fbpx
Astrology

ರಾಶಿ ಭವಿಷ್ಯ ಜುಲೈ 24ರ ಮೂಲಕ ನಿಮ್ಮ ಈ ದಿನದ ಭವಿಷ್ಯದ ಒಂದು ಮುನ್ನೋಟ ಪಡೆಯಿರಿ

ಮೇಷ :: ಲಕ್ಷ್ಮೀದೇವಿಯು ತನ್ನ ಅನುಗ್ರಹಪೂರ್ವಕ ಆಶೀರ್ವಾದವನ್ನು ನಿಮ್ಮ ಮೇಲೆ ತೋರಿಸುತ್ತಿದ್ದಾರೆ. ಮತ್ತು ನಿಮಗೆ ಆರ್ಥಿಕ ಲಾಭ ಉಂಟಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಸಾಮಾಜಿಕವಾಗಿ, ನಿಮ್ಮ ಘನತೆ ಮತ್ತು ಗೌರವದಲ್ಲಿ ವೃದ್ಧಿಯಾಗುತ್ತದೆ. ನಿಮ್ಮ ಉದ್ಯಮವೂ ಏಳಿಗೆಯನ್ನು ಕಾಣುತ್ತದೆ. ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಕಾಯುತ್ತಿರುವವರು, ಇನ್ನು ಕಾಯಬೇಕಾಗಿಲ್ಲ. ಅವರಿಗೆ ಕಂಕಣ ಬಲ ಸದ್ಯದಲ್ಲಿಯೇ ಕೂಡಿಬರಲಿದೆ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಆರೋಗ್ಯ ಸಮಸ್ಯೆ ಕಂಡುಬರಬಹುದು. ಹೂಡಿಕೆ ಮಾಡುವ ಮುನ್ನ ಸರಿಯಾಗಿ ಯೋಚಿಸಿ. ನಿಮ್ಮ ಕುಟುಂಬದೊಂದಿಗೆ ಸಂಭಾಷಣೆ ನಡೆಸಲು ಮಾತುಕತೆಯಲ್ಲಿ ತೊಡಗಲು ಸಂಜೆಯು ಉತ್ತಮ ಸಮಯವಲ್ಲ ಇದು ವಿರೋಧಿಗಳನ್ನು ಆಹ್ವಾನಿಸುತ್ತದೆ.

ವೃಷಭ :: ಉದ್ಯಮಕ್ಕೆ ಸಂಬಂಧಿಸಿ ಇಂದು ಅತ್ಯುತ್ತಮ ದಿನ. ಕಚೇರಿಯಲ್ಲಿ ನಿಮ್ಮ ಕಾರ್ಯಗಳಿಗೆ ಶ್ಲಾಘನೆ ಸಿಗುವುದರಿಂದ ನೀವು ಪ್ರಶಂಸೆಯ ಮಳೆಯಲ್ಲಿ ನೆನೆಯಲಿದ್ದೀರಿ. ಇದು ನಿಮಗೆ ಹೆಸರು, ಖ್ಯಾತಿ ಮತ್ತು ಸಾಮಾಜಿಕ ಮನ್ನಣೆಯಲ್ಲಿ ತರಲಿದೆ. ಜೊತೆಗೆ, ಆರ್ಥಿಕ ಲಾಭಗಳೂ ಉಂಟಾಗಲಿವೆ. ನೀವು ನಿಮ್ಮ ಸಂಗಾತಿಯೊಂದಿಗೆ ಸಂತಸಭರಿತ ಸಮಯವನ್ನು ಆನಂದಿಸಬಹುದು. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ. ನಿಸರ್ಗದಲ್ಲಿನ ಸುಂದರ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಸಂಜೆಯನ್ನು ಕಳೆಯಿರಿ.

ಮಿಥುನ :: ಗಣೇಶನ ಸಲಹೆಯಂತೆ, ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳೊಂದಿಗಿನ ಸಹಮತವನ್ನು ಹಾಳುಮಾಡುವುದನ್ನು ತಪ್ಪಿಸಿ. ಇದು ಉತ್ತಮ ಆಲೋಚನೆಯಲ್ಲ. ಸ್ವಲ್ಪ ಹೊಂದಾಣಿಕೆಯಾಗಲು ಪ್ರಯತ್ನಿಸಿ ಮತ್ತು ನೀವು ನಿಮ್ಮಲ್ಲಿ ಮತ್ತು ಇತರರಲ್ಲಿ ಕಾರ್ಯಸ್ನೇಹಿ ವಾತಾವರಣವನ್ನು ನಿರ್ಮಿಸಬಹುದು. ಇಂದು ನೀವು ಆಡಂಬರ ಮತ್ತು ಸುಖಸಾಧನಗಳಲ್ಲಿ ತೊಡಗಬಹುದು. ನಿಮ್ಮ ಖುಷಿಯ ಮನಸ್ಸು ಇಂದು ನಿಮ್ಮ ಮನೆಯ ವಾತಾವರಣವನ್ನು ಶಾಂತಿ ಹಾಗೂ ಸಮಾಧಾನದಲ್ಲಿರಿಸಲಿದೆ. ಅನಿರೀಕ್ಷಿತ ಧನಲಾಭದ ಯೋಗವಿದೆ.

ಕರ್ಕಾಟಕ :: ನಿಮ್ಮ ಅದೃಷ್ಟಕಾರಕ ಗ್ರಹಗಳು ಇಂದು ಚಟುವಟಿಕೆಯಲ್ಲಿ ಇರದೇ ಇರುವುದರಿಂದ ಇಂದು ನೀವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕೆಟ್ಟ ಹೆಸರನ್ನು ತರಬಹುದು. ಕಟುಮಾತುಗಳನ್ನು ಆಡುವ ಮುನ್ನ ನಿಮ್ಮ ನಾಲಗೆಯನ್ನು ನಿಯಂತ್ರಿಸಿ ಇಲ್ಲವಾದಲ್ಲಿ ನೀವು ಬೇರೆಯವರ ಮನಸ್ಸನ್ನು ನೋಯಿಸಬಹುದು. ಕಾರ್ಯಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ತೋರುವ ವರ್ತನೆಯ ರೀತಿಯಿಂದ ನೀವು ಅಸಮಾಧಾನಗೊಳ್ಳಬಹುದು. ಇದು ನಿಮ್ಮ ಸ್ಪರ್ಧಿಗಳು ಮತ್ತು ವರಿಷ್ಠರೊಂದಿಗಿನ ಸಂಘರ್ಷಕ್ಕೆ ಕಾರಣವಾಗಬಹುದು. ಕಚೇರಿಯಲ್ಲಿ ಇಂತಹ ಸನ್ನಿವೇಶಗಳು ನಡೆಯದಂತೆ ತಪ್ಪಿಸಿ. ಸ್ವಸಹಾಯ ಪುಸ್ತಕಗಳ ಓದುವಿಕೆಯು ಸಹಾಯ ನೀಡಬಹುದು.

ಸಿಂಹ :: ನೀವು ಇಂದು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಆನಂದಿಸುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಸಾಮಾಜಿಕ ಕೂಟ ಅಥವಾ ಸಭೆಗೆ ಇಂದು ಉತ್ತಮ ದಿನ. ಇವರೊಂದಿಗೆ ಪ್ರವಾಸ ತೆರಳುವ ಯೋಜನೆಯು ಉತ್ತಮ ಆಲೋಚನೆಯಾಗಿದೆ. ಉದ್ಯಮದಲ್ಲಿ ನೀವು ಪಾಲುದಾರರೊಂದಿಗೆ ಉತ್ತಮ ವ್ಯವಹಾರ ನಡೆಸುವಿರಿ. ದಿನದ ದ್ವಿತೀಯಾರ್ಧದಲ್ಲಿ, ಆರ್ಥಿಕ ವೆಚ್ಚಗಳಿಂದಾಗಿ ನೀವು ಕೆಲವು ಆರ್ಥಿಕ ತೊಂದರೆಗಳನ್ನು ಎದುರಿಸುವಿರಿ. ದೇವರನಾಮ ಜಪದ ಮೂಲಕ ಧಾರ್ಮಿಕ ಸ್ಥಳದಲ್ಲಿ ನೀವು ಶಾಂತಿಯನ್ನು ಕಾಣಬಹುದು. ಯೋಗಾಭ್ಯಾಸವೂ ನಿಮಗೆ ನೆಮ್ಮದಿಯನ್ನು ನೀಡಬಲ್ಲುದು.

ಕನ್ಯಾ :: ತೀವ್ರ ಉದ್ವೇಗ ಮತ್ತು ಭಾವಪರವಶತೆಯಲ್ಲಿ ನೀವು ಇಂದು ಇರುವಿರಿ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇದು ನಿಮ್ಮ ಕಾರ್ಯದಲ್ಲಿ ಗಮನಹರಿಸಲು ಸಹಾಯಕವಾಗಬಹುದು. ನಿಮ್ಮ ನಿಶ್ಚಿಂತೆಯ ವರ್ತನೆ ಮತ್ತು ಯಶಸ್ವೀ ಅಭಿವೃದ್ಧಿಯು ಪ್ರಶಂಸೆಗಳನ್ನು ಪಡೆಯಲು ನಿಮಗೆ ಸಹಾಯ ನೀಡುತ್ತದೆ. ನಿಮ್ಮ ತಾಯಿಯ ಕಡೆಯಿಂದ ಶುಭಸುದ್ದಿಯನ್ನು ನಿರೀಕ್ಷಿಸಬಹುದು. ಇದು ನಿಮ್ಮ ಕುಟುಂಬದ ವಾತಾವರಣವನ್ನು ಶಾಂತಿ ಹಾಗೂ ಸಮಾಧಾನದಲ್ಲಿರಿಸುತ್ತದೆ. ಸಮೀಪದ ಸ್ಥಳಕ್ಕೆ ಪ್ರವಾಸ ತೆರಳಿ ಮತ್ತು ನಿಮ್ಮ ಕುಟುಂಬದೊಂದಿಗೆ ಆನಂದಿಸಿ.

ತುಲಾ :: ಇಂದು ನೀವು ಉತ್ತಮವಾಗಿ ಆಲೋಚಿಸುವಿರಿ ಮತ್ತು ನಿಮ್ಮ ಕ್ರಿಯಾತ್ಮಕ ಕೌಶಲ್ಯವನ್ನು ಅತ್ಯುತ್ತಮ ರೀತಿಯಲ್ಲಿ ಬಳಸು ಶಕ್ತರಾಗುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಏನೇ ಆದರೂ, ನಿಮ್ಮ ಮನಸ್ಸಿನಲ್ಲಿನ ವಿವಿಧ ಆಲೋಚನೆಗಳ ಸುಳಿಯು ನಿಮ್ಮನ್ನು ಗೊಂದಲ ಹಾಗೂ ಒತ್ತಡದಲ್ಲಿರಿಸಲಿದೆ. ಸಾಧ್ಯವಿದ್ದರೆ, ನಿಮ್ಮ ಕಚೇರಿ ನಿಮಿತ್ತ ಪ್ರವಾಸವನ್ನು ಮುಂದೂಡಿ. ಅನಿರೀಕ್ಷಿತ ಖರ್ಚುವೆಚ್ಚಗಳು ಉಂಟಾಗಲಿವೆ. ಸಂಜೆಯ ವೇಳೆಗೆ ನಿಮ್ಮ ಕಾರ್ಯದ ಯಶಸ್ವೀ ಪೂರ್ಣಗೊಳಿಸುವಿಕೆಯನ್ನು ಆನಂದಿಸುವಿರಿ. ಇದು ನಿಮಗೆ ಮನ್ನಣೆಯನ್ನು ನೀಡಲಿದೆ. ಮನೆಯಲ್ಲಿನ ಭೋಜನ ಮತ್ತು ಸಾಮಾನ್ಯ ಸಂವಾದವನ್ನು ಆನಂದಿಸಿ.

ವೃಶ್ಚಿಕ :: ವೈಯಕ್ತಿಕ ಮತ್ತು ಶೈಕ್ಷಣಿಕ ಮಟ್ಟದಲ್ಲಿನ ಪ್ರಯೋಜನಗಳಿಗೆ ಸಂಬಂಧಿಸಿ ಈ ದಿನವು ಉತ್ತಮ ದಿನವಾಗಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಮಯವನ್ನು ಆನಂದಿಸುತ್ತಾರೆ ಮತ್ತು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ರಾಜಿ ಮತ್ತು ಹೊಂದಾಣಿಕೆಯು ಯಶಸ್ವೀ ಸಂಬಂಧಗಳ ಗುಟ್ಟಾಗಿದೆ. ಈ ವರ್ತನೆಯನ್ನು ಅಳವಡಿಸಿ ಮತ್ತು ನೀವು ಇಂದು ಹಲವು ಸಮಸ್ಯೆಗಳನ್ನು ಪರಿಹರಿಸುವಿರಿ. ಹೊಸ ಯೋಜನೆಗಳ ಪ್ರಾರಂಭಕ್ಕೆ ಈ ದಿನ ಅನುಕೂಲಕರವಾಗಿಲ್ಲ. ಬಟ್ಟೆ ಮತ್ತು ಇತರ ವಸ್ತುಗಳ ಶಾಪಿಂಗ್ ವೇಳೆ ನೀವು ಕಳೆಯುವ ಸಮಯವನ್ನು ಆನಂದಿಸುವಿರಿ, ಆದರೆ, ನಿಮ್ಮ ವೆಚ್ಚಗಳು ಮಿತಿಮೀರದಂತೆ ನೋಡಿಕೊಳ್ಳಿ. ಹಣಕಾಸು ಮೂಲಗಳಿಗೆ ಸಿದ್ಧತೆ ನಡೆಸಲು ಇದು ಉತ್ತಮ ಸಮಯ. ನಿರಂತರ ಆಲೋಚನೆಗಳ ದಾಳಿಯಿಂದ ತುಂಬಿ ಹೋಗಿರುವ ನಿಮ್ಮ ಮನಸ್ಸಿಗೆ ಬಿಡುವು ನೀಡಿ.

ಧನು :: ಈ ದಿನವು ನಿಮಗೆ ಸಾಧಾರಣ ದಿನವಾಗಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಉತ್ತಮ ಆರೋಗ್ಯವು ನಿಮ್ಮನ್ನು ಚೈತನ್ಯ ಹಾಗೂ ಉತ್ಸಾಹದಲ್ಲಿರಿಸಬಹುದು. ನಿಮ್ಮ ಕುಟುಂಬ ಸದಸ್ಯರು ಹಾಗೂ ಸಂಬಂಧಿಗಳೊಂದಿಗೆ ನೀವು ಸಣ್ಣ ಪ್ರವಾಸದ ಯೋಜನೆಯನ್ನು ರೂಪಿಸಬಹುದು. ಇದು ನಿಮ್ಮ ಆತ್ಮೀಯರೊಂದಿಗೆ ಮೌಲ್ಯಯುತ ಸಮಯವನ್ನು ಕಳೆಯುವ ಅವಕಾಶವನ್ನು ನೀಡುತ್ತದೆ. ದಿನದ ದ್ವಿತೀಯಾರ್ಧದಲ್ಲಿ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ನೀವು ಹೊಸ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಖರೀದಿಸಬಹುದು. ಇದು ಉಲ್ಲಾಸದಿಂದಿರಲು ಉತ್ತಮ ಹಾದಿ. ಆಸ್ತಿಗೆ ಸಂಬಂಧಿಸಿದ ಕಾನೂನು ದಾಖಲೆಗಳಿಗೆ ಸಹಿ ಹಾಕುವಾಗ ಎಚ್ಚರಿಕೆ ವಹಿಸಿ.

ಮಕರ :: ಅನಿರೀಕ್ಷಿತ ಪರಿಸ್ಥಿತಿಗಳನ್ನು ತಪ್ಪಿಸಲು ಮೌನವಾಗಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಧಾರ್ಮಿಕ ಚಟುವಟಿಕೆ, ಆಧ್ಯಾತ್ಮ ಮತ್ತು ದೈವಿಕತೆಗೆ ನೀವು ಇಂದು ಸಾಕಷ್ಟು ವೆಚ್ಚ ಮಾಡಬಹುದು. ದಿನದ ದ್ವಿತೀಯಾರ್ಧದಲ್ಲಿ ನೀವು ಹೆಚ್ಚು ಉತ್ಸಾಹದಿಂದಿರುವಿರಿ. ಈ ಅದೃಷ್ಟ ಸಮಯದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ ಮತ್ತು ನಿಮ್ಮ ಮನೆಮಂದಿ ಹಾಗೂ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಆನಂದಿಸಿ.

ಕುಂಭ :: ಇಂದು ನೀವು ಆಧ್ಯಾತ್ಮ ಅವತಾರವನ್ನು ಹೊಂದುವಿರಿ ಎಂದು ಗಣೇಶ ಹೇಳುತ್ತಾರೆ. ಋಣಾತ್ಮಕ ಆಲೋಚನೆಗಳನ್ನು ದೂರವಿರಿಸಿ ಮತ್ತು ಧನಾತ್ಮಕ ಆಲೋಚನೆಗಳ ಮೂಲಕ ನಿಮ್ಮ ಮಾನಸಿಕ ಸಮಾನತೆಯನ್ನು ಸಮತೋಲನಗೊಳಿಸಲು ಪ್ರಯತ್ನಿಸಿ. ಇದು ನಿಮ್ಮನ್ನು ದಿನಪೂರ್ತಿ ಚೈತನ್ಯ ಹಾಗೂ ಉತ್ಸಾಹದಿಂದಿರಿಸಬಹುದು. ಸಂಜೆಯ ವೇಳೆ ನೀವು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. ಅನಿರೀಕ್ಷಿತ ಧನಲಾಭ ಉಂಟಾಗಲಿದೆ. ನಿಮ್ಮ ಕುಟುಂಬದೊಂದಿಗೆ ಸಂಜೆಯ ವೇಳೆಯನ್ನು ಆನಂದಿಸಿ.

ಮೀನ :: ಹಣಕಾಸು ವ್ಯವಹಾರ ಅಥವಾ ಸಾಮಾನ್ಯ ಹಣಕಾಸು ಕೊಡುಕೊಳ್ಳುವಿಕೆ ಹಾಗೂ ಕಾನೂನು ಸಂಬಂಧಿ ವಿಚಾರಗಳಲ್ಲಿ ತೊಡಗಿಕೊಳ್ಳುವಾಗ ಎಚ್ಚರಿಕೆ ವಹಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಿಡುಕಿನ ಮನಸ್ಥಿತಿ ಮತ್ತು ಮಾತನ್ನು ನಿಯಂತ್ರಣದಲ್ಲಿರಿಸಿ. ಜೊತೆಗೆ, ಬೇರೊಬ್ಬರ ಕಾರ್ಯದಲ್ಲಿ ಅಡೆತಡೆಗಳನ್ನು ನಿರ್ಮಿಸಲು ಪ್ರಯತ್ನಿಸಬೇಡಿ. ಇಂದು ಅಪಘಾತದ ಸಂಭಾವ್ಯತೆಯಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಸಂಜೆಯ ವೇಳೆ, ನೀವು ನಿಮ್ಮ ಸ್ನೇಹಿತರನ್ನು ಭೇಟಿಯಾಗಿ ಸಂತೋಷವನ್ನು ಹಂಚಿಕೊಳ್ಳಬಹುದು. ಮನೆಯಲ್ಲಿನ ವಾತಾವರಣವು ಶಾಂತಿ ಹಾಗೂ ಉತ್ಸಾಹದಿಂದ ಕೂಡಿರುತ್ತದೆ. ಉತ್ತಮ ದಿನವನ್ನು ಹೊಂದಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top