Karnataka

ವಿಶಾಲ್‍ರಾಜ್ ನಿರ್ದೇಶನದ ‘22 ಜುಲೈ 1947’ ಕನ್ನಡ ಚಿತ್ರ, ಟ್ರೈಲರ್ ಲಾಂಚ್ ಮಾಡಿದ ಪ್ರಧಾನಿ ಮೋದಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಂತೂ ಮೊಟ್ಟ ಮೊದಲ ಬಾರಿಗೆ ಯಾವುದೇ ಚಿತ್ರರಂಗದಲ್ಲಿ ನಡೆಯದ ಅದ್ಭುತ ಘಟನೆಯೊಂದು ನಮ್ಮ ಕನ್ನಡ ಚಿತ್ರರಂಗದಲ್ಲಿ ನಡೆದಿದೆ. ನಮ್ಮ ದೇಶದ ಪ್ರಧಾನಿ ಮೋದಿ ಅವರು ಕನ್ನಡ ಚಿತ್ರದ ಟ್ರೈಲರ್ ಒಂದನ್ನು ನೋಡಿ ಖುಷಿಪಟ್ಟು, ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ ಅಂದ್ರೆ ಊಹಿಸಿ ನಮ್ಮ ಸ್ಯಾಂಡಲ್ ವುಡ್ ಎಲ್ಲಿಗೋ ಹೋಗ್ತಿದೆ ಅಲ್ವಾ?.

july22nd19474-22-1469168433

© kannada.filmibeat

ವಿಶಾಲ್‍ರಾಜ್ ನಿರ್ದೇಶನದ ‘22 ಜುಲೈ 1947’ ಚಿತ್ರವನ್ನು ನಂಜೇಗೌಡ ನಿರ್ಮಿಸಿದ್ದಾರೆ. ಸಂಗೀತ ಕಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ಸುಧಾರಾಣಿ, ನಂಜೇಗೌಡ, ಶೋಭರಾಜ್, ಲಯ ಕೋಕಿಲ, ಸತೀಶ್ ಮತ್ತಿತರರು ತಾರಾಗಣದಲ್ಲಿರುವ ಈ ಚಿತ್ರದ ಟ್ರೇಲರ್‌ನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಹುಬ್ಬಳ್ಳಿಯ ಸತ್ಯಪ್ಪ ಎಂಬ ವ್ಯಕ್ತಿಯೊಬ್ಬರ ನಿಜ ಜೀವನ ಕಥೆಯಾಧರಿತ ಈ ಚಿತ್ರದಲ್ಲಿ ನಟ ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ನಂಜೇಗೌಡ, ಸುಧಾರಾಣಿ, ಶೋಭರಾಜ್, ಲಯ ಕೋಕಿಲ, ಸತೀಶ್ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.

‘ಬೆಳಗಾಂನ ಡಿಸಿ ಕಛೇರಿಯಲ್ಲಿ ಸತ್ಯಪ್ಪ ಎನ್ನುವವರು ಬೆಳಗ್ಗೆ ಸೂರ್ಯೋದಯ ಆಗೋ ಮುಂಚೆ ಧ್ವಜ ಹಾರಿಸಿ, ಸಂಜೆ ಸೂರ್ಯಾಸ್ತ ಆಗೋ ಸಮಯದಲ್ಲಿ ಧ್ವಜ ಇಳಿಸ್ತಾ ಇದ್ರು’. ಆ ವ್ಯಕ್ತಿಯ ರಾಷ್ಟ್ರಪ್ರೇಮವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ಪ್ರಧಾನಿ ಮೋದಿ ಬ್ಯುಸಿ ಶೆಡ್ಯೂಲ್‌ನಲ್ಲೂ ಬಿಡುವು ಮಾಡಿಕೊಂಡು ತಮ್ಮ ಚಿತ್ರವನ್ನು ಲಾಂಚ್ ಮಾಡಿರುವುದು ಸಮಸ್ತ ಕನ್ನಡಿಗರಿಗೆ ಹಾಗೂ ಸ್ಯಾಂಡಲ್‍ವುಡ್‍ಗೆ ಹೆಮ್ಮೆಯ ವಿಷಯವಾಗಿದೆ ಎಂದು ಚಿತ್ರತಂಡ ಹೇಳಿದೆ. ‘22 ಜುಲೈ 1947’ ಚಿತ್ರ ಶೀಘ್ರದಲ್ಲೇ ರಿಲೀಸ್ ಆಗಲಿದೆ.

Comments

comments

Click to comment

Leave a Reply

Your email address will not be published. Required fields are marked *

To Top