News

Facebook ಇಂದ ಏನು ತಾನೇ ಸಾಧ್ಯ ಅನ್ನೋರಿಗೆ ಇಲ್ಲಿದೆ ತಾಜಾ ಉದಾಹರಣೆ…

ಎಷ್ಟೋ ಸಾರಿ ಪೊಲೀಸ್ ಸ್ಟೇಷನ್ ಗೆ ಹೋಗಿ complaint ಕೊಟ್ಟರು ಸಹ ಸ್ಪಂದಿಸದ ಪೊಲೀಸ್ ಅಧಿಕಾರಿಗಳ ಮದ್ಯೆ ಆದರೆ ಇದಕ್ಕೆ ಅಪವಾದ ಎಂಬಂತೆ ಮೈಸೂರು ನಗರದ ಸಬ್ ಇನ್ಸ್ ಪೆಕ್ಟರ್ ಒಬ್ಬರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದ ಸಮಸ್ಯೆಗೆ ಕೂಡಲೇ ಸ್ಪಂಧಿಸಿದ್ದಾರೆ. ಆ ಮೂಲಕ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಮೂಡಿಸಲು ಹೊರಟಿದ್ದಾರೆ.

ಅಡ್ವೋಕೇಟ್ ಆದಂತಹ ಪಿ.ಜೆ.ರಾಘವೇಂದ್ರ ಅವರ ಕುವೆಂಪು ನಗರದ ಅಪೊಲೋ ಆಸ್ಪತ್ರೆಯ ಬಳಿ ಇರುವ ವೃತ್ತದಲ್ಲಿ ಪಾದಚಾರಿಗಳು ರಸ್ತೆ ದಾಟುವ ಪಟ್ಟೆಯ ಮೇಲೆಯೇ ನಮ್ಮ ಪಾಲಿಕೆಯು ಬೃಹತ್ ಸಿಮೆಂಟ್ ವಿಭಜಕವನ್ನು ನಿರ್ಮಿಸಿದ್ದರಿಂದ ಸಾರ್ವಜನಿಕರು ರಸ್ತೆ ದಾಟಲು ತೊಂದರೆಯಾಗುತ್ತದೆಂದು ಫೇಸ್ ಬುಕ್ ಮೂಲಕ ಚಿತ್ರಸಹಿತ ಸ್ಟೇಟಸ್ ನಲ್ಲಿ ಹಾಕಿದ್ದರು, ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಆ ವಿಭಜಕವನ್ನು ಪಾದಚಾರಿಗಳು ರಸ್ತೆ ದಾಟುವ ಪಟ್ಟೆಯ ಮೇಲಿನಿಂದ ತೆರವುಗೊಳಿಸಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಸಾಮಾನ್ಯವಾಗಿ ಅಧಿಕಾರಿಗಳು ಸಾರ್ವಜನಿಕರ ಕೂಗಿಗೆ ಸ್ಪಂಧಿಸುವುದಿಲ್ಲ ಎಂಬುದು ಆರೋಪ ಮೊದಲಿಂದಲೂ ಇರುವುದು ಸಾಮಾನ್ಯ.ಇಂದು ಬೆಳಿಗ್ಗೆ ಜಯಪ್ರಕಾಶ್ ಅವರಿಗೆ ನಾನು ಕರೆ ಮಾಡಿ ಅಭಿನಂದಿಸಿದೆ.ಪಾಲಿಕೆಯವರು ಮಾಡಬೇಕಾದ ಕೆಲಸವನ್ನು ನೀವು ಮಾಡಿದ್ದೀರಿ ಎಂದು ಕೃತಜ್ಞತೆ ಹೇಳಿದೆ.ಇದೇ ತರಹ ಕುವೆಂಪು ನಗರ ಪೊಲೀಸ್ ಠಾಣೆಯ ಬಳಿ ಉದಯರವಿ ರಸ್ತೆಯಲ್ಲಿ ಮತ್ತು ಕುಕ್ಕರ ಹಳ್ಳಿ ಕೆರೆಯ ಬಳಿಯೂ ಸಹ ಪಾದಚಾರಿಗಳು ರಸ್ತೆ ದಾಡುವ ಪಟ್ಟೆಯ ಮೇಲೆಯೇ ಪಾಲಿಕೆಯು ಬೃಹತ್ ಸಿಮೆಂಟ್ ವಿಭಜಕಗಳನ್ನು ಇಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದೆ. ಇಂದು ಮಧ್ಯಾಹ್ನ 1:30 ಗಂಟೆಗೆ ಕುವೆಂಪು ನಗರ ಪೊಲೀಸ್ ಠಾಣೆಯ ಬಳಿ ಬಂದೊಡನೆ ಆಶ್ಚರ್ಯವಾಗಿತ್ತು ಇದೇ ಸಬ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಅವರು ಉದಯ ರವಿ ರಸ್ತೆಯ ಬಳಿಯೂ ಕರ್ತವ್ಯ ಮೆರೆದು ಪಾದಚಾರಿ ಮಾರ್ಗದ ನಡುವೆ ಇದ್ದ ವಿಭಜಕವನ್ನು ಎತ್ತಿ ಪಕ್ಕದಲ್ಲಿ ಇಟ್ಟು ಜವಾಬ್ದಾರಿ ನಿರ್ವಹಿಸಿದ್ದರು.
ನಂತರ ಕುಕ್ಕರಹಳ್ಳಿ ಕೆರೆ ಬಳಿ ಹೋಗಿ ನೋಡಿದರೆ ಅಲ್ಲಿಯೂ ಕೂಡ ರಸ್ತೆ ದಾಟುವ ಪಟ್ಟೆಯ ಮೇಲಿದ್ದ ಸಿಮೆಂಟ್ ವಿಭಜಕವನ್ನು ಅಲ್ಲಿಂದ ತೆರವುಗೊಳಿಸಿ ಪಾದಚಾರಿಗಳಿಗೆ ನ್ಯಾಯ ಒದಗಿಸಿದ್ದರು ಈ ಸಬ್ ಇನ್ಸ್‌ಪೆಕ್ಟರ್. ಸಾರ್ವಜನಿಕರ ಸಮಸ್ಯೆ ತಕ್ಷಣ ಸ್ಪಂದಿಸಿದ ಸಬ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕಲ್ಲವೇ?

-ಪಿ.ಜೆ.ರಾಘವೇಂದ್ರ ಮೈಸೂರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top