fbpx
News

ಕೋಟ್ಯಾಧಿಪತಿ ಮಗ ಕೂಲಿ ಕೆಲಸ ಮಾಡಿದ…

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಅಂಜದಗಂಡು’ ಸಿನಿಮಾನ ಯಾರು ತಾನೇ ಮರೆಯುತ್ತಾರೆ ಹೇಳಿ. ಆ ಸಿನೆಮಾದಲ್ಲಿ ರವಿಚಂದ್ರನ್ ಅವರ ಶ್ರೀಮಂತ ತಂದೆ ಮಗನಿಗೆ ದುಡ್ಡಿನ ಮಹತ್ವ ತಿಳಿಯಲೆಂದು ಚಿಕ್ಕ ಹಳ್ಳಿಗೆ ಕಳಿಸುತ್ತಾನೆ. ಯಾಕೆ ಇವ್ರು ಬಹಳ ದಿನಗಳ ಹಿಂದೆ ನೋಡಿರೋ ಸಿನೆಮಾದ ಬಗ್ಗೆ ಹೇಳುತ್ತಾ ಇದ್ದರೆ ಅನ್ಕೊಂಡ್ರಾ, ಆದರೆ ಅದೇ ರೀತಿಯ ಘಟನೆಯೊಂದು ಸೂರತ್ ನಲ್ಲಿ ನೆಡೆದಿದೆ.

ಕೋಟ್ಯಾಧಿಪತಿ ತಂದೆಯೊಬ್ಬರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ತನ್ನ ಏಕೈಕ ಮಗನನ್ನು ಶ್ರೀಸಾಮಾನ್ಯನಂತೆ ತಿಂಗಳ ಸಂಬಳಕ್ಕಾಗಿ ದುಡಿಯುವಂತೆ ಕೇರಳಕ್ಕೆ ಕಳುಹಿಸಿದ್ದಾರೆ!! ಆಶ್ಚರ್ಯವಾದರೂ ನೀವು ನಂಬಲೇ ಬೇಕು. ಹೌದು, ಇದು ಅಚ್ಚರಿಯನಿಸಿದರು ನಿಜ. ವಿಶ್ವದ ಸುಮಾರು 71 ದೇಶಗಳಲ್ಲಿ ಕಂಪನಿ ಹೊಂದಿರುವ ಸೂರತ್ ಮೂಲದ ಗುಜರಾತಿ ವಜ್ರ ವ್ಯಾಪಾರಿ ಸಾವಜಿ ಢೋಲಕಿಯ ಅವರು ತಮ್ಮ ಮಗನಾದ ದ್ರವ್ಯ ಢೋಲಕಿಯ (21)ರನ್ನು ತಿಂಗಳ ಸಂಬಳಕ್ಕೆ ದುಡಿಯಲು ಕಳುಹಿಸಿದ್ದಾರೆ.

ಅಮೆರಿಕದಲ್ಲಿ ಎಮ್ಬಿಎ ವ್ಯಾಸಂಗ ಮಾಡುತ್ತಿರುವ ದ್ರವ್ಯ ಈಗ ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿದ್ದಾರೆ. ಆದರೆ ಅವರ ತಂದೆ ರಜಾ ಅವಧಿಯಲ್ಲಿ ಎಲ್ಲಿಯಾದರೂ ಕೆಲಸ ಮಾಡು ಅಂತ ಹೇಳಿ, ಅಪ್ಪನ ಆಶೆಯಾದಂತೆ ದ್ರವ್ಯ ಡೋಲಕಿ 3 ಜೊತೆ ಬಟ್ಟೆ, 7000 ರೂ.ಹಣದೊಂದಿಗೆ ಕೇರಳಕ್ಕೆ ಆಗಮಿಸಿ, ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಯಂತೆಯೇ ಕೂಲಿ ಮಾಡಿ ಕಷ್ಟ ಅರಿತುಕೊಂಡಿದ್ದಾರೆ.

ತಂದೆ ಹೇಳುವಂತೆ “ನಾನು ನನ್ನ ಪುತ್ರನಿಗೆ ಮೂರು ಷರತ್ತುಗಳನ್ನು ವಿಧಿಸಿದ್ದು, ಎಲ್ಲಿಯೂ ಸಹ ನನ್ನ ಹೆಸರು ಬಳಸದೆ, ಫೋನ್ ಕೂಡ ಬಳಕೆ ಮಾಡದೆ ಒಂದೇ ಜಾಗದಲ್ಲಿ ಒಂದು ವಾರಕ್ಕಿಂತ ಹೆಚ್ಚು ದಿನ ಇರದೆ ಬೇರೆ ಬೇರೆ ಕಡೆ ಒಂದು ತಿಂಗಳು ಕೆಲಸ ಮಾಡಿ ಸಂಬಳ ಪಡೆದು ಮರಳಬೇಕು” ಎಂದು ಸಾಮಾನ್ಯ ಜನರ ಕಷ್ಟ, ಬವಣೆ ಅರಿತು ಹಣದ ಮೌಲ್ಯದ ಬಗ್ಗೆ ತಿಳುವಳಿಕೆ ಬರಲಿ ಎಂದು ಈ ರೀತಿ ಮಾಡಿರುವುದಾಗಿ ಹರೆ ಕೃಷ್ಣ ವಜ್ರ ವ್ಯಾಪಾರ ಕಂಪನಿ ಮಾಲಿಕ ಸಾವಜಿ ಢೋಲಕಿಯ ತಿಳಿಸಿದ್ದಾರೆ.

ಮೊದ ಮೊದಲು ಕೆಲಸ ಸಿಗುತ್ತದೆ ಎಂಬ ಹುಮ್ಮಸ್ಸಿನಲ್ಲಿ ಇದ್ದ ದ್ರವ್ಯ ಢೋಲಕಿ 6 ದಿನಗಳಾದರೂ ಕೆಲಸ ಸಿಗದಿದ್ದಾಗ ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡಿ ದಿನಕ್ಕೆ 250 ರುಪಾಯಿ ಬಾಡಿಗೆಯ ಲಾಡ್ಜ್ನಲ್ಲಿ ನೆಲೆಸಿ ಊಟಕ್ಕೆ ಪರದಾಡಿ ಕಡೆಗೂ ಕಷ್ಟ ಅಂದರೆ ಏನೆಂದು ಅರಿತುಕೊಂಡು ಬಳಿಕ ಸೂರತ್ನ ತನ್ನ ಮನೆಗೆ ವಾಪಸಾಗಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top