News

ವಿಮಾನ ರದ್ದು: ಪ್ರಯಾಣಕ್ಕೆ ಅವಕಾಶ ನೀಡದಿದ್ದರೆ ಪ್ರಯಾಣಿಕರಿಗೆ ಸಿಗಲಿದೆ ದೊಡ್ಡ ಪರಿಹಾರ ಮೊತ್ತ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನೀವು ನಿಮ್ಮ ವಿಮಾನ ಪ್ರಯಾಣಕ್ಕೆ ಬುಕ್‌ ಮಾಡಿದ್ದ ಟಿಕೆಟ್‌ ರದ್ದಾದರೆ ಅಥವಾ ನಿಮ್ಮ ವಿಮಾನ ಹಾರಾಟದದ ಸಮಯ ಎರಡು ತಾಸಿಗೂ ಹೆಚ್ಚು ವಿಳಂಬಗೊಂಡರೆ, ನಿಮಗೆ ಸಿಗಲಿದೆ ದೊಡ್ಡ ಪರಿಹಾರ ಮೊತ್ತ.

ಹೊಸದಿಲ್ಲಿ, ಜು.18: ವಿಮಾನ ರದ್ದು ಅಥವಾ ವಿಮಾನಯಾನ ಸಂಸ್ಥೆಗಳು ಪ್ರಯಾಣಕ್ಕೆ ಅವಕಾಶ ನೀಡದ ಸಂದರ್ಭದಲ್ಲಿ ಇನ್ನು ಪ್ರಯಾಣಿಕರಿಗೆ ದೊಡ್ಡ ಪರಿಹಾರ ಸಿಗಲಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ನೂತನ ಮಾರ್ಗಸೂಚಿ ಅನ್ವಯ ಇದೀಗ ಇಂಥ ಪ್ರಕರಣಗಳು Airlinesಗಳಿಗೆ ದುಬಾರಿಯಾಗಿ ಪರಿಣಮಿಸಲಿವೆ.

ಮುಂದಿನ ಆಗಸ್ಟ್‌ 1ರಿಂದ ಜಾರಿಗೆ ಬರುವ ನಿಯಮಗಳ ಪ್ರಕಾರ, ನಿಮಗೆ ದೇಶೀಯ ವಿಮಾನ ಸಂಸ್ಥೆಗಳು 10,000 ರೂ.ಗಳ ಪರಿಹಾರವನ್ನು ಕೊಡಬೇಕಾಗುತ್ತದೆ. ಅದೇ ರೀತಿ ವಿಮಾನ ಪ್ರಯಾಣದ ಟಿಕೆಟ್‌ ಬುಕ್‌ ಆಗಿರುವ ಹೊರತಾಗಿಯೂ ನಿಮಗೆ ವಿಮಾನ ಏರಲು ಬಿಡದಿದ್ದರೆ ಆ ವಿಮಾನಯಾನ ಸಂಸ್ಥೆಯವರು ನಿಮಗೆ 20,000 ರೂ. ಪರಿಹಾರ ಕೊಡಬೇಕಾಗುತ್ತದೆ. ಇದೀಗ Airlinesಗಳು ಇಂಥ ಎರಡೂ ಪ್ರಕರಣಗಳಲ್ಲಿ ಕೇವಲ 4 ಸಾವಿರ ರೂ.ಪರಿಹಾರ ನೀಡುತ್ತವೆ. Airlines ಸೇರಿದಂತೆ ಎಲ್ಲ ಸಂಬಂಧಪಟ್ಟವರ ಜತೆ ಚರ್ಚೆ ನಡೆಸಿಯೇ ಹೊಸ ನಿಯಮಾವಳಿ ರೂಪಿಸಲಾಗಿದೆ.

ಆದರೆ ಭಾರತೀಯ ವಿಮಾನ ಪ್ರಯಾಣಿಕರ ಸಂಘದ ಸಂಸ್ಥಾಪಕ ಮತ್ತು ಅಧ್ಯಕ್ಷ ಡಿ.ಸುಧಾಕರ ರೆಡ್ಡಿ ಹೇಳುವಂತೆ ಇನ್ನೂ ಕೆಲ ಇತಿಮಿತಿಗಳು ಈ ನಿಯಮಾವಳಿಯಲ್ಲಿದ್ದು, ಅವುಗಳನ್ನು ಸರಿಪಡಿಸುವುದು ಅಗತ್ಯ.

ಹೊಸ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳ ಪ್ರಕಾರ ವಿಮಾನ ಯಾನ ಸಂಸ್ಥೆಗಳು ರದ್ದುಗೊಂಡ ಅಥವಾ ಒಂದು ತಾಸಿಗೂ ಮೀರಿ ಆದರೆ ಎರಡು ತಾಸು ಒಳಗಿನ ವಿಳಂಬಯಾನಕ್ಕೆ ತಮ್ಮ ಪ್ರಯಾಣಿಕರಿಗೆ ಟಿಕೆಟ್ ಹಣ ಪರುಪಾವತಿ ಜೊತೆಗೆ ಕನಿಷ್ಠ 5,000 ರೂ. ಅಥವಾ ಒಂದು ಪ್ರಯಾಣದ ಮೂಲದರ ಹಾಗೂ ಇಂಧನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎರಡು ಗಂಟೆಯವರೆಗಿನ ವಿಳಂಬಕ್ಕೆ ದಂಡದ ಪ್ರಮಾಣ ಕನಿಷ್ಠ 7,500 ರೂಪಾಯಿ ಆಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top