Karnataka

ಇಡೀ ಭಾರತಕ್ಕೆ ವ್ಯಾಪಿಸಿದೆ ಥಾಲಿಯ ವೆರೈಟಿ ಆಹಾರ!

ಬಕಾಸುರನ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರ್ತಾರೆ. ಬಕಾಸುರ ಎಂದ ತಕ್ಷಣ ಆತನೊಬ್ಬ ರಾಕ್ಷಸ ಎನ್ನುವ ಆಗಿಲ್ಲ. ಬಕಾಸುರ ಎಂದ್ರೆ ಹೊಟೇಲ್ ನೆನಪಾಗುತ್ತದೆ. ಬಕಾಸುರ ಥಾಲಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ.

ಬಕಾಸುರ ಥಾಲಿ ಎಂದಾಗ ಒಬ್ಬೊಬ್ಬರ ಪ್ರತಿಕ್ರಿಯೆ ಒಂದೊಂದು ರೀತಿ ಇರುತ್ತೆ. ಈ ಬಕಾಸುರ ಥಾಲಿ ಇತ್ತೀಚೆಗೆ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಒಂದು ಬಕಾಸುರ ಥಾಲಿ ಐದರಿಂದ ಆರು ಮಂದಿ ಹೊಟ್ಟೆ ತುಂಬಿಸುವಷ್ಟು ದೊಡ್ಡದಿರುತ್ತದೆ. ಈ ಥಾಲಿಯ ಮೂಲ ಗುಜರಾತಿನ ಸೂರತ್. ನಂತ್ರ ಇಡೀ ಭಾರತಕ್ಕೆ ಥಾಲಿ ವ್ಯಾಪಿಸಿದೆ.ಈ ಥಾಲಿಯ ವಿಶೇಷವೆಂದ್ರೆ ಇದರಲ್ಲಿ 100 ಬಗೆಯ ಆಹಾರವಿರುತ್ತದೆ.

ಬಕಾಸುರ ಥಾಲಿಯಲ್ಲಿ 55 ಬಗೆಯ ಸಬ್ಜಿ, 21 ಬಗೆಯ ಸಿಹಿ ತಿಂಡಿಗಳಿವೆ. ಈ ಥಾಲಿಯ ಬೆಲೆ 1500 ರೂಪಾಯಿ. ಕೆಲವು ಹೊಟೇಲ್ ಗಳಲ್ಲಿ 2000-3000 ರೂಪಾಯಿಗೂ ಥಾಲಿ ಮಾರಾಟವಾಗ್ತಾ ಇದೆ. ಹೊಟೇಲ್ ನಲ್ಲಿ ಸಾಕಷ್ಟು ಸದ್ದು ಮಾಡಿರುವ ಬಕಾಸುರ ಥಾಲಿ ಈಗ ಆನ್ಲೈಗೂ ಲಗ್ಗೆ ಇಟ್ಟಿದೆ. ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಬಕಾಸುರ ಥಾಲಿ ಆರ್ಡರ್ ಮಾಡಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top