Karnataka

ಕರ್ನಾಟಕ ತಮಿಳುಮಯವಾಗಿದೆ!: ವಾಟಾಳ್ ನಾಗರಾಜ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಂಗಳೂರು: ಪರಭಾಷೆಯವರು ಬೇರೆ ಬೇರೆ ರೀತಿಯಲ್ಲಿ ದಬ್ಬಾಳಿಕೆ, ಹಾನಿ, ಹಾವಳಿ ಮಾಡುತ್ತಿದ್ದರೂ ‍ಕನ್ನಡ ಚಿತ್ರರಂಗದವರೂ, ಚಲನಚಿತ್ರವಾಣಿಜ್ಯ ಮಂಡಳಿಯವರು, ಯಾವುದೆ ಕನ್ನಡ ಸಂಘ ಸಂಸ್ಥೆಗಳು ಬಾಯಿಬಿಡುವುದಿಲ್ಲ. ಆದರೆ ಕನ್ನಡನಾಡಿನ ಜನರು ಹೆಚ್ಚೆತ್ತು ಕೊಳ್ಳಬೇಕಾದ ವಿಚಾರವಾದೆ.

” ಸೂಪರ್‍ ಸ್ಟಾರ್ “ನಿಂದ ಕನ್ನಡಿಗರಿಗೆ, ಕನ್ನಡಕ್ಕೆ ಮತ್ತು ಕನ್ನಡ ಚಿತ್ರರಂಗಕ್ಕೆ ಏನು ಪ್ರಯೋಜನ ? ಪರಭಾಷೆಯ ಚಿತ್ರಗಳನ್ನು ನಾವೇಕೆ ನೋಡಿ ಪ್ರೋತ್ಸಾಹಿಸಬೇಕು. ಕರ್ನಾಟಕದರವನ್ನು, ಕನ್ನಡಿಗ ಎಂಬ ಅಭಿಮಾನವಿದ್ದರೆ, ಕನ್ನಡ ಚಿತ್ರಗಳಲ್ಲಿ ನಟಿಸಲಿ ಆಗ ಆ ಚಿತ್ರಗಳನ್ನು ನೋಡೋಣ. ಮುಂದೆ ಆ ಚಿತ್ರ ಬಿಡುಗಡೆ ಯಾಗುವಾಗ ತಮಿಳಿನಲ್ಲಿ ಪೋ‍ಸ್ಟರಗಳನ್ನು ಹಾಕಿ ಇಡೀ ಬೆಂಗಳೂರನ್ನು ತಮಿಳುಮಯ ಮಾಡುತ್ತಾರೆ. “ಇದನ್ನು ಖಂಡಿಸೋಣ.”ಬೇಡ, ಬೇಡ ಪರಭಾಷೆಯ ಚಿತ್ರ ಬೇಡ.” ಕಬಾಲಿ “ಬೇಡವೇ ಬೇಡ. ನೋಡಲೇ ಬೇಡಿ. ಎಂಬುದು ವಾಟಾಳ್ ನಾಗರಾಜ್ ರವರ ಅಭಿಪ್ರಾಯವಾಗಿದೆ.

ಕರ್ನಾಟಕವನ್ನು ಇವರು ಯಾವ ರೀತಿ ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ಕಬಾಲಿ ಚಿತ್ರದ ಹವಾ ನೋಡಿದರೆ ಇದು ಕರ್ನಾಟಕವೋ ಅಥವಾ ತಮಿಳುನಾಡೋ ಗೊತ್ತಾಗುತ್ತಿಲ್ಲ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಕಬಾಲಿಯ ವಿರುದ್ಧ ಗುಡುಗಿದ್ದಾರೆ.

ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶೌಚಾಲಯ ಬಿಟ್ಟು ಇನ್ನೆಲ್ಲಾ ಕಡೆ ಕಬಾಲಿ ಸಿನಿಮಾ ಹವಾ ಆವರಿಸಿದೆ. ಮಲ್ಟಿಫ್ಲೆಕ್ಸ್ ಮತ್ತು ಮಾಲ್ಗಳಲ್ಲಿ ಟಿಕೆಟ್ಗೆ ಸಾವಿರ ರೂ. ಇದೆ. ಸಾವಿರ ರೂ.ಗೆ ಟಿಕೆಟ್ ಮಾರಾಟ ಮಾಡಲು ನಾವು ಬಿಡಲ್ಲ. ನೂರು ರೂಪಾಯಿಗೆ ಸಿನಿಮಾ ತೋರಿಸಬೇಕು ಎಂದ ಅವರು ರಾಜ್ಯ ಸರ್ಕಾರ ಪರಭಾಷಾ ಚಿತ್ರಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.

ಮುಂದಿನ ವಾರ ಕನ್ನಡ ಚಿತ್ರಗಳ ಉಳಿವಿನ ಬಗ್ಗೆ ಹಾಗೂ ಕಬಾಲಿ ಚಿತ್ರಗಳಂತಹ ಚಿತ್ರಗಳನ್ನು ಹೇಗೆ ಮಾಡಬೇಕು ಅನ್ನುವುದರ ಬಗ್ಗೆ ಚರ್ಚೆ ನಡೆಸುತ್ತೇವೆ. ಕರ್ನಾಟಕದಲ್ಲಿರುವವರೆ ಕಬಾಲಿ ಚಿತ್ರಕ್ಕೆ ಹಣ ಹಾಕಿದ್ದಾರೆ. ಡಬ್ಬಿಂಗ್ ಮತ್ತು ಕಬಾಲಿ ಬಗ್ಗೆ ಶನಿವಾರ ಚಿತ್ರರಂಗದ ಎಲ್ಲಾ ವರ್ಗ ಮತ್ತು ವಾಣಿಜ್ಯ ಮಂಡಳಿಯೊಂದಿಗೆ ಸಭೆ ಮಾಡುತ್ತೇವೆ. ಜೊತೆಗೆ ನಾಳೆ ಬೆಳಿಗ್ಗೆ ಮೈಸೂರು ಬ್ಯಾಂಕ್ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top