯಾರ್ಥಿಗಳಿಗೆ ಈ ದಿನವು ಅನುಕೂಲಕರವಲ್ಲದ ಕಾರಣ ಕಷ್ಟಕರವೆನಿಸಬಹುದು.

400x400_MIMAGEce047f799c1e991de6bb6be4380c7693

ಧನು :: ತೊಂದರೆಯುಕ್ತ ದಿನವು ಸಂಜೆಯ ವೇಳೆಗೆ ಅನುಕೂಲಕರ ದಿನವಾಗಿ ಪರಿವರ್ತನೆಗೊಳ್ಳುವ ಭರವಸೆಯನ್ನು ಗ್ರಹಗತಿಗಳು ನೀಡುತ್ತವೆ. ವಾಹನ ಚಾಲನೆಯ ವೇಳೆ ವೇಗದಲ್ಲಿ ನಿಯಂತ್ರಣವಿರಲಿ, ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಚೂರಿಯಡಿಗೆ ನುಸುಳುವುದನ್ನು ತಪ್ಪಿಸಿ. ಮನರಂಜನೆಗಾಗಿ ನೀವು ಮಾಡುವ ವೆಚ್ಚವು ಮಿತಿಮೀರಬಹುದು. ಅವುಗಳ ಬಗ್ಗೆ ಗಮನವಿರಲಿ ಇಲ್ಲವಾದಲ್ಲಿ ನಿಮ್ಮ ಬೊಕ್ಕಸ ಖಾಲಿಯಾಗಬಹುದು. ಮನೆಯ ವಾತಾವರಣವು ಪ್ರತಿಕೂಲವಾಗಿರುವ ಸಾಧ್ಯತೆಯಿರುವುದರಿಂದ ವಾಗ್ವಾದ ಮತ್ತು ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ತಾಳ್ಮೆಯಿಂದಿರಲು ಪ್ರಯತ್ನಿಸಿ. ಮಧ್ಯಾಹ್ನದ ಬಳಿಕ, ಪರಿಸ್ಥಿತಿಗಳು ಸುಧಾರಿಸಲ್ಪಡುತ್ತವೆ. ನಿಮ್ಮ ಆರೋಗ್ಯದಲ್ಲೂ ಚೇತರಿಕೆ ಕಂಡುಬರುತ್ತವೆ. ವೈಯಕ್ತಿಕ ನೆಲೆಯಲ್ಲಿ, ನೀವು ಸಂತಸ ಹಾಗೂ ತೃಪ್ತಿಯನ್ನು ಹೊಂದುವಿರಿ.

400x400_MIMAGEf85f76260a795f5301b4b772bf89ea69

ಮಕರ :: ಈ ದಿನವು ವಿಶೇಷವಾಗಿ ವೃತ್ತಿಪರರಿಗೆ ಹಾಗೂ ಉದ್ಯಮಿಗಳಿಗೆ ಫಲಪ್ರದವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲಿನ ವಾತಾವರಣವು ಮುಂಜಾನೆಯ ವೇಳೆ ಲವಲವಿಕೆಯಿಂದಿರುತ್ತದೆ ಮತ್ತು ಇದು ನಿಮ್ಮನ್ನು ಮಧ್ಯಾಹ್ನದವರೆಗೆ ಉಲ್ಲಾಸ ಹಾಗೂ ಉತ್ಸಾಹದಲ್ಲಿರಿಸುತ್ತದೆ. ಮಧ್ಯಾಹ್ನದ ಬಳಿಕ ಸ್ವಲ್ಪ ಅಡೆತಡೆಗಳು ಉಂಟಾಗುವ ಸಾಧ್ಯತೆಯಿದೆ. ಮತ್ತು ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಕಲಹಕ್ಕೆ ಒಳಗಾಗುವಿರಿ ಮತ್ತು ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮ್ಮ ಖರ್ಚುವೆಚ್ಚಗಳನ್ನು ನಿಯಂತ್ರಿಸಿ, ಮಿತಿಮೀರಿದ ವೆಚ್ಚವು ನಿಮ್ಮ ಕಿಸೆಯನ್ನು ತೂತುಮಾಡಬಲ್ಲುದು. ನಿಮಗೆ ಅಪಖ್ಯಾತಿಯನ್ನು ತರಬಲ್ಲ ಪರಿಸ್ಥಿತಿಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ.

400x400_MIMAGE5bfd1bc35a806aecf0e42330679dfbf2

ಕುಂಭ :: ಕುಂಭ ರಾಶಿಯವರಿಗೆ ಇಂದು ಗ್ರಹಗತಿಗಳ ಸಂಪೂರ್ಣ ಅನುಗ್ರಹವಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಫಲಪ್ರದ ಫಲಿತಾಂಶವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆದ್ದರಿಂದ, ಬಡ್ತಿ, ವೇತನ ಹೆಚ್ಚಳ ಮತ್ತು ಕಚೇರಿಯಲ್ಲಿ ಪ್ರಶಂಸೆಯನ್ನು ನಿರೀಕ್ಷಿಸಿ. ನಿಮ್ಮ ಆರೋಗ್ಯವು ದಿನವಿಡೀ ಅತ್ಯುತ್ತಮವಾಗಿರುತ್ತದೆ. ಆದ್ದರಿಂದ, ಸ್ನೇಹಿತರು ಮತ್ತು ಮನೆಮಂದಿಯೊಂದಿಗೆ ಪ್ರವಾಸ ಅಥವಾ ಸಂತಸಭರಿತ ವಿಹಾರದ ಯೋಜನೆ ರೂಪಿಸುವುದು ಉತ್ತಮ ಆಲೋಚನೆ. ಮನೆಯಲ್ಲಿ,ನಿಮ್ಮ ಕುಟುಂಬ ಸದಸ್ಯರು ನಿಮಗೆ ಉತ್ತಮ ಸಾಂಗತ್ಯವನ್ನು ನೀಡುವುದರೊಂದಿಗೆ ಮನೆಯ ಪರಿಸ್ಥಿತಿಗಳು ಸುಗಮ ಹಾಗೂ ಅನುಕೂಲಕರವಾಗಿರುತ್ತದೆ. ನಿಮ್ಮ ಮಕ್ಕಳು ಅವರ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುತ್ತಾರೆ ಮತ್ತು ಇದು ನಿಮ್ಮನ್ನು ತೃಪ್ತಿ ಹಾಗೂ ಸಮಾಧಾನದಲ್ಲಿರಿಸುತ್ತದೆ.

400x400_MIMAGEd3b1d0d49af97eae68d81e2191f2450a

ಮೀನ :: ಬೌದ್ಧಿಕ ಚರ್ಚೆ ಮತ್ತು ಯೋಜನೆಗಳು ಅಥವಾ ಕ್ರಿಯಾತ್ಮಕ ಬರಹಗಳಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಕ್ರಿಯಾತ್ಮಕ ಮತ್ತು ವಿಶ್ಲೇಷಣಾತ್ಮಕ ಅರ್ಹತೆಗಳನ್ನು ಪೋಷಿಸುವ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಯಾವುದೇ ಯೋಜನೆಗಳನ್ನು ಹೊಂದಿದ್ದಲ್ಲಿ, ಅದನ್ನು ಕಾರ್ಯರೂಪಗೊಳಿಸಲು ಇದು ತಕ್ಕುದಾದ ಸಮಯ, ನೀವು ಕೈಗೊಳ್ಳುವ ಯಾವುದೇ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಧನಲಾಭದ ಯೋಗವಿದೆ. ನಿಮ್ಮ ದೈಹಿಕ ಆರೋಗ್ಯ ಮಟ್ಟವು ಕುಗ್ಗಬಹುದು ಆದರೆ, ಮನೆಯಲ್ಲಿನ ಸ್ನೇಹಪರ ಹಾಗೂ ಉತ್ಸಾಹದ ವಾತಾವರಣವು ಶೀಘ್ರ ಚೇತರಿಕೆಯನ್ನು ಕಾಣಲು ಸಹಕಾರಿಯಾಗಬಹುದು. ವಿದೇಶದಲ್ಲಿ ನೆಲೆಸಿರುವ ನಿಮ್ಮ ಸಂಬಂಧಿಗಳು ಮತ್ತು ಪ್ರೀತಿಪಾತ್ರರಿಂದ ಶುಭ ಸುದ್ದಿಗಳನ್ನು ನಿರೀಕ್ಷಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top